'ನವ ಕರ್ನಾಟಕ ನಿರ್ಮಾಣಕ್ಕಾಗಿ' ಬೀದರ್ ನಲ್ಲಿ ಸಿದ್ದರಾಮಯ್ಯ ಮಹಾರ‍್ಯಾಲಿ

Subscribe to Oneindia Kannada
   ಸಿದ್ದರಾಮಯ್ಯನವರ ನವ ಕರ್ನಾಟಕ ನಿರ್ಮಾಣಕ್ಕಾಗಿ ಪ್ರವಾಸ ಬೀದರ್ ನಿಂದ ಶುರು | Oneindia Kannada

   ಬೀದರ್, ಡಿಸೆಂಬರ್ 13: ಮುಖ್ಯಮಂತ್ರಿ ಸಿದ್ದರಾಮಯ್ಯ 'ನವ ಕರ್ನಾಟಕ ನಿರ್ಮಾಣಕ್ಕಾಗಿ' ಹೆಸರಿನ ತಮ್ಮ ರಾಜ್ಯ ಪ್ರವಾಸವನ್ನು ಬೀದರ್ ನಿಂದ ಆರಂಭಿಸಿದ್ದಾರೆ. ಇಂದು ಬೀದರ್ ನ ಬಸವ ಕಲ್ಯಾಣದಲ್ಲಿ ಮಹಾರ‍್ಯಾಲಿ ಉದ್ದೇಶಿಸಿ ಮುಖ್ಯಮಂತ್ರಿಗಳು ಭಾಷಣ ಮಾಡಿದರು.

   'ನವ ಕರ್ನಾಟಕ ನಿರ್ಮಾಣಕ್ಕಾಗಿ' ಒಂದು ತಿಂಗಳ ದೀರ್ಘ ರಾಜ್ಯ ಪ್ರವಾಸವಾಗಿದ್ದು ಬೀದರ್ ನಿಂದ ಆರಂಭಿಸಲಾಗಿದೆ. ಡಿಸೆಂಬರ್ 13, 2017ರಿಂದ ಜನವರಿ 13, 2018ರವರೆಗೆ ಈ ಪ್ರವಾಸ ನಡೆಯಲಿದ್ದು, ಬಸ್ಸಿನಲ್ಲಿ ಸಿದ್ದರಾಮಯ್ಯ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದಾರೆ.

   ಬೀದರ್ ನಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಕಳೆದ 4 ವರ್ಷಗಳಲ್ಲಿ ಬೀದರ್ ಅಭಿವೃದ್ಧಿಗೆ ತಮ್ಮ ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ.

   ಬೀದರ್ ಅಭಿವೃದ್ಧಿಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಸಿದ್ದರಾಮಯ್ಯ ಮಾಡಿರುವ ಸರಣಿ ಟ್ವೀಟ್ ಗಳ ಮಾಹಿತಿ ಇಲ್ಲಿದೆ,

   ಹಚ್ಚ ಹಸಿರು

   ಬೀದರ್ ನಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ 2,341 ಕೃಷಿ ಹೊಂಡಗಳು, 30 ಪಾಲಿಹೌಸ್ ಗಳನ್ನು ನಿರ್ಮಾಣ ಮಾಡಲಾಗಿದೆ. ಸಾಲ ಮನ್ನಾ ಯೋಜನೆಯಡಿಯಲ್ಲಿ ಬೀದರ್ ನ 1,54,459 ಕೃಷಿಕರ 529 ಕೋಟಿ ಸಾಲ ಮನ್ನಾ ಮಾಡಲಾಗಿದೆ. 21,072 ರೈತರ 23,268 ಹೆಕ್ಟೇರ್ ಭೂಮಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ.

   ಇದೇ ಅವಧಿಯಲ್ಲಿ 6 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದ್ದು ಸದ್ಯದಲ್ಲೇ ಇನ್ನೂ 24 ಕೇಂದ್ರಗಳನ್ನು ತೆರಯಲಾಗುತ್ತದೆ ಎಂದು ಟ್ವೀಟ್ ನಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.

   ಹಸಿವು ಮುಕ್ತ ಜಿಲ್ಲೆ

   ಹಸಿವು ಮುಕ್ತ ಜಿಲ್ಲೆ

   ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 292.48 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಇ-ಪಿಡಿಎಸ್ ಮಷೀನ್ ಗಳನ್ನು ಸ್ಥಾಪಿಸಲಾಗಿದೆ. ಅನಿಲ ಭಾಗ್ಯ ಯೋಜನೆಯಡಿಯಲ್ಲಿ 45,527 ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಿರುವುದಾಗಿ ಮುಖ್ಯಮಂತ್ರಿಗಳು ವಿವರಿಸಿದ್ದಾರೆ.

   ಬಾಯಾರಿದ ಬೀದರ್ ಗೆ ನೀರಾವರಿ ಸೌಲಭ್ಯ

   ಬಾಯಾರಿದ ಬೀದರ್ ಗೆ ನೀರಾವರಿ ಸೌಲಭ್ಯ

   ಜಿಲ್ಲೆಯ 581 ಪೈಪ್ ಲೈನ್ ನೀರಾವರಿ ಯೋಜನೆಗಳನ್ನು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಇದಲ್ಲದೆ 207 ಸಣ್ಣ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 185 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಇದೇ ಅವಧಿಯಲ್ಲಿ ಸ್ಥಾಪನೆ ಮಾಡಲಾಗಿದೆ.

   ಹಿಂದುಳಿದ ವರ್ಗಗಳ ಕಲ್ಯಾಣ

   ಹಿಂದುಳಿದ ವರ್ಗಗಳ ಕಲ್ಯಾಣ

   ವಿದ್ಯಾಸಿರಿ, ಸ್ಕಾಲರ್ ಶಿಪ್ ಮತ್ತು ಶುಲ್ಕ ವಿನಾಯಿತಿ ಅಡಿಯಲ್ಲಿ ಜಿಲ್ಲೆಯ 1,96,285 ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ 72.03 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿ ನಿಲಯಗಳ ಮೂಲ ಸೌಕರ್ಯ ಅಭಿವೃದ್ಧಿಗೆ 63.80 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು ಇದರಿಂದ 21,696 ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

   7.60 ಕೋಟಿ ವೆಚ್ಚದಲ್ಲಿ 7 ಹಾಸ್ಟೆಲ್ ಗಳ ನಿರ್ಮಾಣವೂ ಜಿಲ್ಲೆಯಲ್ಲಿ ಭರದಿಂದ ಸಾಗುತ್ತಿದೆ. ಅಲೆಮಾರಿ ಸಮುದಾಯದ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ 3.27 ಖೊಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದ್ದು 2,090 ಜನರಿಗೆ ಸಹಾಯಕವಾಗಿದೆ.

   ಅಲ್ಪಸಂಖ್ಯಾತರ ಕಲ್ಯಾಣ

   ಅಲ್ಪಸಂಖ್ಯಾತರ ಕಲ್ಯಾಣ

   ವಿದ್ಯಾಸಿರಿ ಅಡಿಯಲ್ಲಿ 2.45 ಕೋಟಿ ಸ್ಕಾಲರ್ ಶಿಪ್ ಬಿಡುಗಡೆ ಮಾಡಲಾಗಿದ್ದು 2,880 ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಶಾದಿ ಭಾಗ್ಯ ಯೋಜನೆಗೆ 20.02 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು 4,004 ಮಹಿಳೆಯರಿಗೆ ಅನುಕೂಲವಾಗಿದೆ.

   ಅಲ್ಪಸಂಖ್ಯಾತರ ಸಮುದಾಯಕ್ಕೆ ಅನುಕೂಲವಾಗುವ ಅ಻ನಾಥಾಶ್ರಗಳ ನಿರ್ಮಾಣಕ್ಕೆ 3.32 ಕೋಟಿ ಅನುದಾನ ನೀಡಲಾಗಿದೆ. ಅಲ್ಪಸಂಖ್ಯಾತರ ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣಕ್ಕೆ 7.25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

   ಶೈಕ್ಷಣಿಕ ಅಭ್ಯುದಯ

   ಶೈಕ್ಷಣಿಕ ಅಭ್ಯುದಯ

   2017-18ರಲ್ಲಿ 10 ಪದವಿ ಪೂರ್ವ ಕಾಲೇಜುಗಳನ್ನು ಜಿಲ್ಲೆಗೆ ನೀಡಲಾಗಿದೆ. 25 ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 50 ಕೊಠಡಿಗಳ ನಿರ್ಮಾಣಕ್ಕೂ ಅನುದಾನ ನೀಡಲಾಗಿದೆ. ಇದಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ
   ್ಥಿಗಳಿಗೆ 3.13 ಲಕ್ಷ ರೂಪಾಯಿ ವೆಚ್ಚದಲ್ಲಿ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ.

   ಆರೋಗ್ಯವೇ ಭಾಗ್ಯ

   ಆರೋಗ್ಯವೇ ಭಾಗ್ಯ

   95.56 ಕೋಟಿ ವೆಚ್ಚದಲ್ಲಿ 540 ಬೆಡ್ ಗಳ ಬೃಹತ್ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಜತೆಗೆ 4 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ, ಐಸಿಯು ಮತ್ತು ರಕ್ತ ಬ್ಯಾಂಕ್ ನಿರ್ಮಾಣವನ್ನು ಸರಕಾರ ಆರಂಭಿಸಿದೆ. ಇದಲ್ಲದೆ 6.13 ಕೋಟಿ ವೆಚ್ಚದಲ್ಲಿ 30 ಬೆಡ್ ಗಳ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರ ಸ್ಥಾಪನೆ ಮಾಡಲಾಗಿದೆ. 24 ಆರೋಗ್ಯ ಕೇಂದ್ರಗಳನ್ನು ಕೂಡ ಇದೇ ಸಮಯದಲ್ಲಿ ನಿರ್ಮಿಸಲಾಗಿದೆ.

   ಕಂದಾಯ ಸೇವೆ

   ಕಂದಾಯ ಸೇವೆ

   44 ಸೇವೆಗಳು ಲಭ್ಯವಿರುವ ಏಕಗವಾಕ್ಷಿ ಕೇಂದ್ರಗಳನ್ನು ಎಲ್ಲಾ ತಾಲೂಕುಗಳಲ್ಲಿ ಆರಂಭಿಸಲಾಗಿದೆ. 30ಅಟಲ್ ಜೀ ಜನಸ್ನೇಹಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು 17,37,248 ಜನರು ಇದರಿಂದ ಪ್ರಯೋಜನ ಪಡೆದಿದ್ದಾರೆ.

   12 ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಲಾಗಿದೆ. ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ 18,030 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 5,656 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ.

   ಬೀದರ್ ರಸ್ತೆಗಳೀಗ ಜಗಮಗ

   ಬೀದರ್ ರಸ್ತೆಗಳೀಗ ಜಗಮಗ

   51.60 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿ 16 ಸೇತುವೆಗಳನ್ನು ನಿರ್ಮಿಸಲಾಗಿದೆ. 47.75 ಕೊಟಿ ವೆಚ್ಚದಲ್ಲಿ ಬೀದರ್ ರಿಂಗ್ ರಸ್ತೆಯನ್ನು ಸರಕಾರ ನಿರ್ಮಿಸಿದೆ. 30.14 ಕೋಟಿ ರೂಪಾಯಿ ವೆಚ್ಚದಲ್ಲಿ 121 ಕಿಲೋಮೀರ್ ಹೆದ್ದಾರಿಗಳನ್ನು ಅಭಿವೃದ್ಧಿಗೊಳಿಸಲಾಗಿದೆ. 221.92 ಕೋಟಿ ವೆಚ್ಚದಲ್ಲಿ 180 ಕಿಲೋಮೀರ್ ಉದ್ದ ರಸ್ತೆಗಳನ್ನು ಸುಧಾರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.

   ಮಹಿಳಾ ಮತ್ತು ಮಕ್ಕಳ ಕಲ್ಯಾಣ

   ಮಹಿಳಾ ಮತ್ತು ಮಕ್ಕಳ ಕಲ್ಯಾಣ

   ಸಿದ್ದರಾಮಯ್ಯ ಸರಕಾರ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಬೀದರ್ ಜಿಲ್ಲೆಯ 3,352 ಸ್ತ್ರೀ ಶಕ್ತಿ ಗುಂಪುಗಳಿಗೆ 25,000 ರೂಪಾಯಿ ಬಿಡುಗಡೆ ಮಾಡಲಾಗಿದೆ. ಮಾತೃಪೂರ್ಣ ಯೋಜನೆಯಡಿ 27,453 ಬಾಣಂತಿಯರು ಮತ್ತು ಗರ್ಭಿಣಿ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ.

   ಅಂಗನವಾಡಿ ಮಕ್ಕಳಿಗೆ ಹಾಲು ಪೂರೈಕೆ ಮಾಡಲು 32.37 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. 1250 ಫಲಾನುಭವಿಗಳಿಗೆ 1.33 ಕೋಟಿ ರೂಪಾಯಿ ಆರ್ಥಿಕ ಸಹಾಯವನ್ನೂ ನೀಡಲಾಗಿದೆ.

   ಹೀಗೆ ಟ್ವೀಟ್ ನಲ್ಲೇ ತಮ್ಮ ಸರಕಾರದ ಸಾಧನೆಗಳನ್ನು ಮುಖ್ಯಮಂತ್ರಿಗಳು ತೆರೆದಿಟ್ಟಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka Chief Minister Siddaramaiah kick starts 30 day 'NavaKarnatakaNirmana' from Bidar. The purpose of the tour is to showcase the achievements of Karnataka Congress Government during last 4.5 years.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ