ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಸಿದ್ದು ಸರ್ಕಾರದಿಂದ ಪ್ರಬಲ ಅಸ್ತ್ರ, ಸರ್ಕಾರಿ ನೌಕರರ ವೇತನ ಹೆಚ್ಚಳ?

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜನವರಿ 12: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಕತ್ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿದ್ದು, ವೇತನ ಏರಿಕೆ, ಹಲವಾರು ಭತ್ಯೆಗಳನ್ನು ನೀಡಲು ನಿರ್ಧರಿಸಿದ್ದು, ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರ ಬೀಳಲಿದೆ.

  ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಬಜೆಟ್ ಮಂಡನೆ (ಫೆಬ್ರವರಿ 16)ಗೂ ಮುನ್ನವೇ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸುವ ಎಲ್ಲಾ ಸಾಧ್ಯತೆಗಳಿವೆ.

  7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?

  ಐಎಎಸ್‌ ನಿವೃತ್ತ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ಇದೇ ವರ್ಷದ ಜೂನ್‌ 1ರಂದು ವೇತನ ಆಯೋಗ ರಚಿಸಿ ಆದೇಶ ಹೊರಡಿಸಿದ್ದ ಸರ್ಕಾರ, ನಾಲ್ಕು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.

  ಸರ್ಕಾರಿ ನೌಕರರ ವೇತನ ಹೆಚ್ಚಳ ಹಾಗೂ ನಿವೃತ್ತಿ ವಯಸ್ಸನ್ನು ಎರಡು ವರ್ಷಕ್ಕೆ ಹೆಚ್ಚಳ ಮಾಡಲಿದ್ದಾರೆ. ಹಾಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ. ಜತೆಗೆ ಕನಿಷ್ಟ ವೇತನ ಮೊತ್ತ, ವಾರದ ರಜಾದಿನ ಎಲ್ಲವೂ ಬದಲಾಗುವ ಸಾಧ್ಯತೆಯಿದೆ.

  ಕೇಂದ್ರ -ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ವೇತನ?

  ಕೇಂದ್ರ -ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ವೇತನ?

  * ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕು
  * ಏಪ್ರಿಲ್ 1, 2017ರಿಂದ ಅನ್ವಯಿಸುವಂತೆ ಶೇ 30ರಷ್ಟು ಹಣ ಬಿಡುಗಡೆ ಮಾಡಬೇಕು.
  * ಈಗ ಶೇ 30-35ರಷ್ಟು ವೇತನ ಹೆಚ್ಚಿಸಿ ಮಧ್ಯಂತರ ಪರಿಹಾರ ನೀಡಲಿ ಎಂದು 6.4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಅವರು ಕೇಳಿಕೊಂಡಿದ್ದಾರೆ.

  6.4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ನೆರವು

  6.4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ನೆರವು

  * 6.4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ನೆರವಾಗಲು ಶೇ 30ರಷ್ಟು ಮಧ್ಯಂತರ ಪರಿಹಾರ ಘೋಷಿಸುವ ಸಾಧ್ಯತೆಯಿದೆ.
  * ಶೇ 30ರಿಂದ 35ರಷ್ಟು ವೇತನ ಹೆಚ್ಚಳ ಮಾಡಿದರೆ, ಸರ್ಕಾರದ ಬೊಕ್ಕಸಕ್ಕೆ ಸರಿ ಸುಮಾರು 10,000 ಕೋಟಿ ರು ಹೊರೆ ಬೀಳಲಿದೆ.
  * ನೆರೆ ರಾಜ್ಯಗಳಾದ ಆಂಧ್ರ ಹಾಗೂ ತೆಲಂಗಾಣ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ಸಿಗುತ್ತದೆ.

  ಬಿಜೆಪಿ ಕಾಲದಲ್ಲಿ ಎಷ್ಟು ಏರಿಕೆಯಾಗಿತ್ತು

  ಬಿಜೆಪಿ ಕಾಲದಲ್ಲಿ ಎಷ್ಟು ಏರಿಕೆಯಾಗಿತ್ತು

  ಡಿವಿ ಸದಾನಂದ ಗೌಡರ ಬಿಜೆಪಿ ಸರ್ಕಾರವಿದ್ದಾಗ ಶೇ 22ರಷ್ಟು ವೇತನ ಏರಿಕೆಯಾಗಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ನಡುವಿನ ವೇತನ ಏರಿಕೆ ಅಂತರ ಶೇ 67ರಷ್ಟಿತ್ತು. ಈಗ ಸಿದ್ದರಾಮಯಯ್ಯ ಅವರು ಶೇ 35ರಷ್ಟು ವೇತನ ಏರಿಕೆ ಮಾಡಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೇತನ ಅಂತರ ಶೇ32ರಷ್ಟಿರಲಿದೆ. 7ನೇ ವೇತನ ಆಯೋಗ ರಚನೆಯಾಗಿ, ಶಿಫಾರಸು ಜಾರಿಗೊಂಡರೂ ಕರ್ನಾಟಕದಲ್ಲಿ ಆತುರವಾಗಿ ವೇತನ ಆಯೋಗ ರಚಿಸಿರಲಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರು ಅನೇಕ ಬಾರಿ ಸಮರ್ಥನೆ ನೀಡಿದ್ದಾರೆ.

  6ನೇ ವೇತನ ಆಯೋಗದ ಶಿಫಾರಸುಗಳು

  6ನೇ ವೇತನ ಆಯೋಗದ ಶಿಫಾರಸುಗಳು

  * ರಾಜ್ಯ ಸರ್ಕಾರಿ ನೌಕರರ ವೇತನ ಶೇ 30ರಷ್ಟು ಹೆಚ್ಚಳ.

  * ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಸರಿ ಸಮಾನವಾಗಿರಬೇಕು.
  * ಕನಿಷ್ಟ ವೇತನ ಮೊತ್ತ 16,350 ರು, ಗರಿಷ್ಟ ಮೊತ್ತ 1,32,925 ರು. ಎಂದು ನಿಗದಿ.

  * ಕೆಲವು ಜಯಂತಿ /ದಿನಾಚರಣೆ ಸರ್ಕಾರಿ ರಜೆ ರದ್ದು, ವಾರದಲ್ಲಿ 5 ದಿನಗಳು ಮಾತ್ರ ಕಚೇರಿ.

  * ಕೇಂದ್ರ ಸರ್ಕಾರದ ಕಚೇರಿ ಅನ್ವಯ ವಾರದ ರಜೆ ಹಾಗೂ ಕೆಲಸದ ಅವಧಿ ಬದಲಾವಣೆ.

  ಸಂಬಳ ಏರಿಕೆ:
  * ಐಎಎಸ್ ಯೇತರ ಅಧಿಕಾರಿಗಳು- 95,325 ರು ನಿಂದ 1 ಲಕ್ಷ ರು.

  * ಗ್ರೂಪ್ ಎ : 48, 625 ರು

  * ಗ್ರೂಪ್ ಬಿ: 39,425 ರು
  * ಗ್ರೂಪ್ ಸಿ : 19, 850 ರು

  * ಗ್ರೂಪ್ ಡಿ: 16, 350 ರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Siddaramaiah led Congress Government likely to implement 6th Pay commission recommendations latest by Febraury 16, 2018. The committee headed by retired IAS officer MR Srinivasa Murthy likely to submit their report by Sankranti.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more