ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಕೇಶ್ ಆರೋಗ್ಯದಲ್ಲಿ ಚೇತರಿಕೆ ಇಲ್ಲ, ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ?

By Mahesh
|
Google Oneindia Kannada News

ಬೆಂಗಳೂರು, ಜುಲೈ 29: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ ರಾಕೇಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಗುರುವಾರ ಸಂಜೆ ವೇಳೆಗೆ ಬೆಲ್ಜಿಯಂಗೆ ಸಿದ್ದರಾಮಯ್ಯ ಅವರು ತಲುಪಿದ್ದಾರೆ.

ಇದೀಗ ಬಂದ ಸುದ್ದಿ: ಕರಳು ಬೇನೆ ಕಾಯಿಲೆಗೆ ಬಲಿಯಾದ ರಾಕೇಶ್ ಸಿದ್ದರಾಮಯ್ಯ

ಸಣ್ಣ ಕರುಳಿನ ಸಮಸ್ಯೆಯಿಂದ ಬಳಲುತ್ತಿರುವ ರಾಕೇಶ್ ಇನ್ನೂ ನಾಲ್ಕೈದು ದಿನ ತೀವ್ರ ನಿಗಾ ಘಟಕದಲ್ಲಿಯೇ ಇರುವ ಸಾಧ್ಯತೆಯಿದೆ. ಮುಂದಿನ 72 ಗಂಟೆಗಳ ಕಾಲ ಅಬ್ಸರ್ವೇಷನ್ ನಲ್ಲಿ ಇರಿಸಲಾಗಿದೆ . ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಕರೆದೊಯ್ಯುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. [ರಾಕೇಶ್ ಅಸ್ವಸ್ಥ, ಕರ್ನಾಟಕ 'ಸಿಎಂ' ಟ್ವೀಟ್ ಬಗ್ಗೆ ಆಕ್ಷೇಪ]

ಗುರುವಾರ ಸಂಜೆ 4.30ಗೆ ಬೆಲ್ಜಿಯಂನ ಬ್ರಸೆಲ್ಸ್ ತಲುಪಿದ ಸಿಎಂ ಸಿದ್ದರಾಮಯ್ಯ ಅವರನ್ನು ರಾಯಭಾರಿ ಕಚೇರಿ ಕಡೆಯಿಂದ ಮಂಜೀವ್ ಪುರಿ ಅವರು ಸ್ವಾಗತಿಸಿದರು. ಅವರ ಜೊತೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಹಾಗೂ ಸಂಸದೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಕೂಡ ಇದ್ದಾರೆ. [ರಾಕೇಶ್ ಆರೋಗ್ಯ ಚೇತರಿಕೆಗಾಗಿ ದರ್ಗಾದಲ್ಲಿ ಪ್ರಾರ್ಥನೆ]

ಬೆಲ್ಜಿಯಂನಲ್ಲಿ ಕಿರಿಯ ಪುತ್ರ ಡಾ. ಯತೀಂದ್ರ, ಕುಟುಂಬದ ಡಾಕ್ಟರ್ ರವಿಕುಮಾರ್ ಹಾಗೂ ಮತ್ತೊಬ್ಬ ತಜ್ಞ ವೈದ್ಯರು ಬೆಲ್ಜಿಯಂನಲ್ಲಿದ್ದಾರೆ. ರಾಕೇಶ್ ಅವರ ತಾಯಿ ಪಾರ್ವತಿ, ಪತ್ನಿ ಸ್ಮಿತಾ ಹಾಗೂ ರಾಕೇಶ್ ಅವರ ಗೆಳೆಯರು ಆಸ್ಪತ್ರೆಯಲ್ಲಿದ್ದಾರೆ.[ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ರಾಕೇಶ್ ಗೆ ಚಿಕಿತ್ಸೆ]

ರಾಕೇಶ್ ಗೆ ವಿವಿಧ ಅಂಗಾಂಗ ವೈಫಲ್ಯ ಆಗದಂತೆ ಯೂನಿವರ್ಸಿಟಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.. ಮುಂದೇನು? ಓದಿ...

ಬೆಲ್ಜಿಯಂನಲ್ಲಿರುವ ವೈದ್ಯರು ಏನು ಹೇಳುತ್ತಿದ್ದಾರೆ?

ಬೆಲ್ಜಿಯಂನಲ್ಲಿರುವ ವೈದ್ಯರು ಏನು ಹೇಳುತ್ತಿದ್ದಾರೆ?

ರಾಕೇಶ್ ರಲ್ಲಿ ಹೆಪಟೋ ರೆನಾಲ್ ಸಿಂಡ್ರೋಮ್(ಹಾಂಗಂದ್ರೆ?) ಬೆಳವಣಿಗೆ ಕಂಡು ಬಂದಿದ್ದು 72 ಗಂಟೆಗಳ ತೀವ್ರ ನಿಗಾ ನಂತರ ಏನಾದರೂ ಹೇಳಬಹುದು ಎಂದು ಐಸಿಯು ಮುಖ್ಯಸ್ಥ ಫಿಲಿಫೆ ಜೊರೆನ್ಸ್ ದಿ ಹಿಂದೂಗೆ ಹೇಳಿದ್ದಾರೆ. ಡಯಾಲಿಸಿಸ್ ನಡೆಸಲಾಗುತ್ತಿದೆ. ವಿವಿಧ ಅಂಗಾಂಗಗಳ ವೈಫಲ್ಯ ತಡೆಯಲು ಸತತ ಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.

ಸಿಂಗಪುರದಲ್ಲಿ ಚಿಕಿತ್ಸೆ ಸಾಧ್ಯವೇ?

ಸಿಂಗಪುರದಲ್ಲಿ ಚಿಕಿತ್ಸೆ ಸಾಧ್ಯವೇ?

ನಟ ಅಂಬರೀಶ್, ಸ್ಟಾರ್ ರಜನಿಕಾಂತ್ ಗೆ ಮರು ಜೀವ ನೀಡಿದ ಸಿಂಗಪುರದ ಎಲಿಜಬೆತ್ ಆಸ್ಪತ್ರೆಗೆ ರಾಕೇಶ್ ರನ್ನು ಸೇರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸುವ ಬಗ್ಗೆ ಮಾತುಕತೆ ನಡೆದಿದೆ. ಆದರೆ, ರಕ್ತದೊತ್ತಡ ಕಡಿಮೆಯಾಗುತ್ತಿದ್ದು, ನಿಯಂತ್ರಣಕ್ಕೆ ಬಂದ ಮೇಲಷ್ಟೆ ಈ ಬಗ್ಗೆ ನಿರ್ಧಾರಕ್ಕೆ ಬರಲು ಸಾಧ್ಯ

ನಿಜಕ್ಕೂ ರಾಕೇಶ್ ಗೆ ಬೆಲ್ಜಿಯಂನಲ್ಲಿ ಆಗಿದ್ದೇನು

ನಿಜಕ್ಕೂ ರಾಕೇಶ್ ಗೆ ಬೆಲ್ಜಿಯಂನಲ್ಲಿ ಆಗಿದ್ದೇನು

ಈ ಹಿಂದೆ ಅಪಘಾತವೊಂದರಲ್ಲಿ ಪೆಟ್ಟು ತಿದ್ದಿದ್ದ ರಾಕೇಶ್ ಅವರಿಗೆ ಕರುಳು ಬೇನೆ ಆರಂಭವಾಗಿತ್ತು, ಇದಕ್ಕಾಗಿ ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಬೆಲ್ಜಿಯಂ ಪ್ರವಾಸದ ವೇಳೆ epigastric ನೋವು ಉಲ್ಬಣವಾಗಿದೆ. ಇದು ರಕ್ತ ಹೆಪ್ಪುಗಟ್ಟುವಿಕೆ, ಕಿಡ್ನಿ ವೈಫಲ್ಯ, ವಿವಿಧ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಲ್ಲಂಥ ತೀವ್ರ ಆಘಾತಕಾರಿ ಪರಿಸ್ಥಿತಿಯಾಗಿತ್ತು. ಆದರೆ, ರಾಕೇಶ್ ಗೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದು, ಚೇತರಿಕೆ ಕಾಣಬಹುದಾಗಿದೆ.

ಜರ್ಮನಿಗೆ ಹೋಗಿದ್ದ ರಾಕೇಶ್

ಜರ್ಮನಿಗೆ ಹೋಗಿದ್ದ ರಾಕೇಶ್

ರಾಕೇಶ್ ಅವರ ತಾಯಿ ಕಡೆ ಸಂಬಂಧಿಕರು ಜರ್ಮನಿಯಲ್ಲಿದ್ದು, ಅವರನ್ನು ಕಾಣಲು ರಾಕೇಶ್ ತೆರಳಿದ್ದರು. ಫ್ರಾನ್ಸ್, ಬೆಲ್ಜಿಯಂ ಪ್ರವಾಸ ನಿರತರಾಗಿದ್ದಾಗ ಕಿಬ್ಬೊಟ್ಟೆಯಲ್ಲಿ ತೀವ್ರನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಗೆಳೆಯರ ನೆರವಿನಿಂದ ಆಸ್ಪತ್ರೆಗೆ ಸೇರಿದ್ದಾರೆ. ಬೆಲ್ಜಿಯಂನ ಬೂಮ್ ನಗರದಲ್ಲಿ ನಡೆಯುತ್ತಿದ್ದ ಎಲೆಕ್ಟ್ರಾನಿಕ್ ಮ್ಯೂಸಿಕ್ ಹಬ್ಬಕ್ಕಾಗಿ ಟುಮಾರೋ ಲ್ಯಾಂಡಿಗೆ ರಾಕೇಶ್ ಹೋಗಿದ್ದರು ಎಂದು ಗೆಳೆಯರು ಹೇಳಿದ್ದಾರೆ.

English summary
Rakesh Siddaramaiah, elder son of Chief minister Siddaramaiah who is on ventilator support at the Antwerp University Hospital in Belgium, continues to be critical.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X