ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿವರೆಗೂ ತೀವ್ರ ಚಳಿ, ಬಚಾವಾಗಲು ಹೀಗೆ ಮಾಡಿ

|
Google Oneindia Kannada News

ಬೆಂಗಳೂರು, ಜನವರಿ 11: ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಚಳಿಯ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಚಳಿಯಿಂದ ಜನತೆ ತತ್ತರಿಸಿದ್ದಾರೆ.

ಆದರೆ ಕೊರೆಯುವ ಚಳಿಯ ಪ್ರಮಾಣ ನಗರದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಭಾಗದಿಂದ ಶಿತಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಮೂರರಿಂದ ಆರು ಡಿಗ್ರಿ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗಿದೆ. ಇನ್ನು ಎರಡು ಮೂರು ದಿನ ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜನವರಿ ಎರಡನೇ ವಾರದಲ್ಲಿ ಸಾಮಾನ್ಯವಾಗಿ ದಕ್ಷಿಣ ಒಳನಾಡಿನಲ್ಲಿ 11-12 ಡಿಗ್ರಿ ಸೆಲ್ಸಿಯಸ್ , ಉತ್ತರ ಒಳನಾಡಿನಲ್ಲಿ 10-11 ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇರಲಿದೆ.

Cold weather in state continue till Sankranti

ಕಳೆದೆರೆಡು ದಿನಗಳಿಂದ ಮತ್ತೆ ಉತ್ತರ ಭಾರತದ ಕಡೆಯಿಂದ ಶೀತಗಾಳಿ ಬೀಸುತ್ತಿರುವದರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಮೂರರಿಂದ ಆರು ಡಿಗ್ರಿ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗಿದೆ. ಗುರುವಾರ ಬೆಳಗ್ಗೆ ಅಂಕಿ ಅಂಶಗಳ ಪ್ರಕಾರ ಮಡಿಕೇರಿಯಲ್ಲಿ ಅತಿ ಕಡಿಮೆ 7.5, ಹಾಸನದಲ್ಲಿ 8.6 ಹಾಗೂ ಮೈಸೂರಲ್ಲಿ 9.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.

ಬೆಂಗಳೂರಲ್ಲಿ ಮತ್ತೆ ತಗ್ಗುತ್ತಿದೆ ತಾಪಮಾನ, ತೀವ್ರ ಚಳಿ ಸಾಧ್ಯತೆ ಬೆಂಗಳೂರಲ್ಲಿ ಮತ್ತೆ ತಗ್ಗುತ್ತಿದೆ ತಾಪಮಾನ, ತೀವ್ರ ಚಳಿ ಸಾಧ್ಯತೆ

ಬೆಂಗಳೂರು ಕೇಂದ್ರ ಭಾಗದಲ್ಲಿ ಗರಿಷ್ಠ 29.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 14.5 ಡಿಗ್ರಿ ಸೆಲ್ಸಿಯಸ್, ಕೆಐಎನಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 13 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಎಚ್‌ಎಎಲ್‌ನಲ್ಲಿ ಗರಿಷ್ಠ 27.4 ಡಿಗ್ರಿ ಸೆಲ್ಸಿಯಸ್, 13.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕಳೆದ 7 ವರ್ಷಗಳಲ್ಲಿ ಜನವರಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನಕಳೆದ 7 ವರ್ಷಗಳಲ್ಲಿ ಜನವರಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ

ಬಿಸಿಲಿಗೆ ಸ್ವಲ್ಪ ಮೈಯೊಡ್ಡಿ, ಬಿಸಿ ನೀರನ್ನು ಆದಷ್ಟು ಸೇವನೆ ಮಾಡಿ, ಸ್ವೆಟರ್‌ಗಳನ್ನು ಧರಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

English summary
If the dry and cold wind blows at such a high speed till late evening, say 10pm, the The rising trend in minimum temperature is likely to continue .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X