• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದ ಉತ್ತರ ಒಳನಾಡಿನಲ್ಲಿ ಥರಗುಟ್ಟುವ ಚಳಿ, ಬೀದರ್‌ನಲ್ಲಿ ಅತಿ ಹೆಚ್ಚು

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಕೆಲ ದಿನಗಳಿಂದ ಚಳಿಗೆ ಬೀದರ್ ಜನತೆ ಥರಗುಟ್ಟುತ್ತಿದೆ. ಮಂಗಳವಾರ 5.6 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಬುಧವಾರ 6.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿದೆ.

ಇದು ಜಿಲ್ಲೆಯ ಸಾರ್ವಕಾಲಿಕ ಹಾಗೂ ರಾಜ್ಯದಲ್ಲಿ ಈ ವರ್ಷದ ದಾಖಲೆ. ಉತ್ತರ ಒಳನಾಡಿನ ಬೀದರ್‌ನಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಕಡಿಮೆಯಾಗುತ್ತಿದ್ದು , ಚಳಿ ಹೆಚ್ಚಾಗುತ್ತಿದೆ.

ಕರ್ನಾಟಕ ಹವಾಮಾನ ವರದಿ, ಬಹುತೇಕ ಜಿಲ್ಲೆಗಳಲ್ಲಿ ಕೊರೆಯುವ ಚಳಿಕರ್ನಾಟಕ ಹವಾಮಾನ ವರದಿ, ಬಹುತೇಕ ಜಿಲ್ಲೆಗಳಲ್ಲಿ ಕೊರೆಯುವ ಚಳಿ

ಮಹಾರಾಷ್ಟ್ರ ಮಾರ್ಗವಾಗಿ ತೇವಾಂಶ ಭರಿತ ಗಾಳಿ ರಾಜ್ಯ ಪ್ರವೇಶಿಸುತ್ತಿರುವುದು ಕೂಡ ರಾಜ್ಯದಲ್ಲಿ ಚಳಿ ಹೆಚ್ಚಾಗಲು ಮುಖ್ಯ ಕಾರಣ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ಬೀದರ್‌ನಲ್ಲಿ ಮಂಗಳವಾರ ಗರಿಷ್ಠ ತಾಪಮಾನ 26.2 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಈ ಕನಿಷ್ಠ ದಾಖಲಾತಿ ವಾಡಿಕೆ ತಾಪಮಾನಕ್ಕಿಂತ ಶೇ.10.1 ನಷ್ಟು ಕಡಿಮೆ ದಾಖಲಾಗಿದೆ.

ಈವರೆಗೆ ಜಿಲ್ಲೆಯಲ್ಲಿ ಇಷ್ಟು ಕಡಿಮೆ ಪ್ರಮಾಣದ ಉಷ್ಣಾಂಶ ದಾಖಲಾಗಿರಲಿಲ್ಲ. ಆದ್ದರಿಂದ ಇದು ಜಿಲ್ಲೆಯ ಮಟ್ಟಿಗೆ ಸಾರ್ವಕಾಲಿಕ ಕನಿಷ್ಠ ತಾಪಮಾನದ ದಾಖಲೆಯಾಗಿದೆ. ರಾಜ್ಯದ ಜಿಲ್ಲೆಯಲ್ಲಿ ದಾಖಲಾದ ಅತ್ಯಂತ ಕನಿಷ್ಠ ಉಷ್ಣಾಂಶ ಇದಾಗಿದೆ. 2020ರ ಸೋಮವಾರ ಬೀದರ್‌ನಲ್ಲಿ 6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇಳಿಕೆಯಾಗಿತ್ತು.

2020ರ ನವೆಂಬರ್ 10 ರಂದು ಜಿಲ್ಲೆಯಲ್ಲಿ 7.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ರಾಜ್ಯದ ಬಹುತೇಕ ಕಡೆ ಒಣಹವೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ.

ಮುಂದಿನ 24 ಗಂಟೆಗಳ ಕಾಲ 26 ಡಿಗ್ರಿ ಗರಿಷ್ಠ ಉಷ್ಣಾಂಶ, 15 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಮುಂದಿನ ಒಂದು ವಾರವೂ ಉತ್ತರ ಒಳನಾಡಿನಲ್ಲಿ ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

   ಬೆಂಗಳೂರು: ಆಹಾರ ಅರಸಿ ನಾಡಿನತ್ತ ಕಾಡಾನೆಗಳ ಲಗ್ಗೆ | Oneindia Kannada
   English summary
   Cold wave conditions prevailed at isolated places over North Interior Karnataka. Dry Weather prevailed over the State
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X