ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲೇಜು, ವಿಶ್ವವಿದ್ಯಾಲಯಗಳು ನವೆಂಬರ್ 2ರಿಂದ ಪ್ರಾರಂಭ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ರಾಜ್ಯದಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ನವೆಂಬರ್ 2ರಿಂದ ಹಂತ ಹಂತವಾಗಿ ತರಗತಿಗಳನ್ನು ಆರಂಭಿಸುವ ಸಾಧ್ಯತೆ ಇದೆ. ಈ ಸಂಬಂಧ ಕಾಲೇಜುಗಳ ಕಾರ್ಯ ಚಟುವಟಿಕೆಯ ವಿಧಾನಗಳ ಬಗ್ಗೆ ವಿವಿಧ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳೊಂದಿಗೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಂಗಳ ಆರಂಭದಲ್ಲಿ ಸಭೆ ನಡೆಸಿದ್ದರು.

ಆನ್‌ಲೈನ್ ಪರೀಕ್ಷೆಗಳ ಬಗ್ಗೆ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲು ಕಾಲೇಜುಗಳನ್ನು ಮರು ಆರಂಭಿಸುವ ಪ್ರಸ್ತಾವವನ್ನು ಪರಿಗಣಿಸುತ್ತಿರುವುದಾಗಿ ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಶಾಲಾ-ಕಾಲೇಜುಗಳ ಆರಂಭದ ವಿಚಾರದಲ್ಲಿ ಆತುರ ಇಲ್ಲ: ಶ್ರೀರಾಮುಲುಶಾಲಾ-ಕಾಲೇಜುಗಳ ಆರಂಭದ ವಿಚಾರದಲ್ಲಿ ಆತುರ ಇಲ್ಲ: ಶ್ರೀರಾಮುಲು

ಆದರೆ ಕಾಲೇಜುಗಳಲ್ಲಿ ಕಡ್ಡಾಯ ತರಗತಿಗಳು ನಡೆಯುವುದಿಲ್ಲ. ವಿದ್ಯಾರ್ಥಿಗಳು ಸ್ವಯಂ ಆಸಕ್ತಿಯಿಂದ ಬೇಕಾದರೆ ತರಗತಿಗಳಿಗೆ ಹಾಜರಾಗಬಹುದು. ವಿದ್ಯಾರ್ಥಿಗಳು ಖುದ್ದಾಗಿ ತರಗತಿಗಳಿಗೆ ಹಾಜರಾಗುವಂತೆ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯ ಬಲವಂತ ಮಾಡುವಂತಿಲ್ಲ. ವಿದ್ಯಾರ್ಥಿಗಳ ಹಿತಾಸಕ್ತಿ ಹಾಗೂ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುವುದು ಮುಖ್ಯವಾಗಿರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ವಿಧಾನ ರೂಪಿಸಲಾಗುವುದು ಎಂದು ಅಧಿಕಾರಿಗಳ ಮೂಲಗಳು ಹೇಳಿರುವುದಾಗಿ 'ದಿ ಹಿಂದೂ' ವರದಿ ಮಾಡಿದೆ. ಮುಂದೆ ಓದಿ.

ಒಪ್ಪಿಗೆ ಪತ್ರ ಸಲ್ಲಿಕೆ

ಒಪ್ಪಿಗೆ ಪತ್ರ ಸಲ್ಲಿಕೆ

ನವೆಂಬರ್ 2ರ ಬಳಿಕ ತರಗತಿಗಳಿಗೆ ಹಾಜರಾಗುವ ಬಯಕೆ ಹೊಂದಿದ್ದರೆ, ಅದಕ್ಕೆ ಸಂಬಂಧಿಸಿದಂತೆ ಪೋಷಕರ ಒಪ್ಪಿಗೆ ಪತ್ರವನ್ನು ಸಲ್ಲಿಸುವಂತೆ ಈಗಾಗಲೇ ಅನೇಕ ಕಾಲೇಜುಗಳು ವಿದ್ಯಾರ್ಥಿಗಳಿಗೆ ಸೂಚನೆ ನೀಡಲು ಆರಂಭಿಸಿವೆ.

ಕೋವಿಡ್ ಹೆಚ್ಚಾಗುವ ಭೀತಿ

ಕೋವಿಡ್ ಹೆಚ್ಚಾಗುವ ಭೀತಿ

ಆದರೆ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ವಿಶ್ವವಿದ್ಯಾಲಯಗಳೂ ಪಠ್ಯ ಚಟುವಟಿಕೆ ಆರಂಭಿಸುವುದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯದ ಉಪ ಕುಲಪತಿಯೊಬ್ಬರು, ತಮ್ಮ ಸಹೋದ್ಯೋಗಿಗಳ ಅಭಿಪ್ರಾಯ ಮುಂದಿಟ್ಟಿದ್ದು, ಈ ನಿರ್ಧಾರದ ಪರವಾಗಿ ತಾವು ಒಲವು ಹೊಂದಿಲ್ಲ ಎಂದು ತಿಳಿಸಿದರು.

ಶಾಲಾ-ಕಾಲೇಜು ಪ್ರಾರಂಭದ ಬಗ್ಗೆ ಯಾವುದೇ ನಿರ್ಧಾರ‌ ಕೈಗೊಂಡಿಲ್ಲ: ಸುರೇಶ್ ಕುಮಾರ್!ಶಾಲಾ-ಕಾಲೇಜು ಪ್ರಾರಂಭದ ಬಗ್ಗೆ ಯಾವುದೇ ನಿರ್ಧಾರ‌ ಕೈಗೊಂಡಿಲ್ಲ: ಸುರೇಶ್ ಕುಮಾರ್!

'ನಾವು ಈಗಷ್ಟೇ ನಮ್ಮ ಅಂತಿಮ ವರ್ಷದ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದೇವೆ. ಫಲಿತಾಂಶಗಳನ್ನು ಪ್ರಕಟಿಸಲು ಮತ್ತು ಪಿಜಿ ಕೋರ್ಸ್‌ಗಳ ಪ್ರವೇಶಾತಿಯನ್ನು ಮುಗಿಸಲು ಇನ್ನೊಂದು ತಿಂಗಳು ಬೇಕಾಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ನಾವು ಕಾಲೇಜುಗಳನ್ನು ತೆರೆದರೆ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎಂಬುದು ನಮ್ಮ ಚಿಂತೆಯಾಗಿದೆ' ಎಂದು ಅವರು ಹೇಳಿದ್ದಾರೆ.

ಪರೀಕ್ಷೆಗಳನ್ನು ಮುಂದೂಡಿ

ಪರೀಕ್ಷೆಗಳನ್ನು ಮುಂದೂಡಿ

ಡಿಸೆಂಬರ್‌ನಲ್ಲಿ ನಡೆಯುವ ಸೆಮೆಸ್ಟರ್ ಪರೀಕ್ಷೆಗಳನ್ನು ಮುಂದೂಡಬೇಕು. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಬಳಿಕ ಮುಂದಿನ ವರ್ಷ ಪರೀಕ್ಷೆಗಳನ್ನು ನಡೆಸಬಹುದು ಎಂದು ಮತ್ತೊಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿದ್ಯಾರ್ಥಿ ಸಂಘಟನೆಗಳ ವಿರೋಧ

ವಿದ್ಯಾರ್ಥಿ ಸಂಘಟನೆಗಳ ವಿರೋಧ

ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಸಹ ಕಾಲೇಜುಗಳನ್ನು ತೆರೆಯುವ ಉದ್ದೇಶವನ್ನು ವಿರೋಧಿಸಿದ್ದಾರೆ. 'ಕೋವಿಡ್ ಪ್ರಕರಣಗಳ ಸಂಖ್ಯೆ ಸಂಪೂರ್ಣವಾಗಿ ಇಳಿದಿಲ್ಲ. ರಾಜ್ಯ ಸರ್ಕಾರವು ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳಬಾರದು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುತ್ತಾರೆ. ಇವು ಅಪಾಯಕ್ಕೆ ಎಡೆಮಾಡಿಕೊಡುತ್ತವೆ' ಎಂದು ವಿದ್ಯಾರ್ಥಿ ಸಂಘಟನೆಗಳು ಹೇಳಿವೆ.

ಪದವಿ, ಸ್ನಾತಕೋತ್ತರ ತರಗತಿ ಪ್ರಾರಂಭಕ್ಕೆ ಹೊಸ ದಿನಾಂಕ: ವೇಳಾಪಟ್ಟಿ ಬಿಡುಗಡೆಪದವಿ, ಸ್ನಾತಕೋತ್ತರ ತರಗತಿ ಪ್ರಾರಂಭಕ್ಕೆ ಹೊಸ ದಿನಾಂಕ: ವೇಳಾಪಟ್ಟಿ ಬಿಡುಗಡೆ

Recommended Video

Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2
1ನೇ ಸೆಮೆಸ್ಟರ್‌ಗೆ ಪ್ರಾರಂಭಿಸಬಹುದು

1ನೇ ಸೆಮೆಸ್ಟರ್‌ಗೆ ಪ್ರಾರಂಭಿಸಬಹುದು

ರಾಜ್ಯದಲ್ಲಿ ಕಾಲೇಜುಗಳ ಆನ್‌ಲೈನ್ ತರಗತಿಗಳು ಸೆ. 1ರಂದು ಶುರುವಾಗಿದ್ದವು. ಆರಂಭದಲ್ಲಿ ರಾಜ್ಯ ಸರ್ಕಾರವು ಅಕ್ಟೋಬರ್ 1ರಿಂದ ಕಾಲೇಜುಗಳಿಗೆ ಉಪನ್ಯಾಸಕರು ತೆರಳಿ ಪಾಠ ಮಾಡುವಂತೆ ತರಗತಿ ಆರಂಭಿಸಲು ಆಲೋಚಿಸಲಾಗಿತ್ತು. ಆದರೆ ಕೋವಿಡ್ ಪ್ರಕರಣಗಳ ಏರಿಕೆಯಿಂದ ಅದನ್ನು ಕೈಬಿಡಲಾಗಿತ್ತು. ನವೆಂಬರ್ 1ರಂದ ಮೊದಲ ಸೆಮೆಸ್ಟರ್ ತರಗತಿಗಳನ್ನು ಆರಂಭಿಸಬಹುದು ಎಂದು ಯುಜಿಸಿ ಹೇಳಿತ್ತು.

English summary
Colleges and universities across Karnataka are likely to likely to open on Nov 2 in a phased manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X