'ನವ ಕರ್ನಾಟಕ ನಿರ್ಮಾಣಕ್ಕಾಗಿ' ಸಿದ್ದರಾಮಯ್ಯ ರಾಜ್ಯ ಪ್ರವಾಸ

Subscribe to Oneindia Kannada

ಬೆಂಗಳೂರು, ಡಿಸೆಂಬರ್ 12: ಬಿಜೆಪಿ 'ಪರಿವರ್ತನಾ ಯಾತ್ರೆ' ಹೆಸರಲ್ಲಿ ವಿಧಾನಸಭೆ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸುತ್ತಿದೆ. ಇನ್ನೊಂದು ಕಡೆ ಜೆಡಿಎಸ್ ನವರು ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಮುಂದಾಳತ್ವದಲ್ಲಿ 'ವಿಕಾಸ ಯಾತ್ರೆ' ಮಾಡುತ್ತಿದ್ದಾರೆ.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಧುಮಕದೆ ಸರಕಾರಿ ಕಾರ್ಯಕ್ರಮಗಳ ಮೂಲಕವೇ ಪ್ರಚಾರ ನಡೆಸುತ್ತಿದ್ದಾರೆ.

CM Siddaramaiah starts his state tour for ‘Nava Karnataka Nirmana’

ಇದೀಗ 'ನವ ಕರ್ನಾಟಕ ನಿರ್ಮಾಣಕ್ಕಾಗಿ' ಹೆಸರಿನಲ್ಲಿ ಒಂದು ತಿಂಗಳ ಕಾಲ ದೀರ್ಘ ರಾಜ್ಯ ಪ್ರವಾಸವನ್ನು ಸಿದ್ದರಾಮಯ್ಯ ನಡೆಸಲಿದ್ದಾರೆ. ಡಿಸೆಂಬರ್ 13, 2017ರಿಂದ ಜನವರಿ 13, 2018ರವರೆಗೆ ಈ ಪ್ರವಾಸ ನಡೆಯಲಿದೆ.

CM Siddaramaiah starts his state tour for ‘Nava Karnataka Nirmana’

ಬೀದರ್ ನಿಂದ ಸಿದ್ದರಾಮಯಯ್ಯ ತಮ್ಮ ಪ್ರವಾಸ ಆರಂಭಿಸಲಿದ್ದಾರೆ. ಅವರ ಪ್ರವಾಸದ ವೇಳಾಪಟ್ಟಿ ಇಲ್ಲಿದೆ,

1) 12-12-2017 ಮಂಗಳವಾರ

ಬೆಳಿಗ್ಗೆ 8-00 ಗಂಟೆಗೆ ಬೆಂಗಳೂರಿನಿಂದ ಪ್ರಯಾಣ

ರಾತ್ರಿ ಬೀದರ್‍ ನಲ್ಲಿ ವಾಸ್ತವ್ಯ


2) 13-12-2017 ಬುಧವಾರ : ಬೀದರ್ ಜಿಲ್ಲೆ

ಬೆಳಿಗ್ಗೆ 10-30 ಗಂಟೆ - ಬಸವಕಲ್ಯಾಣ

ಮಧ್ಯಾಹ್ನ 3-00 ಗಂಟೆ - ಕೊಪ್ಪಳ ಜಿಲ್ಲೆಗೆ ಪ್ರಯಾಣ

ರಾತ್ರಿ ಗಂಗಾವತಿಯಲ್ಲಿ ವಾಸ್ತವ್ಯ

3) 14-12-2017 ಗುರುವಾರ : ಕೊಪ್ಪಳ ಜಿಲ್ಲೆ

ಬೆಳಿಗ್ಗೆ 10-30 ಗಂಟೆ - ಕುಷ್ಠಗಿ

ಮಧ್ಯಾಹ್ನ 3-00 ಗಂಟೆಗೆ ರಾಯಚೂರು ಜಿಲ್ಲೆಗೆ ಪ್ರಯಾಣ

ರಾತ್ರಿ ರಾಯಚೂರಿನಲ್ಲಿ ವಾಸ್ತವ್ಯ

4) 15-12-2017 ಶುಕ್ರವಾರ : ರಾಯಚೂರು

ಬೆಳಿಗ್ಗೆ 10-30 ಗಂಟೆ - ಲಿಂಗಸೂಗೂರು

ರಾತ್ರಿ ಕಲಬುರಗಿಯಲ್ಲಿ ವಾಸ್ತವ್ಯ

5) 16-12-2017 ಶನಿವಾರ : ಕಲಬುರಗಿ

ಬೆಳಿಗ್ಗೆ 10-30 ಗಂಟೆ - ಅಫಜಲಪುರ

ರಾತ್ರಿ ಯಾದಗಿರಿಯಲ್ಲಿ ವಾಸ್ತವ್ಯ

6) 17-12-2017 ಭಾನುವಾರ : ಯಾದಗಿರಿ

ಬೆಳಿಗ್ಗೆ 10-30 ಗಂಟೆ - ಗುರುಮಿಠ್‍ಕಲ್

ರಾತ್ರಿ ಹೊಸಪೇಟೆಯಲ್ಲಿ ವಾಸ್ತವ್ಯ

7) 18-12-2017 ಸೋಮವಾರ : ಬಳ್ಳಾರಿ

ಬೆಳಿಗ್ಗೆ 10-30 ಗಂಟೆ - ಸಂಡೂರು

ರಾತ್ರಿ ಬೆಂಗಳೂರಿಗೆ ವಾಪಾಸ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Siddaramaiah will hold a long tour across the Karnata state in the name of 'Nava Karnataka Nirmana'. The tour will be held from December 13, 2017 to January 13, 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ