ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜಾತಿಗಣತಿ ವಿರೋಧಿಸುವವರು ಜಾತಿವಾದಿಗಳು'

|
Google Oneindia Kannada News

ಬೆಂಗಳೂರು, ಏ. 15 : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. 'ಗಣತಿ ವಿರೋಧಿಸುವವರು ಕೊಳಕು ಮನಸ್ಸಿನ ಜಾತಿವಾದಿಗಳು, ಗಣತಿಯನ್ನು ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಗಣತಿ ಬಗ್ಗೆ ಕೆಲವರಿಗೆ ಆತಂಕವಿದೆ. ಅದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ? ಸಮಾಜವನ್ನು ಒಡೆಯಲು ಗಣತಿ ಕಾರ್ಯವನ್ನು ಮಾಡುತ್ತಿಲ್ಲ ಎಂದು ಹೇಳಿದರು. [ಜಾತಿ ಗಣತಿ : ಯಾವ ಜಾತಿಗೆ ಯಾವ ಕಾಲಂ?]

caste censuses

ಪ್ರತಿಯೊಂದು ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸುವುದು ಜಾತಿ ಜನಗಣತಿಯ ಹಿಂದಿರುವ ಉದ್ದೇಶ. 1931 ರ ನಂತರ ಗಣತಿ ನಡೆದಿಲ್ಲ. ಯಾರು ಯಾವ ಸ್ಥಿತಿಯಲ್ಲಿದ್ದಾರೆ? ಎಂಬುದನ್ನು ತಿಳಿದುಕೊಂಡರೆ ಅವರ ಅಭಿವೃದ್ಧಿಗೆ ಕಾರ್ಯಕ್ರಮವನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು. [ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]

ಸಿದ್ದರಾಮಯ್ಯ ಹೇಳಿದ್ದಿಷ್ಟು

* ಸರ್ಕಾರ ಎಂದಿಗೂ ಶೋಷಿತರ ಪರವಾಗಿರುತ್ತದೆ. ಜಾತಿ ಜನಗಣತಿ ವಿರೋಧಿಸುವವರು ಕೊಳಕು ಮನಸ್ಸಿನ ಜಾತಿವಾದಿಗಳು. ಜಾತಿ ಗಣತಿ ಎಂಬುದು ಜಾತಿಗಳನ್ನು ಒಟ್ಟುಗೂಡಿಸುವ ಕೆಲಸವಾಗಿದೆ.

* ರಾಜ್ಯದಲ್ಲಿ ಹಲವರಿಗೆ ಜಾತಿ ಗಣತಿ ಬಗ್ಗೆ ಆತಂಕವಿದೆ. ಅದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ? ಸಮಾಜವನ್ನು ಒಡೆಯಲು ಗಣತಿ ಕಾರ್ಯವನ್ನು ಮಾಡುತ್ತಿಲ್ಲ. ಒಗ್ಗೂಡಿಸಿ ಸಾಮಾಜಿಕ ನ್ಯಾಯ ನೀಡಲು ಮಾಡಲಾಗುತ್ತಿದೆ.

Siddaramaiah

* 1931ರ ನಂತರ ಗಣತಿ ನಡೆಸಿ ಯಾವ ಸಮುದಾಯ ಯಾವ ಸ್ಥಿತಿಯಲ್ಲಿದೆ? ಎಂಬುದನ್ನು ತಿಳಿದುಕೊಂಡರೆ ಸರ್ಕಾರ ಕಾರ್ಯಕ್ರಮ ರೂಪಿಸಲು ಸಹಾಯಕವಾಗುತ್ತದೆ. ಆದ್ದರಿಂದ ಗಣತಿಗೆ ಎಲ್ಲರೂ ಸಹಕಾರ ನೀಡಬೇಕು.

* ಏ.11ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಆರಂಭವಾಗಿದೆ. ಗಣತಿದಾರರು ಮನೆಗೆ ಬಂದಾಗ ಅವರಿಗೆ ನಿಖರವಾದ ಮಾಹಿತಿ ಕೊಡಿ. ಗಣತಿ ಯಶಸ್ವಿಯಾಗಲು ಸಹಕಾರ ನೀಡಿ.

English summary
Karnataka Chief Minister Siddaramaiah on Tuesday said, caste censuses aimed to uniting castes and not disintegrating them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X