ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂದಿ ಮುಚ್ಚಿದ ಕೆಂಡದಂತಿದೆ ಚಿಕ್ಕಮಗಳೂರು

|
Google Oneindia Kannada News

ಚಿಕ್ಕಮಗಳೂರು, ಡಿ. 29 : ದರ್ಗಾವೊಂದರ ಬಳಿ ಕಿಡಿಗೇಡಿಗಳು ಮಾಂಸದ ತುಂಡುಗಳನ್ನು ಹಾಕಿ ಅಪವಿತ್ರ ಗೊಳಿಸಿದ್ದರಿಂದ ಎರಡು ಕೋಮಿನ ನಡುವೆ ಚಿಕ್ಕಮಗಳೂರಿನಲ್ಲಿ ಶನಿವಾರ ಕಲ್ಲು ತೂರಾಟ ನಡೆದಿದೆ. ಪೊಲೀಸರು ಲಾಠಿ ಪ್ರಹಾರ ನಡೆಸಿ, ಗುಂಪುಗಳನ್ನು ಚದುರಿಸಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಚಿಕ್ಕಮಗಳೂರು ಪಟ್ಟಣದ ಟಿಪ್ಪು ನಗರದ ಷರೀಫ್‌ ಗಲ್ಲಿಯಲ್ಲಿರುವ ದರ್ಗಾದ ಮುಂದೆ ಶುಕ್ರವಾರ ರಾತ್ರಿ ಕಿಡಿ ಗೇಡಿಗಳು ಮಾಂಸದ ತುಂಡುಗಳನ್ನು ಹಾಕಿದ್ದರು. ಶನಿವಾರ ಬೆಳಗ್ಗೆ ಈ ಬಗ್ಗೆ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಆಗಮಿಸಿದ ಒಂದು ಕೋಮಿನವರು ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.

communal clash

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶೇಖರಪ್ಪ, ಶಾಸಕ ಸಿ.ಟಿ. ರವಿ ಮತ್ತು ವಿವಿಧ ಪಕ್ಷಗಳ ಮುಖಂಡರು ಆಕ್ರೋಶಗೊಂಡಿದ್ದ ಒಂದು ಕೋಮಿನ ಜನರನ್ನು ಡಿಸಿ ಕಚೇರಿಗೆ ಸಂಧಾನ ಮಾತುಕತೆಗೆ ಬರುವಂತೆ ಆಹ್ವಾನಿಸಿದರು. ಆದರೆ, ಇದಕ್ಕೆ ಒಪ್ಪದ ಅವರು ಚಿಕ್ಕಮಗಳೂರು ಬಂದ್‌ಗೆ ಕರೆ ನೀಡುತ್ತೇವೆ ಎಂದು, ರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ಪ್ರತಿಭಟಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ನೂರಾರು ಜನರು ಕಿಡಿಗೇಡಿಗಳನ್ನು ಬಂಧಿಸಲು ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿದರು. ಸುಮಾರು 50-60 ಜನರ ಗುಂಪು ಬಸ್‌ ನಿಲ್ದಾಣ, ನಗರದ ವಿವಿಧ ವೃತ್ತಗಳಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಇದರಿಂದ ವರ್ತಕರು ಪ್ರತಿಭಟನೆ ಆರಂಭಿಸಿದರು. ಭಜರಂಗದಳ, ವಿಶ್ವಹಿಂದೂ ಪರಿಷತ್‌ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಆದ್ದರಿಂದ ಎರಡೂ ಕೋಮಿನವರು ಎದುರು ಬದರಾದರು.

ಇದರಿಂದ ಘರ್ಷಣೆ ಹೆಚ್ಚಾಗುವ ಸಾಧ್ಯತೆ ಅರಿತ ಪೊಲೀಸರು ಎರಡೂ ಕಡೆಯವರನ್ನು ಮರಳುವಂತೆ ಸೂಚಿಸಿದರು. ಆದರೆ, ಯಾರೂ ಸ್ಥಳದಿಂದ ತೆರಳದ ಹಿನ್ನಲೆಯಲ್ಲಿ ಬದಲಾಗಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಕಲ್ಲು ತೂರಾಟ, ಲಾಠಿ ಪ್ರಹಾರದ ವೇಳೆ ನಾಲ್ವರು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಜಿಲ್ಲಾಧಿಕಾರಿ ಬಿ.ಎಸ್‌.ಶೇಖರಪ್ಪ, ಪಶ್ಚಿಮ ವಲಯ ಐ.ಜಿ.ಪಿ. ಪ್ರತಾಪ್‌ ರೆಡ್ಡಿ, ಹಾಸನ ಎಸ್ಪಿ ರವಿಚಂದ್ರನ್‌, ಉಡುಪಿ ಎಸ್ಪಿ ಬೋರಲಿಂಗಯ್ಯ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಆದರೆ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಶಾಂತಿ ಕಾಪಾಡಿ ಸಿಎಂ ಮನವಿ : ಗಲಭೆ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಜನರು ಆವೇಶಕ್ಕೆ ಒಳಗಾಗಬಾರದು. ಸಮಾಜ ಛಿದ್ರಗೊಳಿಸುವ ಇಂತಹ ಪ್ರಯತ್ನಗಳು ವಿಫ‌ಲವಾಗಬೇಕು ಎಂದರೆ ಎರಡೂ ಗುಂಪಿನವರು ಸಂಯಮದಿಂದ ವರ್ತಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

English summary
Scores of people and security personnel were injured when the police resorted to caning to defuse a communal flare-up in the Chikmagalur town on Saturday, December 27. Additional police forces and platoons of the Rapid Action Force have been deployed on the main streets of the town. situation under control.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X