ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯರಿಂದ ತೇಜಸ್ವಿ ಸಂಶೋಧನಾ ಕೇಂದ್ರ ಲೋಕಾರ್ಪಣೆ

By Mahesh
|
Google Oneindia Kannada News

ಕೊಟ್ಟಿಗೆಹಾರ (ಚಿಕ್ಕಮಗಳೂರು), ಡಿಸೆಂಬರ್ 18: ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಂಶೋಧನಾ ಕೇಂದ್ರಕ್ಕೆ ಕೊನೆಗೂ ಉದ್ಘಾಟನೆ ಭಾಗ್ಯ ಸಿಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಜನವರಿ 5 ರಂದು ಲೋಕಾರ್ಪಣೆ ಮಾಡಲಿದ್ದಾರೆ.

ಮೂಡಿಗೆರೆ ಮಾಯವಿ ತೇಜಸ್ವಿನಾಡಿನಲ್ಲಿ ಚಾರಣಮೂಡಿಗೆರೆ ಮಾಯವಿ ತೇಜಸ್ವಿನಾಡಿನಲ್ಲಿ ಚಾರಣ

ಜನವರಿ 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಡಿಗೆರೆಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಜತೆಗೆ ಕೊಟ್ಟಿಗೆಹಾರದಲ್ಲಿರುವ ತೇಜಸ್ವಿ ಸಂಶೋಧನಾ ಕೇಂದ್ರದ ಆಡಳಿತ ವಿಭಾಗವನ್ನು ಉದ್ಘಾಟಿಸಲಿದ್ದಾರೆ.

ವೆಬ್ ನಲ್ಲಿ ತೇಜಸ್ವಿ ವಿಸ್ಮಯಲೋಕ ಅನಾವರಣವೆಬ್ ನಲ್ಲಿ ತೇಜಸ್ವಿ ವಿಸ್ಮಯಲೋಕ ಅನಾವರಣ

ಸಂಶೋಧನಾ ಕೇಂದ್ರದ ಎಲ್ಲಾ ವಿಭಾಗದ ಕಾಮಗಾರಿ ಪೂರ್ಣಗೊಂಡರೆ ವಿದ್ಯಾರ್ಥಿಗಳಿಗೆ, ಯುವ ಸಮುದಾಯ, ಮಕ್ಕಳು ಮತ್ತು ಪರಿಸರಾಸಕ್ತರಿಗೆ ಜೀವವೈವಿಧ್ಯದ ಕೌತುಕಗಳನ್ನು ತಿಳಿದುಕೊಳ್ಳಲು ಅನುಕೂಲವಾಗಲಿದೆ.

ಮತ್ತೊಮ್ಮೆ ನೆನಪಾದರು ಪೂರ್ಣಚಂದ್ರ ತೇಜಸ್ವಿ...ಮತ್ತೊಮ್ಮೆ ನೆನಪಾದರು ಪೂರ್ಣಚಂದ್ರ ತೇಜಸ್ವಿ...

ಅಧ್ಯಯನಶೀಲ ವಿದ್ಯಾರ್ಥಿಗಳು ಮತ್ತು ಆಸಕ್ತರಿಗೆ ಜ್ಞಾನಾರ್ಜನೆಗೆ ಅನುವು ಮಾಡಿಕೊಡಬೇಕೆಂಬ ಉದ್ದೇಶದಿಂದ 100 ಎಕರೆ ಬಯೋರಿಸರ್ವ್ ಎಂದು ಬಾಳೂರಿನ ಅರಣ್ಯ ಪ್ರದೇಶದ ಜಾಗವನ್ನು ಪರಿಗಣಿಸಲು ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ ಎಂದು ತೇಜಸ್ವಿ ವಿಸ್ಮಯ ಪ್ರತಿಷ್ಠಾನದ ವಕ್ತಾರರು ಹೇಳಿದರು.

ಚಾರ್ಮಾಡಿ ಘಾಟಿಗೆ ಹೊಂದಿಕೊಂಡಂತೆ

ಚಾರ್ಮಾಡಿ ಘಾಟಿಗೆ ಹೊಂದಿಕೊಂಡಂತೆ

ಚಾರ್ಮಾಡಿ ಘಾಟಿಗೆ ಹೊಂದಿಕೊಂಡಂತೆ ಇರುವ ಈ ಸಂಶೋಧನಾ ಕೇಂದ್ರ ಹಾಗೂ ಇದರ ವಿಸ್ತೃತ ಯೋಜನೆಯಲ್ಲಿ ತೇಜಸ್ವಿಯವರು ಸ್ಕೂಟರ್, ಪತ್ರಗಳು, ಬಳಸಿದ ವಸ್ತುಗಳ ಸಂಗ್ರಾಹಾಲಯವು ಇಲ್ಲಿ ಇರಲಿವೆ.

ವಿಶಿಷ್ಟ ಆರ್ಕಿಡ್ ಸಸ್ಯಗಳ ಸಂಗ್ರಹ

ವಿಶಿಷ್ಟ ಆರ್ಕಿಡ್ ಸಸ್ಯಗಳ ಸಂಗ್ರಹ

ಪಶ್ಚಿಮ ಘಟ್ಟದ ವಿಶಿಷ್ಟ ಆರ್ಕಿಡ್ ಸಸ್ಯಗಳ ಸಂಗ್ರಹ ಹಾಗೂ ಪ್ರಾತ್ಯಕ್ಷಿಕೆ, ಜೈವಿಕ ಇತಿಹಾಸದ ಸಮಗ್ರ ಚಿತ್ರಣ ನೀಡುವ ಮಾಹಿತಿ ಸಂಗ್ರಹಣೆ, ಅಂತರ್ಜಾಲ ಸಂಪರ್ಕವುಳ್ಳ ಮಾಹಿತಿ ಹಾಗೂ ಗ್ರಂಥಾಲಯ ಸೌಲಭ್ಯ, ರಂಗ ಶಿಕ್ಷಣ , ಸಂಗೀತ ಹಾಗೂ ಸಂಬಂಧಿತ ಚಟುವಟಿಕೆಗೆ ಪೂರಕ ಮೂಲ ಸೌಕರ್ಯಗಳ ನಿರ್ಮಾಣವಾಗಲಿದೆ.

ಜೀವಜಗತ್ತಿನ ಕೌತುಕಗಳ ಪರಿಚಯ

ಜೀವಜಗತ್ತಿನ ಕೌತುಕಗಳ ಪರಿಚಯ

ಚಿತ್ರಕಲಾ ಶಿಬಿರಗಳು, ಫೋಟೋಗ್ರಫಿ ಕಾರ್ಯಾಗಾರಗಳು ಹಾಗೂ ಪ್ರದರ್ಶನ, 7-14 ವರ್ಷದ ವಯೋಮಾನದ ಮಕ್ಕಳಿಗೆ ಜೀವಜಗತ್ತಿನ ಕೌತುಕಗಳ ಪರಿಚಯ ಹಾಗೂ ಆಸಕ್ತಿ ಕೆರಳಿಸುವ ಯೋಜನೆಗಳು, 15-22 ವರ್ಷದ ವಯೋಮಾನದ ಯುವ ಜನತೆಗೆ ಕಲೆ, ಪರಿಸರ, ಸಾಹಸ, ವಿಜ್ಞಾನ ಮುಂತಾದುವುಗಳ ಕುರಿತು ಅಧ್ಯಯನಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

ಹಲವು ಯೋಜನೆಗಳಿವೆ

ಹಲವು ಯೋಜನೆಗಳಿವೆ

ಕೀಟಗಳ ಸಂಗ್ರಹಾಲಯ, ಸೀತೆಹೂಗಳ ಆರ್ಕಿಡೋರಿಯಂ, ಚಿಟ್ಟೆಗಳ ಉದ್ಯಾನ, ಪ್ಲಾನಿಟೋರಿಯಂ, ಚಾರಣ, ಸಹಜಕೃಷಿ, ಕನ್ನಡ ತಂತ್ರಾಂಶ ಇವು ಟ್ರಸ್ಟ್ ನ ಪ್ರಮುಖ ಯೋಜನೆಗಳು.

ಯುವಜನತೆಯ ಸಂಶೋಧನೆ ಹಾಗು ಅಧ್ಯಯನಕ್ಕೆ ಸಹಕಾರಿಯಾಗಲು ಕುವೆಂಪು, ಬೆಂಗಳೂರು, ಕೃಷಿ ವಿಶ್ವವಿದ್ಯಾಲಯದ ಜೊತೆ ಒಪ್ಪಂದ. ಸ್ಕಾಲರ್ ಶೀಪ್ ನೀಡಿಕೆ.

English summary
CM Siddaramaiah to inaugurate KP Poornachandra Tejaswi research centre on January 5, 2018 at Kottigehara, Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X