ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿ ಸರ್ಕಾರದ ಪ್ರಥಮ ಸಂಪುಟ ಸಭೆಯ ಮಹತ್ವದ ನಿರ್ಣಯಗಳು

|
Google Oneindia Kannada News

ಬೆಂಗಳೂರು, ಆಗಸ್ಟ್‌ ೦3: ವಿಧಾನಸೌಧದಲ್ಲಿ ನಡೆದ ಮೈತ್ರಿ ಸರ್ಕಾರದ ಪ್ರಥಮ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ದೇವಾಲಯ ಟ್ರಸ್ಟ್‌ನಿಂದ ನಡೆಸಲಾಗುವ ಶಿಕ್ಷಣ ಸಂಸ್ಥೆಗಳಿಗಾಗಿ ಹೊಸ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಅದಕ್ಕೆ ಸಂಪುಟ ಸಮಿತಿ ಅಸ್ತು ಎಂದಿದೆ.

ಟ್ರಸ್ಟ್‌ನಿಂದ ನಡೆಸಲಾಗುವ ಶಿಕ್ಷಣ ಸಂಸ್ಥೆಗಳ ನೇಮಕಾತಿಯಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲವಾದ್ದರಿಂದ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಅಂತಹಾ 22 ಶೈಕ್ಷಣಿಕ ಸಂಸ್ಥೆಗಳಿವೆ.

ಸಂಶೋಧನೆಗೆ 15 ಕೋಟಿ

ಸಂಶೋಧನೆಗೆ 15 ಕೋಟಿ

ಬೆಂಗಳೂರಿನ ಕೃಷಿ ವಿವಿ, ತೋಟಗಾರಿಕೆ, ಹೈನುಗಾರಿಕೆ ಇನ್ನೂ ಕೆಲವು ಕೃಷಿ ಸಂಬಂಧಿಸಿದ ಸಂಶೋಧನೆಗಳಿಗೆ 15 ಕೋಟಿ ವೆಚ್ಚದಲ್ಲಿ ಕೇಂದ್ರ ಸ್ಥಾಪಿಸಲು ಸಂಪುಟ ಸಭೆ ಅನುಮತಿ ನೀಡಿದೆ.

ಆಂಗ್ಲೋ ಇಂಡಿಯನ್ ಸದಸ್ಯ ನೇಮಕ ಸಿಎಂ ಕೈಗೆ

ಆಂಗ್ಲೋ ಇಂಡಿಯನ್ ಸದಸ್ಯ ನೇಮಕ ಸಿಎಂ ಕೈಗೆ

ಆಂಗ್ಲೋ-ಇಂಡಿಯನ್ ಸಮುದಾಯದ ಸದಸ್ಯರನ್ನು ವಿಧಾನಸಭೆಗೆ ನೇಮಿಸುವ ಅವಕಾಶ ಮುಖ್ಯಮಂತ್ರಿಗೆ ನೀಡಲು ಒಪ್ಪಿಗೆ. ಹಾಸನದ ಹೊಳೆನರಸಿಪುರದಲ್ಲಿ ರಾಮದೇವರ ಅಣೆಕಟ್ಟಿಗೆ ಪರ್ಯಾಯವಾಗಿ ಮತ್ತೊಂದು ಅಣೆಕಟ್ಟೆ ಕಟ್ಟಲು 122 ಕೋಟಿ ಬಿಡುಗಡೆ.

450 ಹಾಸಿಗೆಯ ಆಸ್ಪತ್ರೆ ನಿರ್ಮಾಣ

450 ಹಾಸಿಗೆಯ ಆಸ್ಪತ್ರೆ ನಿರ್ಮಾಣ

ಕೊಪ್ಪಳ, ಗದಗ, ಚಾಮರಾಜನಗರಗಳ ವೈದ್ಯಕೀಯ ಕಾಲೇಜು ಆವರಣದಲ್ಲಿ 450 ಹಾಸಿಗೆಗಳ ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 473 ಕೋಟಿ ಬಿಡುಗಡೆಗೆ ಅನುಮೋದನೆ. ಮುಧೋಳ ನಗರಕ್ಕೆ 10 ಕೋಟಿ ರೂ. ವೆಚ್ಚದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ.

ಸಮಾಜಕಲ್ಯಾಣ ಹಾಸ್ಟೆಲ್‌ಗೆ ಕಿಟ್‌ ವಿತರಣೆ

ಸಮಾಜಕಲ್ಯಾಣ ಹಾಸ್ಟೆಲ್‌ಗೆ ಕಿಟ್‌ ವಿತರಣೆ

ಜಲಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಅವರ ಅಭಿಪ್ರಾಯ ಕೇಳಿ ಜಲಸಂಪನ್ಮೂಲ ಇಲಾಖೆಗೆ ಮೀಸಲು ಮಾಡಲು ಒಪ್ಪಿಗೆ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ಕೆಎಸ್‌ಡಿಎಲ್‌ ಮೂಲಕ 18 ಕೋಟಿ ರೂ. ವೆಚ್ಚದಲ್ಲಿ ಶುಚಿತ್ವ ಕಿಟ್‌ ಪೂರೈಕೆ.

English summary
Coalition governments first cabinet meeting held yesterday in Vidha Soudha in Kumaraswamy's captaincy. Cabinet meeting took several development decisions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X