ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕನ್ನಡ ಧ್ವಜ ರೆಡಿ, ಕೇಂದ್ರ ಒಪ್ಪುವುದಷ್ಟೆ ಬಾಕಿ

By Manjunatha
|
Google Oneindia Kannada News

Recommended Video

ಹೊಸ ಕನ್ನಡ ಧ್ವಜ ರೆಡಿ, ಕೇಂದ್ರ ಒಪ್ಪುವುದಷ್ಟೆ ಬಾಕಿ | Oneindia Kannada

ಬೆಂಗಳೂರು, ಮಾರ್ಚ್‌ 08: ಪ್ರತ್ಯೇಕ ಧ್ವಜ ಸಮಿತಿಯ ಶಿಫಾರಿಸಿನಂತೆ ವಿನ್ಯಾಸ ಮಾಡಲಾಗಿರುವ ನೂತನ ನಾಡ ಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅನಾವರಣ ಮಾಡಿದರು.

ಈ ಮುಂಚೆ ಇದ್ದ ಹಳದಿ ಮತ್ತು ಕೆಂಪು ಬಣ್ಣದ ಜೊತೆಗೆ ಹೊಸ ಧ್ವಜದಲ್ಲಿ ಬಿಳಿ ಬಣ್ಣವನ್ನೂ ಸೇರಿಸಲಾಗಿದ್ದು, ಜೊತೆಗೆ ಸರ್ಕಾರದ ಲಾಂಛನದ ಚಿತ್ರವೂ ಧ್ವಜದಲ್ಲಿದೆ ಆದರೆ ಧ್ವಜವನ್ನು ಹಿಂದೆ ಮುಂದೆ ಹಿಡಿದಾಗ ಅಕ್ಷರಗಳು ಉಲ್ಟಾ ಕಾಣುತ್ತವಾದ್ದರಿಂದ 'ಸತ್ಯ ಮೇವ ಜಯತೆ' ಧ್ಯೇಯ ವಾಕ್ಯವನ್ನು ಕೈಬಿಡಲಾಗಿದೆ. ನೂತನ ಧ್ವಜನವನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಅನಾವರಣ ಮಾಡಿದರು.

ಹಳದಿ, ಕೆಂಪು ಬದಲು ತ್ರಿವರ್ಣ ಧ್ವಜ: ಕನ್ನಡಪರರ ಆಕ್ರೋಶಹಳದಿ, ಕೆಂಪು ಬದಲು ತ್ರಿವರ್ಣ ಧ್ವಜ: ಕನ್ನಡಪರರ ಆಕ್ರೋಶ

ಧ್ವಜ ಅನಾವರಣದ ನಂತರ ಮಾತನಾಡಿದ ಸಿದ್ದರಾಮಯ್ಯ ಅವರು ಬಹಳ ದಿನದಿಂದ ರಾಜ್ಯಕ್ಕೆ ನಾಡಧ್ವಜ ಬೇಕೆಂಬ ಚರ್ಚೆ ನಡೆದಿತ್ತು ನಡೆದಿತ್ತು. ಇದೇ ವಿಚಾರವಾಗಿ ಹಿರಿಯ ಸಾಹಿತಿಗಳಾದ ಪಾಟೀಲ್ ‌ಪುಟ್ಟಪ್ಪ ಅವರು ಕೂಡ ಪತ್ರ ಬರೆದಿದ್ದರು. ಹಾಗಾಗಿ ಎಸ್.ಜಿ.ಸಿದ್ದರಾಮಯ್ಯ ‌ನೇತೃತ್ವದಲ್ಲಿ ಒಂದು ಸಮಿತಿ ಕೂಡ ರಚನೆ ಮಾಡಲಾಗಿತ್ತು. ಸಮಿತಿಯು ಕೂಲಂಕುಷವಾಗಿ ಚರ್ಚಿಸಿ, ವರದಿ ಕೊಟ್ಟಿದೆ. ಕನ್ನಡದ ಇತಿಹಾಸ, ಬಾವುಟ, ಸಂವಿಧಾನದಲ್ಲಿ ತೊಡಕಿನ ಬಗ್ಗೆ ಅಧ್ಯಯನ ಮಾಡಿದ ಬಳಿಕ ಈ ಬಾವುಟವನ್ನು ತಯಾರಿಸಲಾಗಿದೆ' ಎಂದು ಅವರು ಹೇಳಿದರು.

CM Siddaramaiah Unveiled new Karnataka flag

ಧ್ವಜ ಸಮಿತಿಯ ವರದಿಗೆ ಸಂಪುಟ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಆದರೆ ನಾವಿದನ್ನು ಘೋಷಣೆ ಮಾಡುತ್ತಿಲ್ಲ, ಇದಕ್ಕೆ ಕೇಂದ್ರದ ಒಪ್ಪಿಗೆಯೂ ಬೇಕಿರುವ ಕಾರಣ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರಧ್ವಜದ ಅಡಿಯಲ್ಲಿಯೇ ನಾಡಧ್ವಜ ಹಾರಲಿದೆ ಎಂದು ಕೇಂದ್ರಕ್ಕೆ ಭರವಸೆ ಸಹ ನಿಡಿದ್ದೇವೆ ಎಂದ ಅವರು ಇದೊಂದು ಐತಿಹಾಸಿಕ ನಿರ್ಣಯ ಎಂದು ಬಣ್ಣಿಸಿದರು.

ನಾಡ ಧ್ವಜದ ಮಾದರಿ ಹಾಗೂ ಪ್ರಸ್ತಾವನೆ ಹಾಗೂ ವರದಿ ಪ್ರತಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದ್ದು, ಕೇಂದ್ರದ ಒಪ್ಪಿಗೆ ದೊರೆತ ನಂತರವಷ್ಟೆ ಅಧಿಕೃತವಾಗಿ ಕನ್ನಡ ಧ್ವಜ ಅಸ್ಥಿತ್ವಕ್ಕೆ ಬರಲಿದೆ. ದೇಶದಲ್ಲಿ ಜಮ್ಮು ಕಾಶ್ಮೀರ ಹೊರತು ಪಡಿಸಿದರೆ ಇನ್ನಾವ ರಾಜ್ಯಕ್ಕೂ ಪ್ರತ್ಯೇಕ ಧ್ವಜ ಇಲ್ಲ.

English summary
Cm Siddaramaiah today unveiled new Karnataka flag. He said its a historical decision. He also said that new flag yet to get central government approval then only we can announce it as Karnataka's official flag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X