ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮೆಡ್‌-ಕೆ ಪರೀಕ್ಷೆಯಲ್ಲಿ ಕನ್ನಡಿಗರದ್ದೇ ಮೇಲುಗೈ

|
Google Oneindia Kannada News

ಬೆಂಗಳೂರು, ಮೇ 28 : ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕಾಮೆಡ್‌-ಕೆ ನಡೆಸಿದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಮೊದಲ 10 ಸ್ಥಾನಗಳ ಪೈಕಿ ಏಳು ಸ್ಥಾನಗಳನ್ನು ಬೆಂಗಳೂರಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದು, ಮೂರು ಸ್ಥಾನಗಳು ಹೊರ ರಾಜ್ಯದ ವಿದ್ಯಾರ್ಥಿಗಳ ಪಾಲಾಗಿವೆ.

ಕರ್ನಾಟಕ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಸಂಘ (ಕಾಮೆಡ್‌-ಕೆ) ಶುಕ್ರವಾರ ಫಲಿತಾಂಶ ಪ್ರಕಟಿಸಿದೆ. https://www.comedk.org/ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. [ಸೀಟು ಹಂಚಿಕೆ, ಸರ್ಕಾರಕ್ಕೆ ಕೈಕೊಟ್ಟ ಕಾಮೆಡ್ ಕೆ]

comedk

ಸುಮಾರು 55, 680 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ಇವರಲ್ಲಿ ಬೆಂಗಳೂರು ಮೂಲದ ಅಧೋಕ್ಷಜ ಎಂ. ಮಧ್ವರಾಜ್ ಅವರು 180ಕ್ಕೆ 170 ಅಂಕಗಳನ್ನು ಪಡೆದು ಮೊದಲ ಸ್ಥಾನಗಳಿಸಿದ್ದಾರೆ. [2016ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ]

ಮೊದಲ ಟಾಪ್ 10 ಸ್ಥಾನಗಳ ಪೈಕಿ ಮೂರನೇ ಸ್ಥಾನ ತೆಲಂಗಾಣದ ವಿದ್ಯಾರ್ಥಿ ಪಾಲಾಗಿದೆ. 4 ಮತ್ತು 6 ನೇ ಸ್ಥಾನ ಆಂಧ್ರಪ್ರದೇಶದ ವಿದ್ಯಾರ್ಥಿಗಳ ಪಾಲಾಗಿದೆ. ಉಳಿದ 7 ಸ್ಥಾನಗಳನ್ನು ಬೆಂಗಳೂರಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಮೊದಲ 100 ಸ್ಥಾನಗಳಲ್ಲಿ ಪಡೆದವರಲ್ಲಿ 56 ವಿದ್ಯಾರ್ಥಿಗಳು ಕರ್ನಾಟಕದವರು. ಮೊದಲ 1000 ಸ್ಥಾನಗಳಲ್ಲಿ 417 ಜನ ರಾಜ್ಯದ ವಿದ್ಯಾರ್ಥಿಗಳಿದ್ದಾರೆ.

ಟಾಪ್ 2 ಸ್ಥಾನದಲ್ಲಿರುವ ಕನ್ನಡಿಗರು

* ಆಧೋಕ್ಷ ವಿ.ಮಧ್ವರಾಜ್ - ಮೊದಲ ಸ್ಥಾನ [170/180]
* ರಾಹುಲ್.ಆರ್ - ಎರಡನೇ ಸ್ಥಾನ [168/180]

English summary
Bengaluru students have bagged the top 2 ranks in ComedK's UGET for admission to engineering colleges in the Karnataka this year. Seven of the top 10 ranker's are from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X