ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ದೂರು

|
Google Oneindia Kannada News

ಬೆಂಗಳೂರು, ಮೇ 27 : ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.

Recommended Video

ರಂಜಾನ್ ಹಬ್ಬದ ಶುಭಾಶಯ ತಿಳಿಸಿದ ನಟ ಸಾಯಿಕುಮಾರ್ | Sai Kumar | Ramzan

ಕಾಂಗ್ರೆಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ನಳಿನ್ ಕುಮಾರ್ ಕಟೀಲ್ ವಿರುದ್ಧ ವಿಧಾನಸೌಧ ಪೊಲೀಸರಿಗೆ ಬುಧವಾರ ದೂರು ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಕೊರೊನಾವೈರಸ್ ಜೀವನದ ಒಂದು ಭಾಗವಾಗಲಿದೆ: ನಳಿನ್ ಕುಮಾರ್ ಕೊರೊನಾವೈರಸ್ ಜೀವನದ ಒಂದು ಭಾಗವಾಗಲಿದೆ: ನಳಿನ್ ಕುಮಾರ್

ನಳಿನ್ ಕುಮಾರ್ ಕಟೀಲ್ ರಾಷ್ಟ್ರೀಯ ವಿಪತ್ತು ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಸಾರ್ವಜನಿಕವಾಗಿ ಸುಳ್ಳು ಹೇಳಿಕೆ ನೀಡಿದ್ದಾರೆ. ಜನರನ್ನು ದಾರಿ ತಪ್ಪಿಸುವ ಮಾಹಿತಿಯನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯಡಿಯೂರಪ್ಪಗೆ ಅಭಿನಂದಿಸಿದ ನಳಿನ್ ಕುಮಾರ್ ಕಟೀಲ್ಯಡಿಯೂರಪ್ಪಗೆ ಅಭಿನಂದಿಸಿದ ನಳಿನ್ ಕುಮಾರ್ ಕಟೀಲ್

ಕೊರೊನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ದೇಶಾದ್ಯಂತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆ ವಿರುದ್ಧ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಐವಾನ್ ಡಿಸೋಜಾ ಮನವಿ ಮಾಡಿದ್ದಾರೆ.

ನಳಿನ್ ಕುಮಾರ್ ಮಾಡಿದ ಜೋಕ್ ಹೇಳಿದ ಸಿದ್ದರಾಮಯ್ಯ!ನಳಿನ್ ಕುಮಾರ್ ಮಾಡಿದ ಜೋಕ್ ಹೇಳಿದ ಸಿದ್ದರಾಮಯ್ಯ!

ಪ್ರಧಾನಿಗಳಿಂದಾಗಿ ಬದುಕಿದ್ದೇವೆ

ಪ್ರಧಾನಿಗಳಿಂದಾಗಿ ಬದುಕಿದ್ದೇವೆ

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, "ಪ್ರಧಾನ ಮಂತ್ರಿಯಿಂದಾಗಿ ನಾವು ಕೋವಿಡ್ - 19 ವೈರಸ್‌ನಿಂದ ಬದುಕಿದ್ದೇವೆ" ಎಂದು ಹೇಳಿದ್ದಾರೆ ಎಂದು ಐವಾನ್ ಡಿಸೋಜಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ಜವಾಬ್ದಾರಿ ಆಗಬೇಕಲ್ಲವೇ?

ಪ್ರಧಾನಿ ಜವಾಬ್ದಾರಿ ಆಗಬೇಕಲ್ಲವೇ?

"ಕೊರೊನಾ ವೈರಸ್ ಸೋಂಕಿನಿಂದಾಗಿ ದೇಶಾದ್ಯಂತ ಸಾವಿರಾರು ಜನರು ಸಾವಿಗೀಡಾಗಿದ್ದಾರೆ. ಈ ಸಾವಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದ ಪ್ರಧಾನಿ ಜವಾಬ್ದಾರಿ ಆಗಬೇಕಲ್ಲವೇ?" ಎಂದು ದೂರಿನಲ್ಲಿ ಪ್ರಶ್ನೆ ಮಾಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆ

"ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನವು ರೊಟೇಶನ್ ಹುದ್ದೆಯಾಗಿದೆ. ಆದರೆ, ಭಾರತ ಕೋವಿಡ್ - 19 ನಿಯಂತ್ರಣದಲ್ಲಿ ಸಾಧಿಸಿದ ಸಾಧನೆಗಾಗಿ ಇದು ಲಭಿಸಿದೆ ಎಂದು ಉದ್ದೇಶಪೂರ್ವಕವಾಗಿ ಪ್ರತಿಬಿಂಬಿಸಿದ್ದಾರೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜನರಿಗೆ ತಪ್ಪು ಮಾಹಿತಿ

ಜನರಿಗೆ ತಪ್ಪು ಮಾಹಿತಿ

"ವಿಶ್ವಸಂಸ್ಥೆ ಮತ್ತು ಅಧೀನ ಸಂಸ್ಥೆಗಳ ನೈಜ ಉದ್ದೇಶವನ್ನು ತಿರುಚುವ ದುರುದ್ದೇಶವನ್ನು ಹೊಂದಿ ಜನರಿಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಆದ್ದರಿಂದ, ನಳಿನ್ ಕುಮಾರ್ ಕಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

English summary
Congress leader and MLC Ivan Dsouza field complaint against Dakshina Kannada MP and Karnataka BJP president Nalin Kumar Kateel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X