ಖಾಸಗಿ ಕ್ಷಣ ಸೆರೆ ಹಿಡಿದು ಬ್ಲ್ಯಾಕ್ ಮೇಲ್, ಪತಿ ವಿರುದ್ಧ ದೂರು

Posted By:
Subscribe to Oneindia Kannada

ಕೆಜಿಎಫ್, ಮೇ 11: ಇಲ್ಲಿನ ಸ್ವರ್ಣನಗರದ ಮಹಿಳೆ ರೇಣುಕಾ ಎಂಬುವವರು ತಮ್ಮ ಪತಿ ರೂಪೇಶ್ ಹಣಕ್ಕಾಗಿ ಎಂಥ ಹಿಂಸೆ ನೀಡುತ್ತಿದ್ದ ಎಂದು ರಾಬರ್ಟ್ ಸನ್ ಪೇಟೆ ಪೊಲೀಸರಿಗೆ ದೂರಿನಲ್ಲಿ ವಿವರಿಸಿದ್ದಾರೆ. ನಾನು ಮೂವತ್ತೈದು ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದೀನಿ. ಈಗಿಂದ ಈಗಲೇ ಹತ್ತು ಲಕ್ಷ ರುಪಾಯಿಯನ್ನು ತವರು ಮನೆಯಿಂದ ತಂದುಕೊಡು ಎಂದು ಒತ್ತಡ ಹಾಕಿದ್ದಾನೆ.

ಅಷ್ಟೇ ಅಲ್ಲ, ಒಂದು ವೇಳೆ ಹಣ ತಂದುಕೊಡಲಿಲ್ಲ ಅಂದರೆ ಖಾಸಗಿ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 2006ರಲ್ಲಿ ರೂಪೇಶ್-ರೇಣುಕಾ ವಿವಾಹವಾಗಿದ್ದಾರೆ. ಆ ವೇಳೆ 1.50 ಲಕ್ಷ ರುಪಾಯಿ ಹಾಗೂ 136 ಗ್ರಾಂ ಚಿನ್ನದ ಆಭರಣ ನೀಡಲಾಗಿದೆ.

Complaint register against husband for blackmail in KGF

ಈಚೆಗೆ ವ್ಯವಹಾರದಲ್ಲಿ ರೂಪೇಶ್ ಗೆ ನಷ್ಟವಾಗಿತ್ತು. ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸುತ್ತಿದ್ದ ರೂಪೇಶ್, ಪತ್ನಿಗೆ ಗೊತ್ತಾಗದಂತೆ ಮಲಗುವ ಕೋಣೆಯಲ್ಲಿ ಸಿಸಿಟಿವಿ ಅಳವಡಿಸಿದ್ದ. ಅದರಲ್ಲಿ ಖಾಸಗಿ ಕ್ಷಣಗಳು ಸೆರೆಯಾಗಿದ್ದವು. ತವರಿನಿಂದ ಹಣ ತರದೇ ಇದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದರ ಜತೆಗೆ ಮಕ್ಕಳಿಗೂ ಮಾನಸಿಕ-ದೈಹಿಕ ಹಿಂಸೆ ನೀಡುತ್ತಿದ್ದ. ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯನ್ನು ಮದುವೆ ಆಗುವುದಾಗಿ ಬೆದರಿಸುತ್ತಿದ್ದ ಎಂದು ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kolar district KGF woman registered complaint against her husband Roopesh threat to release her private videos in social media.
Please Wait while comments are loading...