ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮೆಡ್‌ಕೆ ಯುಜಿಇಟಿ ಪ್ರವೇಶಪತ್ರ ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರುಮ ಆಗಸ್ಟ್ 31: ಕಾಮೆಡ್‌ಕೆ ಯುಜಿಇಟಿ 2021 ಪರೀಕ್ಷೆಯ ಪ್ರವೇಶ ಪತ್ರ ಪ್ರಕಟವಾಗಿದೆ.

ಕಾಮೆಡ್‌ಕೆ ಯುಜಿಇಟಿ ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನದ ಸದಸ್ಯ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಲಾಗುವ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿದೆ.

ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇದೀಗ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪರೀಕ್ಷೆಯು ಎರಡು ಶಿಫ್ಟ್‌ಗಳಲ್ಲಿ ನಡೆಯಲಿದ್ದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2:30 ರಿಂದ 5:30 ರವರೆಗೆ ನಡೆಯಲಿದೆ. ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಸೆಪ್ಟೆಂಬರ್ 17, 2021 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಮೊದಲು ಪರೀಕ್ಷೆಯನ್ನು ಜೂನ್ 20 ರಂದು ನಡೆಸಲು ನಿರ್ಧರಿಸಲಾಗಿತ್ತು ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು.

COMEDK UGET Admit Card 2021 Released

ಈ ಪರೀಕ್ಷೆಯ ಪ್ರವೇಶ ಪತ್ರವನ್ನು ಆಗಸ್ಟ್ 30ರಂದು ಪ್ರಕಟಿಸಲಾಗಿದ್ದು, ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಸೆಪ್ಟೆಂಬರ್ 13,2021ರ ವರೆಗೆ ಅವಕಾಶ ನೀಡಲಾಗಿದೆ.

ಈ ಪರೀಕ್ಷೆಯನ್ನು ಕರ್ನಾಟಕ ಪ್ರೊಫೇಷನಲ್ ಕಾಲೇಜ್‌ ಪೌಂಡೇಷನ್ ಟ್ರಸ್ಟ್‌ ಮತ್ತು Uni-GAUGE ಮೆಂಬರ್ ಯುನಿವರ್ಸಿಟಿಗಳ ಅಫೀಲಿಯೇಟ್‌ ಕಾಲೇಜುಗಳಲ್ಲಿ ಬಿಇ ಮತ್ತು ಬಿ.ಟೆಕ್‌ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.

ಸದರಿ ಪರೀಕ್ಷೆಗಳನ್ನು ಆನ್‌ಲೈನ್‌ ಮೂಲಕ ಭಾರತದ 150 ನಗರಗಳಾದ್ಯಂತ ನಡೆಸಲಾಗುತ್ತದೆ. ಒಟ್ಟು 400 ಪರೀಕ್ಷಾ ಕೇಂದ್ರಗಳಿರುತ್ತವೆ. ಈ ವರ್ಷ ಸುಮಾರು 80 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಾಧ್ಯತೆ ಇದೆ.

ರಿಜಿಸ್ಟ್ರೇಷನ್‌ ಮತ್ತು ಪರೀಕ್ಷೆಯ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ ಮೂಲಕ ನಡೆಯಲಿವೆ. ವಿದ್ಯಾರ್ಥಿಗಳು www.comedk.org ಅಥವಾ www.unigauge.com ವೆಬ್‌ನಲ್ಲಿ ರಿಜಿಸ್ಟ್ರೇಷನ್‌ ಪಡೆಯಬಹುದು.

ಕಾಮೆಡ್‌-ಕೆ - Uni-GAUGE, ಭಾರತದಲ್ಲಿ ಎರಡನೇ ಅತಿದೊಡ್ಡ ಬಹು-ವಿವಿಗಳ ಖಾಸಗಿ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಆಗಿದೆ. 180 ಶಿಕ್ಷಣ ಸಂಸ್ಥೆಗಳು ಮತ್ತು 30 ಕ್ಕೂ ಹೆಚ್ಚು ವಿವಿಗಳು ಈ ಪರೀಕ್ಷೆಯ ಸ್ಕೋರ್‌ ಅನ್ನು ಪ್ರವೇಶಾತಿಗೆ ಪರಿಗಣಿಸುತ್ತವೆ. ಕರ್ನಾಟಕದ 150 ಇಂಜಿನಿಯರಿಂಗ್ ಕಾಲೇಜುಗಳಲ್ಲಿ 20 ಸಾವಿರ ಇಂಜಿನಿಯರಿಂಗ್‌ ಸೀಟುಗಳನ್ನು ಕಾಮೆಡ್‌ಕೆ ಪ್ರವೇಶ ಪರೀಕ್ಷೆ ಸ್ಕೋರ್‌ ಮೂಲಕ ನೀಡಲಾಗುತ್ತದೆ.

ಇನ್ನು ಕೋವಿಡ್-9 ಕಾರಣ ಈ ವರ್ಷ ಇನ್ನಷ್ಟು ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಪರೀಕ್ಷೆಗೆ ಕೈಗೊಳ್ಳಲಾಗಿದೆ ಎಂದು ಕಾಮೆಡ್‌ಕೆ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ.ಎಸ್.ಕುಮಾರ್ ತಿಳಿಸಿದ್ದಾರೆ.

ಕಾಮೆಡ್‌ಕೆ ಯುಜಿಇಟಿ 2021 ಪರೀಕ್ಷೆಯನ್ನು ಸೆಪ್ಟೆಂಬರ್ 14,2021ರಂದು ವಿವಿಧ ಕೇಂದ್ರಗಳಲ್ಲಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಕಾಮೆಡ್‌ಕೆ ಯುಜಿಇಟಿ 2021 ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ?:

ಹಂತ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://www.comedk.org/ ಗೆ ಭೇಟಿ ನೀಡಿ. ಹಂತ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಪ್ರವೇಶ ಪತ್ರದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಹಂತ 3: ಇನ್ನೊಂದು ಪುಟಕ್ಕೆ ಹೋಗುವಿರಿ
ಹಂತ 4: ಅಲ್ಲಿ ನಿಮ್ಮ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿ

ಹಂತ 5: ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಿರುತ್ತದೆ.

ಪರೀಕ್ಷಾ ಮಾದರಿ : COMEDK UGET-2021 ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಇದಾಗಿದ್ದು, ಆನ್‌ಲೈನ್ ಮೋಡ್‌ನಲ್ಲಿ ಮಾತ್ರ ನಡೆಸಲಾಗುವುದು ಮತ್ತು ಕಾಮೆಡ್‌ಕೆ ನ ಸದಸ್ಯ ಸಂಸ್ಥೆಗಳಲ್ಲಿ ಬಿಇ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಯಸುವ ಎಲ್ಲಾ ಅಭ್ಯರ್ಥಿಗಳಿಗೆ ಕಡ್ಡಾಯವಾಗಿದೆ.

ಪ್ರವೇಶ ಪರೀಕ್ಷೆಯು 10+2 /11 ನೇ ಮತ್ತು 12 ನೇ ಎಸ್‌ಟಿಡಿ / 1 ನೇ ಮತ್ತು 2 ನೇ ಪಿಯುಸಿಯ ಪ್ರಸ್ತುತ ಪಠ್ಯಕ್ರಮವನ್ನು ಆಧರಿಸಿರುತ್ತದೆ. 180 ಬಹು ಆಯ್ಕೆ ಪ್ರಶ್ನೆಗಳು ಅಂದರೆ ಪ್ರತಿ ವಿಷಯಕ್ಕೆ 60 ಪ್ರಶ್ನೆಗಳು-ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಇರುತ್ತದೆ. ಒಟ್ಟಾರೆ 3 ಗಂಟೆ ಅವಧಿಯ ಪರೀಕ್ಷೆ ಇದಾಗಿದೆ.

Recommended Video

ಕಿತ್ತಾಡ್ಕೊಂಡು ಧೋನಿಯನ್ನು ಸ್ವಿಮ್ಮಿಂಗ್ ಪೂಲ್ ಗೆ ತಳ್ಳಿದ ರೈನಾ ವಿಡಿಯೋ ವೈರಲ್ | Oneindia Kannada

English summary
The Consortium of Medical, Engineering and Dental Colleges of Karnataka (COMEDK) has released the admit cards for Under Graduate Entrance Test 2021 (UGET – 2021) on the official website comedk.org —on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X