ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಂಡೀಗಢ ಪ್ರವಾಸ

|
Google Oneindia Kannada News

ಬೆಂಗಳೂರು, ಜೂನ್ 28: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ (ಜೂ.27) ರಾತ್ರಿ ಚಂಡೀಗಢಕ್ಕೆ ತೆರಳಿದ್ದಾರೆ.

ಜೂನ್ 28 ಹಾಗೂ 29 ರಂದು ನಡೆಯಲಿರುವ 47ನೇ ಜಿ.ಎಸ್. ಟಿ. ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಜಿಎಸ್ ಟಿ ಕುರಿತು ಸಮಗ್ರ ಚರ್ಚೆ ನಡೆಯಲಿದೆ.

ಜಿ ಎಸ್ ಟಿ ತೆರಿಗೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಗ್ರೂಪ್ ಆಫ್ ಮಿನಿಸ್ಟರ್ ಸಭೆ ಈಗಾಗಲೇ ೩ ಬಾರಿ ನಡೆದಿದೆ. ಈ ಕುರಿತು ಮಧ್ಯಂತರ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ. ಎರಡು ದಿನಗಳ ಸಭೆಯ ನಂತರ ಜೂನ್ 30 ರಂದು ಸಿಎಂ ಬೊಮ್ಮಾಯಿ ಅವರು ನಗರಕ್ಕೆ ಹಿಂತಿರುಗಲಿದ್ದಾರೆ.

CM went for Chandigarh to participate in GST Council meeting

ಆರು ತಿಂಗಳುಗಳ ಬಳಿಕ ಸಭೆ:
ಸುಮಾರು ಆರು ತಿಂಗಳುಗಳ ಬಳಿಕ ಈ ವಾರದಲ್ಲಿ ಚಂಡೀಗಢದಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದೆ. ಈ ಸಭೆಯ ಬಳಿಕ ಹಲವಾರು ವಸ್ತುಗಳ ಜಿಎಸ್‌ಟಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಹಾಗೆಯೇ ಸುಮಾರು 215 ವಸ್ತುಗಳ ಮೇಲಿನ ಜಿಎಸ್‌ಟಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸಮಿತಿ ಶಿಫಾರಸ್ಸು ಮಾಡಿದೆ.

ಈ 47ನೇ ಜಿಎಸ್‌ಟಿ ಸಭೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಲಿದೆ. ಎಲ್ಲಾ ರಾಜ್ಯಗಳ ಕೇಂದ್ರಾಡಳಿತ ಪ್ರದೇಶಗಳು ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜಿಎಸ್‌ಟಿ ಸಭೆಯು ಜೂನ್ 28-29ರಂದು ನಡೆಯಲಿದೆ.

ಸಾರ್ವಕಾಲಿಕ ದಾಖಲೆ ಬರೆದ ಜಿಎಸ್‌ಟಿ:
ಜಿಎಸ್‌ಟಿಗಳ ಬಗ್ಗೆ ಚರ್ಚೆ ಮಾತ್ರವಲ್ಲದೇ ಈ ಸಭೆಯಲ್ಲಿ ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯದಿಂದ ಜಿಎಸ್‌ಟಿ ಪರಿಹಾರದ ಆಗ್ರಹ ಕೇಳಿಬರಬಹುದು. ಇನ್ನು ಕೃತಕ ಕಾಲಿನ ಮೇಲೆ ಶೇಕಡ ಐದರಷ್ಟು ಜಿಎಸ್‌ಟಿ ಹೇರುವ ಬಗ್ಗೆ ಚರ್ಚೆ ನಡೆಯಬಹುದು. ಬೆನ್ನು ಮೂಳೆ, ಇತರೆ ಮೂಳೆಗಳ ಜೋಡಿಸುವಿಕೆ ಮೇಲೆಯೂ ಶೇಕಡ ಐದು ಜಿಎಸ್‌ಟಿ ಹೇರಿಕೆಯ ಬಗ್ಗೆ ಚರ್ಚೆ ನಡೆಯಲಿದೆ.

Recommended Video

ಸಹ ಆಟಗಾರನನ್ನು‌ ನಿಂದಿಸಿದ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟು ಬೆವರಳಿಸಿದ ವಿರಾಟ್ ಕೊಹ್ಲಿ | Oneindia Kannada

English summary
Chief Minister Basavaraj Bommai left for Chandigarh on Monday evening to participate in the 47th GST Council meeting to be held on June 28 and 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X