ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಕಾಬಿಟ್ಟಿ ದರ ವಸೂಲಿ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಕ್ರಮ: ಸಿಎಂ

|
Google Oneindia Kannada News

ಬೆಂಗಳೂರು, ನವೆಂಬರ್ 2: 'ಇರೋದು ಒಂದೇ ಸೀಟು ಬೇಕಿದ್ರೆ ಇಷ್ಟು ಹಣಕೊಟ್ಟು ಬನ್ನಿ ಇಲ್ಲ ಅಂದ್ರೆ ನಿಮ್ಮಿಷ್ಟ' ಇದು ಖಾಸಗಿ ಬಸ್‌ಗಳ ಕಂಡಕ್ಟರ್ ಮಾತು.

ಹೌದು ಹಬ್ಬಗಳು ಬಂತೆಂದರೆ ಸಾಕು ತಮ್ಮ ನಿಯತ್ತು ಮರೆತು ಖಾಸಗಿ ಬಸ್‌ಗಳು ಸುಲಿಗೆಗಿಳಿದುಬಿಡುತ್ತವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

ಬಸ್ ಪ್ರಯಾಣ ದರ ಏರಿಕೆ ಆದೇಶಕ್ಕೆ ಬ್ರೇಕ್ ಹಾಕಿದ ಕುಮಾರಸ್ವಾಮಿ ಬಸ್ ಪ್ರಯಾಣ ದರ ಏರಿಕೆ ಆದೇಶಕ್ಕೆ ಬ್ರೇಕ್ ಹಾಕಿದ ಕುಮಾರಸ್ವಾಮಿ

ಖಾಸಗಿ ಬಸ್‌ಗಳು ಬೇಕಾಬಿಟ್ಟಿ ಬಸ್‌ದರವನ್ನು ಹೆಚ್ಚಳ ಮಾಡುವ ಹಾಗಿಲ್ಲ, ಒಂದೊಮ್ಮೆ ಬಸ್‌ ಮಾಲೀಕರ ಕುರಿತು ದೂರು ಬಂದರೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

CM warns Private buses over high fares

ಪ್ರಯಾಣಿಕರೆ ಸ್ವಲ್ಪ ನಿಟ್ಟುಸಿರು ಬಿಡಿ, ಬಸ್‌ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ ಪ್ರಯಾಣಿಕರೆ ಸ್ವಲ್ಪ ನಿಟ್ಟುಸಿರು ಬಿಡಿ, ಬಸ್‌ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ

ಇನ್ನು ದೀಪಾವಳಿ ಹಬ್ಬಕ್ಕೆ ಆರು ದಿನಗಳು ಬಾಕಿ ಇದೆ ಕೆಎಸ್‌ಆರ್‌ಟಿಸಿಯು 1500 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಿದೆ. ಆದರೂ ಖಾಸಗಿ ಬಸ್‌ಗಳ ದಂಧೆ ಮಾತ್ರ ಕಡಿಮೆಯಾಗಿಲ್ಲ. ದುಪ್ಪಟ್ಟು ಹಣವನ್ನು ಬಾಚಿಕೊಳ್ಳಲು ಆರಂಭಿಸಿದೆ.

ಬಸ್‌ ಪ್ರಯಾಣ ದರ ಶೇ.18ರಷ್ಟು ಹೆಚ್ಚಳಕ್ಕೆ ಸರ್ಕಾರ ಚಿಂತನೆ ಬಸ್‌ ಪ್ರಯಾಣ ದರ ಶೇ.18ರಷ್ಟು ಹೆಚ್ಚಳಕ್ಕೆ ಸರ್ಕಾರ ಚಿಂತನೆ

ಈಗಾಗಲೇ ಸರ್ಕಾರಿ ಬಸ್‌ಗಳು ಸೀಟುಗಳು ಬಹುತೇಕ ಬುಕ್ ಆಗಿವೆ ಇನ್ನು ಖಾಸಗಿ ಬಸ್‌ಗಳಿಗೆ ಮೊರೆ ಹೋಗುವವರ ಸಂಖ್ಯೆ ಹೆಚ್ಚಿದೆ. ಬಸ್‌ಗಳ ಸೀಟು ಭರ್ತಿಯಾಗದಿದ್ದರೂ ಖಾಲಿ ಇಲ್ಲ ಕೇವಲ ಒಂದೇ ಸೀಟು ಇರೋದು ಇಷ್ಟು ಹಣ ಕೊಟ್ರೆ ಮಾತ್ರ ಸೀಟು ಸಿಗುತ್ತೆ ಎಂದು ಹೇಳಿ ದಂಧೆಗಿಳಿದಿದ್ದಾರೆ. ಅನಿವಾರ್ಯವಾಗಿ ಸಾರ್ವಜನಿಕರು ಅವರು ಕೇಳಿದಷ್ಟು ಹಣವನ್ನು ನೀಡುತ್ತಿದ್ದಾರೆ. ಆದರೆ ಇನ್ನುಮುಂದೆ ಇದಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಇದೆ.

English summary
During Deepavali privates busses are increasing it's fares. So chief minister HD kumaraswamy warned to take action on them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X