ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿ ನಾಯಕರ ದಿಢೀರ್ ಸಭೆ: ಸರ್ಕಾರ ಉಳಿಸಿಕೊಳ್ಳಲು ಕಾರ್ಯತಂತ್ರ?

|
Google Oneindia Kannada News

ದೋಸ್ತಿ ನಾಯಕರು ಇಂದು ನಗರದ ತಾಜ್ ಹೊಟೆಲ್‌ನಲ್ಲಿ ದಿಢೀರ್ ಸಭೆ ನಡೆಸಿದ್ದು, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾರ್ಯತಂತ್ರಗಳನ್ನು ಹೆಣೆದಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಪರಮೇಶ್ವರ್ ಅವರುಗಳು ಇಂದು ರಾತ್ರಿ ಹೊಟೆಲ್‌ನಲ್ಲಿ ಸಭೆ ನಡೆಸಿದ್ದಾರೆ, ಒಂದೂವರೆ ತಾಸು ನಡೆದ ಸಭೆಯಲ್ಲಿ ಹಲವು ರಾಜ್ಯ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಮಹತ್ವದ ಚರ್ಚೆ ಮತ್ತು ಸೂಚನೆಗಳ ವಿನಿಮಯ ಆಗಿದೆ.

ಕುಮಾರಸ್ವಾಮಿ-ದೇವೇಗೌಡರ ಹುಡುಕಿಕೊಂಡ ಬಂದ ಚಂದ್ರಬಾಬು ನಾಯ್ಡು ಕುಮಾರಸ್ವಾಮಿ-ದೇವೇಗೌಡರ ಹುಡುಕಿಕೊಂಡ ಬಂದ ಚಂದ್ರಬಾಬು ನಾಯ್ಡು

ಚುನಾವಣೆ ಫಲಿತಾಂಶಕ್ಕೆ ಇನ್ನೊಂದು ದಿನ ಇದ್ದಾಗ ಕೆ.ಸಿ.ವೇಣುಗೋಪಾಲ್ ಅವರು ರಾಜ್ಯಕ್ಕೆ ಬಂದಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಗೆ ಹಿನ್ನಡೆಯನ್ನು ಸಾರಿ ಹೇಳುತ್ತಿರುವ ಕಾರಣ ಮೈತ್ರಿ ಸರ್ಕಾರ ಅಲುಗಾಡುತ್ತಿದೆ, ಹಾಗಾಗಿಯೇ ಈ ದಿಢೀರ್ ಸಭೆ ನಡೆದಿದೆ.

ಸರ್ಕಾರ ಈಗಲೂ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿದೆ:ಸಿಎಂ ಕುಮಾರಸ್ವಾಮಿಸರ್ಕಾರ ಈಗಲೂ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿದೆ:ಸಿಎಂ ಕುಮಾರಸ್ವಾಮಿ

ಆಪರೇಷನ್ ಕಮಲ ಆರಂಭಿಸಿದೆ ಬಿಜೆಪಿ?

ಆಪರೇಷನ್ ಕಮಲ ಆರಂಭಿಸಿದೆ ಬಿಜೆಪಿ?

ಬಿಜೆಪಿಯು ಈಗಾಗಲೇ ಆಪರೇಷನ್ ಕಮಲ ಆರಂಭಿಸಿದೆ ಎನ್ನಲಾಗಿದ್ದು, ಅದರ ಭಾಗವಾಗಿಯೇ ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ, ಇಂದೂ ಸಹ ಶಾಸಕ ರೋಷನ್ ಬೇಗ್ ಬಿಜೆಪಿ ಸೇರುವ ಮಾತನ್ನಾಡಿದ್ದಾರೆ ಎರಡು ಉಪಚುನಾವಣೆ ಫಲಿತಾಂಶಗಳೂ ಸಹ ಡೋಲಾಯ-ಮಾನಾಯವಾಗಿವೆ ಹಾಗಾಗಿ ಸರ್ಕಾರಕ್ಕೆ ಹಿಂದಿಗಿಂತಲೂ ಹೆಚ್ಚಿನ ಆತಂಕ ಇದೆ.

ವೇಣುಗೋಪಾಲ್ ಮೂಲಕ ಹೈಕಮಾಂಡ್ ಸಂದೇಶ

ವೇಣುಗೋಪಾಲ್ ಮೂಲಕ ಹೈಕಮಾಂಡ್ ಸಂದೇಶ

ಈ ಎಲ್ಲ ವಿಷಯಗಳನ್ನು ಇಂದಿನ ಸಭೆಯಲ್ಲಿ ಚರ್ಚಿಸಿದ್ದು, ವೇಣುಗೋಪಾಲ್ ಮೂಲಕ ಹೈಕಮಾಂಡ್ ರಾಜ್ಯದ ಕೈ-ಜೆಡಿಎಸ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಯಾವುದೇ ಕಾರಣಕ್ಕೂ ಸರ್ಕಾರ ಉರುಳುದಂತೆ ನೋಡಿಕೊಳ್ಳುವಂತೆ ಆದೇಶ ರವಾನಿಸಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ಚರ್ಚೆ

ಲೋಕಸಭೆ ಚುನಾವಣೆ ಫಲಿತಾಂಶದ ಚರ್ಚೆ

ಇಂದಿನ ಸಭೆಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದ್ದು, ಗುಪ್ತಚರ ಇಲಾಖೆ ವರದಿ, ರಾಜ್ಯ ಕಾಂಗ್ರೆಸ್-ಜೆಡಿಎಸ್‌ ಪಕ್ಷಗಳ ಆಂತರಿಕ ಸಮೀಕ್ಷೆಗಳ ಬಗ್ಗೆಯೂ ಚರ್ಚೆ ನಡೆದಿದೆ.

ಚಂದ್ರಬಾಬು ನಾಯ್ಡು-ದೇವೇಗೌಡ ಭೇಟಿ

ಚಂದ್ರಬಾಬು ನಾಯ್ಡು-ದೇವೇಗೌಡ ಭೇಟಿ

ಇದೇ ದಿನ ಚಂದ್ರಬಾಬು ನಾಯ್ಡು ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಫಲಿತಾಂಶ ಅತ್ತ-ಇತ್ತ ಆದರೆ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ದೇವೇಗೌಡ ಅವರು ಮಹತ್ವದ ಪಾತ್ರ ವಹಿಸಲಿದ್ದಾರೆ, ಹಾಗಾಗಿಯೇ ನಾಯ್ಡು ಅವರು ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ.

English summary
coalition leaders had sudden meeting today in Bengaluru. KC Venugopla, HD Kumaraswamy, SIddaramaiah, G Parameshwar were in the meeting,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X