ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗ್ಗೇಶ್‌ ಸೇರಿ ಡಬ್ಬಿಂಗ್ ವಿರೋಧಿಸಿದ ಹಲವರಿಗೆ ಲಕ್ಷಾಂತರ ರೂಪಾಯಿ ದಂಡ

|
Google Oneindia Kannada News

ಬೆಂಗಳೂರು, ಆಗಸ್ಟ್ 31: ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾ ಪ್ರದರ್ಶನವನ್ನು ವಿರೋಧಿಸಿದ್ದ ಕನ್ನಡ ಒಕ್ಕೂಟ, ವಾಣಿಜ್ಯ ಮಂಡಳಿ ಸೇರಿದಂತೆ ಹಲವರಿಗೆ ಲಕ್ಷಾಂತರ ದಂಡ ವಿಧಿಸಲಾಗಿದೆ.

ಭಾರತದ ಸ್ಪರ್ಧಾತ್ಮಕ ಆಯೋಗವು ಕರ್ನಾಟಕ ಸಿನಿಮಾ ವಾಣಿಜ್ಯ ಮಂಡಳಿಗೆ 9,72,943 ರೂಪಾಯಿ ದಂಡವನ್ನು ವಿಧಿಸಿದೆ. ಡಬ್ಬಿಂಗ್ ವಿರೋಧಿಸಿ ಮಾತನಾಡಿದ್ದ ಜಗ್ಗೇಶ್‌ಗೆ 2,71,286 ರೂಪಾಯಿ ದಂಡ ವಿಧಿಸಿದೆ. ರಾಜ್‌ಕುಮಾರ್ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್‌ಗೆ 15,211 ದಂಡ ವಿಧಿಸಿದೆ.

Competition Commission of India fined Dubbing cinema protesters in Karnataka

ಇಷ್ಟೆ ಅಲ್ಲದೆ ಡಬ್ಬಿಂಗ್ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಕನ್ನಡ ಒಕ್ಕೂಟಕ್ಕೆ ಪ್ರತ್ಯೇಕವಾಗಿ ದಂಡ ವಿಧಿಸುವುದಾಗಿ ಹೇಳಿದೆ.

ರಾಜ್ಯೋತ್ಸವದ ವೇಳೆಗೆ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯರಾಜ್ಯೋತ್ಸವದ ವೇಳೆಗೆ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ

Competition Commission of India fined Dubbing cinema protesters in Karnataka

ಸತ್ಯದೇವ್ ಐಪಿಎಸ್‌ ಚಿತ್ರವನ್ನು ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆ ಮಾಡುವನ್ನು ವಿರೋಧಿಸಿ ವಾಟಾಳ್ ನಾಗರಾಜ್, ನಟ ಜಗ್ಗೇಶ್‌, ಸಾ.ರಾ.ಗೋವಿಂದು, ಕರ್ನಾಟಕ ವಾಣಿಜ್ಯ ಮಂಡಳಿ, ಕನ್ನಡ ಒಕ್ಕೂಟ ಹೋರಾಟ ಮಾಡಿತ್ತು. ಇದರ ವಿರುದ್ಧ ಚಿತ್ರದ ದೂರು ನೀಡಿದ್ದರು. ಕನ್ನಡಕ್ಕಾಗಿ ಮಾಡಿದ ಹೋರಾಟವೇ ಈಗ ಇವರಿಗೆ ಸಮಸ್ಯೆ ತಂದೊಡ್ಡಿದೆ.

ಡಬ್ಬಿಂಗ್ ವಿರೋಧಿಸಿದ ಜಗ್ಗೇಶ್‌ ಗೆ ಲಕ್ಷಾಂತರ ರೂಪಾಯಿ ದಂಡ

ಇಷ್ಟೆಲ್ಲಾ ಹೊರಾಟದ ನಂತರವೂ ಇಂದು ಡಬ್ಬಿಂಗ್ ಚಿತ್ರ 'ಕಮಾಂಡೋ' ರಾಜ್ಯದ ಹಲವು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ.

English summary
Competition Commission of India fined actor Jaggesh, Karnataka film chamber, SR Govind , Vatal Nagaraj and Kannada Okkuta for protesting against dubbing movie release in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X