• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡವನ್ನು ಪ್ರೀತಿಸಿ, ಗೌರವಿಸಿ, ವ್ಯವಹರಿಸಿ: ಸಿಎಂ ಸಿದ್ದು ಕರೆ

By Mahesh
|

ಬೆಂಗಳೂರು, ನ.01: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಧ್ವಜಾರೋಹಣ ಮಾಡಿ 60ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಚಾಲನೆ ನೀಡಿದರು.

ಕಂಠೀರವ ಮೈದಾನದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ನಾಡಿನ ಜನತೆಯನ್ನು ಉದ್ದೇಶಿಸಿ ಸಿದ್ದರಾಮಯ್ಯ ಅವರು ಮಾಡಿದ ಭಾಷಣ ಹೀಗಿದೆ:

ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 60ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿದ್ದರಾಮಯ್ಯ, ಕನ್ನಡವನ್ನು ಪ್ರೀತಿಸಿ, ಗೌರವಿಸಿ ವ್ಯವಹರಿಸುವ ಸಂಕಲ್ಪ ಮಾಡಬೇಕು. ತಾಯಿ ಭಾಷೆಗೆ ಮಾಡುವ ಕರ್ತವ್ಯ ಇದಾಗಿದೆ ಎಂದಿದ್ದಾರೆ.

ಕನ್ನಡದ ಬೆಳವಣಿಗೆಗೆ ಕನ್ನಡವನ್ನು ಪ್ರೀತಿಸುವ, ಅಭಿಮಾನದಿಂದ ಬೆಳೆಸುವ ಮನಸ್ಸುಗಳು ಬೇಕು. ವಿದ್ಯಾರ್ಥಿಗಳು ಮುಂದೆ ವೈದ್ಯ, ಇಂಜಿನಿಯರ್ ಏನೇ ಆಗಲಿ ಆದರೆ ಮೊದಲು ಕನ್ನಡವನ್ನು ಕಲಿಯುವ ಬೆಳೆಸುವ ಮನಸ್ಸು ಮಾಡಬೇಕು. ಮಾತೃ ಭಾಷೆಯನ್ನು ಮರೆಯಬಾರದು ಎಂದು ಸಲಹೆ ನೀಡಿದರು.[ನಾನು ಬೀಫ್ ತಿನ್ನುತ್ತೀನಿ ಎಂದು ಹೇಳಿಲ್ಲ': ಸಿದ್ದರಾಮಯ್ಯ]

ನಾವು ಆಂಗ್ಲ ಭಾಷೆಯ ವಿರೋಧಿಯಲ್ಲ. ಆದರೆ, ನಮ್ಮ ಮಾತೃಭಾಷೆ ಕನ್ನಡವನ್ನೂ ಕಲಿಯಬೇಕು. ಆಂಗ್ಲ ಭಾಷೆಯ ವ್ಯಾಮೋಹದಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಬೇಡ. ಆಂಗ್ಲ ಭಾಷೆ ಸಂಪರ್ಕ ಭಾಷೆ. ಅದನ್ನೂ ಕಲಿಯುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಕನ್ನಡವೇ ಶಿಕ್ಷಣದ ಮಾಧ್ಯಮವಾಗಬೇಕು ಎಂಬುದು ಸರ್ಕಾರದ ಆಶಯ. [2014ರ ಸಂಭ್ರಮದಲ್ಲಿ ಸಿಎಂ ಭಾಷಣದ ಮುಖ್ಯಾಂಶ]

ಸುಪ್ರೀಂಕೋರ್ಟ್ ನೀಡುವ ತೀರ್ಪು ಇದಕ್ಕೆ ತಾತ್ಕಾಲಿಕ ಹಿನ್ನಡೆ ತಂದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಮಗೆ ಜಯಸಿಗುವ ವಿಶ್ವಾಸವಿದೆ ಎಂದರು. ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ, ಖ್ಯಾತ ವಿಜ್ಞಾನಿ ಸಿ.ಎನ್.ಆರ್.ರಾವ್ ಅವರಂಥವರು ಓದಿದ್ದು ಕನ್ನಡ ಮಾಧ್ಯಮದಲ್ಲೇ. ಅದನ್ನು ಅರಿತು ಕನ್ನಡದ ಮೂಲಕ ಹೊರ ಜಗತ್ತಿಗೆ ಪರಿಚಯವಾಗೋಣ. ಕನ್ನಡವನ್ನು ಎಂದಿಗೂ ಎಂದೆಂದಿಗೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಗೋಣ ಎಂದು ನುಡಿದರು.

ನಾವೆಲ್ಲರೂ ಮನುಷ್ಯರು ಎಂಬ ಮನೋಭಾವ: ಶಾಲಾ ಮಕ್ಕಳಿಗೆ 10ನೇ ತರಗತಿವರೆಗೂ ಪಠ್ಯ ಪುಸ್ತಕ, ಬಿಸಿಯೂಟ, ಸಮವಸ್ತ್ರಗಳನ್ನು ಉಚಿತವಾಗಿ ನೀಡುತ್ತಾ ಬಂದಿದ್ದೇವೆ. ಈ ಬಾರಿ ಇದರೊಂದಿಗೆ ಒಂದು ಜತೆ ಶೂ ಸಹ ನೀಡಲು ನಿರ್ಧರಿಸಿದ್ದೇವೆ. ಮಕ್ಕಳಲ್ಲಿ ಯಾವುದೇ ರೀತಿಯ ಭೇದ-ಭಾವ ಮಾಡದೆ ನಾವೆಲ್ಲರೂ ಮನುಷ್ಯರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಾತಿ, ವರ್ಗ, ವರ್ಣ ಎಂಬ ಭೇದ-ಭಾವವನ್ನು ಬೆಳೆಸಬಾರದು. ಜಾತ್ಯಾತೀತತೆ, ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಬೆಳೆಸಿ ಎಂದು ಸೂಚಿಸಿದರು. ಮಕ್ಕಳು ರಾಷ್ಟ್ರದ ಸಂಪತ್ತು. ಭವಿಷ್ಯದ ಪ್ರಜೆಗಳು. ಹಾಗಾಗಿ ರಾಷ್ಟ್ರದ ಆಸ್ತಿಯಾಗಿರುವ ಇಂತಹ ಮಕ್ಕಳಿಗೆ ಜಾಗೃತಿ ಮೂಡಿಸುವಂತಹ ಬೋಧನೆಯ ಅವಶ್ಯಕತೆ ಇದೆ. ಶಿಕ್ಷಣದ ಮೂಲಕ ಮಕ್ಕಳಲ್ಲಿ ಜವಾಬ್ದಾರಿ ಹೆಚ್ಚಿಸುವ ಕೆಲಸವಾಗಬೇಕು ಎಂದು ವಿಶ್ಲೇಷಿಸಿದರು.

1956ರ ನವೆಂಬರ್ 1ಕ್ಕೂ ಮುನ್ನ ವಿಶಾಲ ಕರ್ನಾಟಕವಾಗಿರಲಿಲ್ಲ. ಕನ್ನಡ ಮಾತನಾಡುವವರು ಹರಿದು ಹಂಚಿ ಹೋಗಿದ್ದರು. ಕರ್ನಾಟಕದ ಏಕೀಕರಣಕ್ಕಾಗಿ ಸಾಹಿತಿಗಳು, ರಾಜಕಾರಣಿಗಳು, ಹೋರಾಟಗಾರರು ಮಾಡಿದ ಹೋರಾಟದಿಂದ ಇಂದು ಕರ್ನಾಟಕ ಎಂದಾಗಿದೆ ಎಂದು ವಿವರಿಸಿದರು.

ರಾಜ್ಯಾದ್ಯಂತ ಕರ್ನಾಟಕ ರಾಜ್ಯೋತ್ಸವದ ವಜ್ರಮಹೋತ್ಸವಕ್ಕೆ ಅಕ್ಕರೆಯ ಪ್ರೀತಿಯ ಶುಭಾಶಯಗಳನ್ನು ಕೋರಿದರು. ಕನ್ನಡ ಭಾಷೆ ಬೆಳೆಸುವ ಕನ್ನಡ ಜನರನ್ನು ಕನ್ನಡಿಗಾರಿಯೇ ಬಾಳುವ ವಾತಾವರಣ ನಿರ್ಮಿಸಬೇಕಾದದ್ದು ಅತ್ಯಂತ ಅವಶ್ಯಕ ಎಂದು ಹೇಳಿದರು.

English summary
CM Siddaramaiah and his cabinet ministers celebrated 60th Kannada Rajyotsava at Kanteerava Stadium on November 01. Siddaramaiah in his speech said use of Kannada language on daily basis must be increased
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more