ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗ ಪತ್ತೆ ಹಚ್ಚುವ ಕೇಂದ್ರಗಳ ಮಾಹಿತಿ ನೀಡಿ 50,000 ರೂ. ಗೆಲ್ಲಿ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 28: ಕರ್ನಾಟದಲ್ಲಿ ಮಹಿಳೆ ಮತ್ತು ಪುರುಷರ ನಡುವಿನ ಲಿಂಗಾನುಪಾತವನ್ನು ಗಂಭೀರವಾಗಿ ತೆಗೆದುಕೊಂಡಿರುವ ಆರೋಗ್ಯ ಇಲಾಖೆ, ಲಿಂಗ ಪತ್ತೆ ಹಚ್ಚುವ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂಪಾಯಿ ಬಹುಮಾನ ಘೋಷಿಸಿದೆ.

ಕಳೆದ ಒಂದು ವರ್ಷದಿಂದ 14-16 ವಾರಗಳ ಗರ್ಭಿಣಿಯರಿಗೆ ಲಿಂಗ ಪತ್ತೆ ಆಡುವ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳ ಬಗ್ಗೆ ಮಾಹಿತಿ ನೀಡುವಂತೆ ಗರ್ಭಿಣಿಯರಲ್ಲೇ ಕೇಳಿಕೊಳ್ಳಲಾಗಿತ್ತು. ಆದರೆ ಯಾವುದೇ ಪ್ರತಿಕ್ರಿಯೆಗಳು ಬರದ ಹಿನ್ನಲೆಯಲ್ಲಿ 50,000 ರೂಪಾಯಿ ಬಹುಮಾನವನ್ನು ಆರೋಗ್ಯ ಇಲಾಖೆ ಘೋಷಿಸಿದೆ.

Complain against illegal sex determination centres and win Rs 50K

ನೋಂದಣಿಯಾಗದ ಸ್ಕ್ಯಾನಿಂಗ್ ಕೇಂದ್ರಗಳು, ಸಂಚಾರಿ ಯಂತ್ರಗಳು, ಮಧ್ಯವರ್ತಿಗಳು, ಲಿಂಗ ಪತ್ತೆ ಹಚ್ಚುವಂತೆ ಬಲವಂತಪಡಿಸುವ ಸಂಬಂಧಿಕರ ಮೇಲೆ ದೂರು ನೀಡುವಂತೆ ಗರ್ಭಿಣಿಯರಲ್ಲಿ ಆರೋಗ್ಯ ಇಲಾಖೆ ಕೇಳಿಕೊಂಡಿದೆ. ಅದರಲ್ಲೂ ಮುಖ್ಯವಾಗಿ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಈ ರೀತಿ ಲಿಂಗ ಪತ್ತೆಹಚ್ಚುವವರ ಮಾಹಿತಿ ನೀಡುವಂತೆ ಕೇಳಿದೆ.

ಕಳೆದ 14 ವರ್ಷಗಳಲ್ಲಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ಸಂಬಂಧಿಸದಂತೆ ಕೇವಲ 77 ದೂರುಗಳು ಕರ್ನಾಟಕದಲ್ಲಿ ದಾಖಲಾಗಿವೆ. ಇವುಗಳಲ್ಲಿ ಎರಡು ಮಾತ್ರ ಲಿಂಗ ಪತ್ತೆಗೆ ಸಂಬಂಧಿಸಿದಾಗಿವೆ. ಇಲ್ಲಿಯವರೆಗೆ ಯಾರ ಮೇಲೆಯೂ ಕ್ರಮ ಕೈಗೊಂಡಿಲ್ಲ.

ಮೂಲಗಳ ಪ್ರಕಾರ ಹೆಚ್ಚಾಗಿ ಉತ್ತರ ಕರ್ನಾಟದಲ್ಲಿ ಲಿಂಗ ಪತ್ತೆ ಮಾಡಿ ಮಹಾರಾಷ್ಟ್ರದಲ್ಲಿ ಗರ್ಭಪಾತ ಮಾಡಿಸುತ್ತಾರೆ ಇತ್ತೀಚೆಗೆ ಸಾಂಗ್ಲಿಯಲ್ಲಿ 17 ಭ್ರೂಣಗಳು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ದೂರುದಾರರು ಏನು ಮಾಡಬೇಕು?

ಗರ್ಭಿಣಿಯರು ದೂರವಾಣಿ ಸಂಖ್ಯೆ 080-22341996 ಗೆ ಕರೆ ಮಾಡಿ ದೂರು ದಾಖಲಿಸಬಹುದು. ಅಥವಾ www.pcpndtkar.in ಗೆ ಲಾಗ್ ಇನ್ ಆಗಿ ದೂರು ದಾಖಲಿಸಬಹುದು. [email protected] ಗೆ ಇ-ಮೇಲೆ ಕೂಡಾ ಮಾಡಬಹುದು. ದರ ರಹಿತ ಸಹಾಯವಾಣಿ 104ನ್ನೂ ಸಂಪರ್ಕಿಸಬಹುದು.

English summary
Pregnant women’s of Karnataka can now complain against ultrasound scanning centres doing illegal sex determination and win 50,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X