ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರದ ಸಂಪೂರ್ಣ ಲಾಕ್ ಡೌನ್; ರಸ್ತೆಗಿಳಿದ ಪೊಲೀಸರು

|
Google Oneindia Kannada News

ಬೆಂಗಳೂರು, ಜುಲೈ 05 : ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಕರ್ನಾಟಕ ಸರ್ಕಾರ ಭಾನುವಾರದ ಲಾಕ್ ಡೌನ್ ಘೋಷಣೆ ಮಾಡಿದೆ. ಹಲವು ಜಿಲ್ಲೆಯಲ್ಲಿ ಜನರ ಸಂಚಾರ ವಿರಳವಾಗಿದೆ. ಅಗತ್ಯ ವಸ್ತುಗಳಿಗೆ ಲಾಕ್ ಡೌನ್‌ನಿಂದ ವಿನಾಯಿತಿ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಹಲವು ಬಡಾವಣೆಗಳಲ್ಲಿ ಜನರು ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಲಾಲ್ ಬಾಗ್ ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದ ಜನರನ್ನು ಪೊಲೀಸರು ವಾಪಸ್ ಕಳಿಸಿದರು.

ಸಂಪೂರ್ಣ ಲಾಕ್ ಡೌನ್; ಕೋಲಾರ ಟೊಮೋಟೊ ಮಾರುಕಟ್ಟೆ ಓಪನ್ಸಂಪೂರ್ಣ ಲಾಕ್ ಡೌನ್; ಕೋಲಾರ ಟೊಮೋಟೊ ಮಾರುಕಟ್ಟೆ ಓಪನ್

ಕೊಪ್ಪಳದ ಗವಿಮಠದ ಮೈದಾನದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ಹಲವಾರು ಜನರು ವಾಕಿಂಗ್ ಬಂದು ವ್ಯಾಯಾಮ ಮಾಡುತ್ತಿದ್ದರು. ಕಲಬುರಗಿಯಲ್ಲಿ ಸಂಚಾರ ನಡೆಸುತ್ತಿದ್ದ ಆಟೋಗಳನ್ನು ಪೊಲೀಸರು ತಡೆದು ವಾಪಸ್ ತೆರಳುವಂತೆ ಸೂಚನೆ ನೀಡಿದರು.

ಬೆಂಗಳೂರು; ಮಲ್ಲೇಶ್ವರದಲ್ಲಿ ವ್ಯಾಪಾರಿಗಳಿಂದ ಲಾಕ್ ಡೌನ್ ಬೆಂಗಳೂರು; ಮಲ್ಲೇಶ್ವರದಲ್ಲಿ ವ್ಯಾಪಾರಿಗಳಿಂದ ಲಾಕ್ ಡೌನ್

Complete Lock Down In Karnataka On Sunday Updates

ಗದಗದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜನರು ಯೋಗ, ವಾಯುವಿಹಾರದಲ್ಲಿ ತೊಡಗಿದ್ದರು. ಬೆಂಗಳೂರು ನಗರದಲ್ಲಿ ಹಲವು ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ವಾಹನ ಸಂಚಾರ ಕಡಿಮೆ ಇದೆ. ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರವಿಲ್ಲ.

ಮತ್ತೆ ಲಾಕ್ ಡೌನ್ ಸುಳಿವು; ನಗರ ಬಿಟ್ಟು ಹೊರಟ ಜನರು ಮತ್ತೆ ಲಾಕ್ ಡೌನ್ ಸುಳಿವು; ನಗರ ಬಿಟ್ಟು ಹೊರಟ ಜನರು

ಮೈಸೂರು ನಗರದಲ್ಲಿನ ಓವಲ್ ಕ್ರೀಡಾಂಗಣಕ್ಕೆ ಬೀಗ ಹಾಕಲಾಗಿದೆ. ಆದರೆ, ಜನರು ಬೇರೆ ಕಡೆಯಿಂದ ಬಂದು ಅಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ವ್ಯಾಯಾಮ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಜನರು ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ತೊಡಗಿದ್ದರು.

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಭಾನುವಾರದ ಲಾಕ್ ಡೌನ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರು ಸಂಚಾರ ಸಂಪೂರ್ಣ ಬಂದ್ ಆಗಿದೆ. ಬೆಂಗಳೂರಿನ ಶಿವಾಜಿನಗರ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಿದೆ. ಆದರೆ, ಜನರು ಲಾಕ್ ಡೌನ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.

English summary
Karnataka government announced complete lock down in state on Sunday. Here are the updates of lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X