ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಜ್ರದ ವಾಚ್ ಕೊಟ್ಟ ಸಿದ್ದರಾಮಯ್ಯ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಮಾರ್ಚ್ 03 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿದ್ದ ವಜ್ರ ಖಚಿತ ಊಬ್ಲೋ ವಾಚ್ ಸರ್ಕಾರದ ಆಸ್ತಿಯಾಗಿದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಸಂಪುಟ ಸಭಾಂಗಣದಲ್ಲಿ ವಾಚ್‌ ಅನ್ನು ಇಡಲಾಗುತ್ತದೆ.

ಬುಧವಾರ ಮಧ್ಯಾಹ್ನ 3.30ಕ್ಕೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ದುಬಾರಿ ಬೆಲೆಯ ಊಬ್ಲೋ ವಾಚ್‌ ಅನ್ನು ಪ್ರತಿಪಕ್ಷಗಳ ಗದ್ದಲದ ನಡುವೆಯೇ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದರು. [ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!]

ಮುಖ್ಯಮಂತ್ರಿಗಳು ವಾಚ್‌ ಹಸ್ತಾಂತರಿಸಿದ ನಂತರವೂ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಗದ್ದಲ ನಿಲ್ಲದ ಕಾರಣ ಸದನವನ್ನು ಗುರುವಾರಕ್ಕೆ ಮುಂದೂಡಲಾಯಿತು. ನಂತರ ತಮ್ಮ ಕಚೇರಿಗೆ ಮಾಧ್ಯಮದವರನ್ನು ಕರೆದ ಕಾಗೋಡು ತಿಮ್ಮಪ್ಪ ಅವರು, ದುಬಾರಿ ವಾಚನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಅವರಿಗೆ ಹಸ್ತಾಂತರಿಸಿದರು. [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]

ಇನ್ನು ಮುಂದೆ ವಾಚ್ ಅನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಸಂಪುಟ ಸಭಾಂಗಣದಲ್ಲಿ ಇಡಲಾಗುತ್ತದೆ. ಹಿಂದಿನ ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಸಿಕ್ಕಿರುವಂತಹ ದುಬಾರಿ ಉಡುಗೊರೆಗಳು ಅಲ್ಲಿವೆ. ಆದರೆ, ಸಾರ್ವಜನಿಕರಿಗೆ ಅಲ್ಲಿಗೆ ಮುಕ್ತ ಪ್ರವೇಶವಿಲ್ಲ. ವಾಚ್ ಕೊಟ್ಟ ಸಿದ್ದರಾಮಯ್ಯ ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ.... [ಸದನದಲ್ಲಿ ವಾಚ್ ವಾರ್ : ಯಾರು, ಏನು ಹೇಳಿದರು?]

'ತೇಜೋವಧೆಗೆ ಷಡ್ಯಂತ್ರ ಮಾಡಲಾಗಿದೆ'

'ತೇಜೋವಧೆಗೆ ಷಡ್ಯಂತ್ರ ಮಾಡಲಾಗಿದೆ'

ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು,'ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ನನ್ನ ಬದುಕು ತೆರೆದ ಪುಸ್ತಕ. ಎಲ್ಲೂ ಅಕ್ರಮ ಎಸಗಿಲ್ಲ, ಭ್ರಷ್ಟಾಚಾರದಲ್ಲೂ ಭಾಗಿಯಾಗಿಲ್ಲ' ಎಂದರು. 'ನನಗೆ ವಾಚ್ ಉಡುಗೊರೆ ಕೊಟ್ಟಿದ್ದು ವ್ಯಾಪಾರಿ ಅಲ್ಲ, ವೈದ್ಯ. ಬಲವಂತ ಮಾಡಿ ಉಡುಗೊರೆ ಕೊಟ್ಟರು. ಇದರಲ್ಲಿ ತಪ್ಪಾಗಿಲ್ಲ. ಉಡುಗೊರೆ ಪಡೆಯುವುದು ಕಾನೂನು ಬಾಹಿರ ಅಲ್ಲ. ಈ ವಿಷಯದಲ್ಲಿ ನನ್ನ ತೇಜೋವಧೆಗೆ ರಾಜಕೀಯ ಷಡ್ಯಂತ್ರ ರೂಪಿಸಲಾಗಿದೆ' ಎಂದು ದೂರಿದರು.

ಸಿದ್ದರಾಮಯ್ಯ ಅವರ ಪತ್ರದಲ್ಲೇನಿದೆ?

ಸಿದ್ದರಾಮಯ್ಯ ಅವರ ಪತ್ರದಲ್ಲೇನಿದೆ?

'2015ರ ಜುಲೈನಲ್ಲಿ ಎನ್‌ಆರ್‌ಐ ಹಾಗೂ ದುಬೈ ನಿವಾಸಿಯಾಗಿರುವ ಸ್ನೇಹಿತ ಡಾ.ಗಿರೀಶ್‌ ಚಂದ್ರ ವರ್ಮಾ ಬೆಂಗಳೂರಿಗೆ ಬಂದಿದ್ದರು. ಆಗ ಊಬ್ಲೋ ಬಿಗ್ ಬ್ಯಾಂಗ್ 301 - ಎಂ ಕೈ ಗಡಿಯಾರವನ್ನು ನನಗೆ ಉಡುಗೊರೆಯಾಗಿ ನೀಡಿದ್ದಾರೆ. ಡಾ.ವರ್ಮಾ ಅವರಿಗೆ ಕರ್ನಾಟಕ ಸರ್ಕಾರ ಅಥವ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಸಂಬಂಧ, ವ್ಯವಹಾರಗಳಿಲ್ಲ. ಈ ಉಡುಗೊರೆ ಸಂಬಂಧ ಮಾರ್ಚ್ 2ರಂದು ನಾನು ತೆರಿಗೆ ಕಟ್ಟಿದ್ದೇನೆ. ಈ ವಾಚ್ ರಾಜ್ಯದ ಆಸ್ತಿ ಎಂದು ಘೋಷಣೆ ಮಾಡಿ ಸಭಾಧ್ಯಕ್ಷರಿಗೆ ಹಸ್ತಾಂತರ ಮಾಡುತ್ತಿದ್ದೇನೆ'.

ಕೇಂದ್ರದ ಏಜೆನ್ಸಿಯಿಂದ ತನಿಖೆಯಾಗಲಿ

ಕೇಂದ್ರದ ಏಜೆನ್ಸಿಯಿಂದ ತನಿಖೆಯಾಗಲಿ

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ಇದೊಂದು ಹೈಡ್ರಾಮ. ಸದನದಲ್ಲಿ ವಾಚ್ ಹಸ್ತಾಂತರ ಮಾಡುವ ಮೂಲಕ ಸ್ಪೀಕರ್‌ ಅವರಿಗೆ ಅಗೌರವ ತೋರಿಸಲಾಗಿದೆ. ಗಿರೀಶ್ ಚಂದ್ರ ಮರ್ಮಾ ಎಲ್ಲಿ ವಾಚ್ ಖರೀದಿ ಮಾಡಿದರು?, ಅದರ ಯೂನಿಕ್ ನಂಬರ್ ಏನು? ಎಂದು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಇದು ವಿದೇಶದ ವಸ್ತುವಾದ ಕಾರಣ ಕೇಂದ್ರದ ಏಜೆನ್ಸಿಯಿಂದ ತನಿಖೆಯಾಗಲಿ' ಎಂದು ಒತ್ತಾಯಿಸಿದರು.

ಲೋಕಸಭೆಯಲ್ಲೂ ವಾಚ್ ಪ್ರಸ್ತಾಪ

ಲೋಕಸಭೆಯಲ್ಲೂ ವಾಚ್ ಪ್ರಸ್ತಾಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ವಿವಾದ ಲೋಕಸಭೆಯಲ್ಲೂ ಪ್ರತಿಧ್ವನಿಸಿತು. ಸಂಸತ್‌ನಲ್ಲಿ ವಿಷಯ ಪ್ರಸ್ತಾಪಿಸಿದ ಧಾರವಾಡ ಸಂಸದ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರು, 'ಭ್ರಷ್ಟಾಚಾರದ ಕುರಿತು ಮಾತನಾಡುವ ನೀವು ನಿಮ್ಮದೇ ಸರ್ಕಾರವಿರುವ ಕರ್ನಾಟಕದಲ್ಲಿನ ಮುಖ್ಯಮಂತ್ರಿ ಸಮಾಜವಾದಿ, ಲೋಹಿಯಾವಾದಿ ಎಂದು ಹೇಳಿಕೊಳ್ಳುವ ಮೋಹವಾದಿ ಸಿದ್ದರಾಮಯ್ಯನವರು ಧರಿಸಿರುವ ವಾಚ್ ಬೆಲೆ ಎಷ್ಟು ಗೊತ್ತೇ ? ಕೇವಲ 70 ಲಕ್ಷ. ಈ ರೀತಿ ಐಶಾರಾಮಿ ವಸ್ತುಗಳ ಮೋಹನ್ನು ಹೊಂದಿರುವ ಮುಖ್ಯಮಂತ್ರಿಗಳು ಇದರ ಮೂಲವನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ನೀಡುತ್ತಿಲ್ಲ' ಎಂದು ಟೀಕಿಸಿದರು.

'ವಾಸ್ತವ ಜನರಿಗೆ ತಿಳಿಸಿ'

'ವಾಸ್ತವ ಜನರಿಗೆ ತಿಳಿಸಿ'

'ವಿವಾದಕ್ಕೆ ಕಾರಣವಾಗಿರುವ ವಾಚ್ ಅನ್ನು ಸಂಪುಟ ಸಭಾಂಗಣದಲ್ಲಿ ಇಟ್ಟ ತಕ್ಷಣ ವಾಚ್‌ ಪ್ರಕರಣ ಮುಗಿಯುವುದಿಲ್ಲ. ವಾಸ್ತವ ಏನು? ಎಂಬುದನ್ನು ಆರು ಕೋಟಿ ಜನರಿಗೆ ತಿಳಿಸಬೇಕು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ
ಒತ್ತಾಯಿಸಿದ್ದಾರೆ.

English summary
Karnataka Chief Minister Siddaramaiah finally handed over the gifted watch to the speaker along with a one-page letter. In his letter, Siddaramaiah stated that, Hublot Big Bang 301-M wrist watch was presented to him by his friend Dr.Girish Chandra Varma during his visit to Bengaluru in July 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X