• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೈಗಾರಿಕೆಗಳು ಬೆಂಗಳೂರು, ಮೈಸೂರಿಗೆ ಸೀಮಿತವಾಗಬಾರದು : ಸಿದ್ದರಾಮಯ್ಯ

By Gururaj S
|
Google Oneindia Kannada News

ಬೆಂಗಳೂರು, ಮಾರ್ಚ್ 04 : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸುವರ್ಣ ಮಹೋತ್ಸವ ಬೆಂಗಳೂರಿನಲ್ಲಿ ಭಾನುವಾರ ನಡೆಯಿತು. ಕೆಐಎಡಿಬಿ ಪ್ರಧಾನ ಕಚೇರಿ ನಿರ್ಮಾಣಕ್ಕೂ ಈ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಲಾಯಿತು.

ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಕಳೆದ 50 ವರ್ಷಗಳಿಂದ ಕೆಐಎಡಿಬಿ ಶ್ರಮಿಸುತ್ತಿದೆ. ಭಾನುವಾರ ಬೆಂಗಳೂರಿನ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಕರ್ನಾಟಕದ ಯಶಸ್ವಿ ಮಹಿಳಾ ಉದ್ಯಮಿಗಳ ಸಮಾವೇಶಕರ್ನಾಟಕದ ಯಶಸ್ವಿ ಮಹಿಳಾ ಉದ್ಯಮಿಗಳ ಸಮಾವೇಶ

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕೆಐಎಡಿಬಿಯ ಪ್ರಧಾನ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಭಾರೀ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಸಚಿವ ಆರ್.ವಿ.ದೇಶಪಾಂಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Siddaramaiah

ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು

Newest First Oldest First
1:02 PM, 4 Mar
ರತ್ನಪ್ರಭಾ ಅವರು ಎರಡು ವರ್ಷಗಳ ಕಾಲ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಆಗಲೇ ನೂತನ ಕೈಗಾರಿಕಾ ನೀತಿ ರಚನೆಯಾಯಿತು. 5 ಮಹಿಳಾ ಉದ್ಯಮ ಪಾರ್ಕ್‌ ಸ್ಥಾಪನೆ ಮಾಡಲಾಯಿತು.
1:02 PM, 4 Mar
ಆರ್.ವಿ.ದೇಶಪಾಂಡೆ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಇಷ್ಟು ದೀರ್ಘಕಾಲ ಕೈಗಾರಿಕಾ ಸಚಿವರು ಯಾರೂ ಆಗಿಲ್ಲ. ದೇಶಪಾಂಡೆ ಅವರು ಬುದ್ಧಿವಂತರು. ಕೈಗಾರಿಕೆ ಬೆಳವಣಿಗೆಗೆ ಅವರ ಕೊಡುಗೆಯೂ ಅಪಾರವಾಗಿದೆ.
1:02 PM, 4 Mar
ಆದ್ದರಿಂದ, ಗ್ರಾಮೀಣ, ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ತಾಪಿಸುವ ಉದ್ಯಮಿಗಳಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಮುಂದೆಯೂ ಇದನ್ನು ಮುಂದುವರೆಸುವ ಕೆಲಸ ಮಾಡಲಿದ್ದೇವೆ.
12:58 PM, 4 Mar
ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ 1.54 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಗಿದೆ. ದಲಿತ, ಮಹಿಳೆ, ಹಿಂದುಳಿದವರಿಗೆ ವಿಶೇಷವಾದ ಸವಲತ್ತುನ್ನು ನೀಡಿದ್ದೇವೆ. ಬೆಂಗಳೂರು, ಮೈಸೂರು, ಹುಬ್ಬಳ್ಳ-ಧಾರವಾಡಕ್ಕೆ ಮಾತ್ರ ಕೈಗಾರಿಕೆ ಸೀಮಿತವಾಗಬಾರದು.
12:58 PM, 4 Mar
2014-19 ಕೈಗಾರಿಕಾ ನೀತಿ ರೂಪಿಸಿದ್ದೇವೆ. ಅದು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಉದ್ಯಮ ಸ್ನೇಹಿಯಾಗಿದೆ. 2013ರಲ್ಲಿ ಹೂಡಿಕೆಯಲ್ಲಿ ರಾಜ್ಯ 11ನೇ ಸ್ಥಾನದಲ್ಲಿತ್ತು. 2016-17ನೇ ಸಾಲಿನಲ್ಲಿ 1ನೇ ಸ್ಥಾನಕ್ಕೆ ಬಂದಿದ್ದೇವೆ.
12:56 PM, 4 Mar
2014-19 ಕೈಗಾರಿಕಾ ನೀತಿ ರೂಪಿಸಿದ್ದೇವೆ. ಅದು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಉದ್ಯಮ ಸ್ನೇಹಿಯಾಗಿದೆ. 2013ರಲ್ಲಿ ಹೂಡಿಕೆಯಲ್ಲಿ ರಾಜ್ಯ 11ನೇ ಸ್ಥಾನದಲ್ಲಿತ್ತು. 2016-17ನೇ ಸಾಲಿನಲ್ಲಿ 1ನೇ ಸ್ಥಾನಕ್ಕೆ ಬಂದಿದ್ದೇವೆ.
12:54 PM, 4 Mar
ಕೌಶಲ್ಯ ಅಭಿವೃದ್ಧಿ ಇಲಾಖೆ 5 ಲಕ್ಷ ಯುವಕ ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದೆ.
12:54 PM, 4 Mar
ಮಾರುಕಟ್ಟೆಯಲ್ಲಿ ಎಂತಹ ಉದ್ಯೋಗಗಳಿಗೆ ಬೇಡಿಕೆ ಇದೆ. ಅವುಗಳ ಬಗ್ಗೆ ಕೌಶಲ್ಯಗಳನ್ನು ಕಲಿಸಬೇಕು. ಆಗ ಎಲ್ಲರಿಗೂ ಉದ್ಯೋಗ ಸಿಗುತ್ತದೆ. ಸ್ಥಳೀಯ ಜನರಿಗೂ ಉದ್ಯೋಗ ಸಿಗುತ್ತದೆ.
12:50 PM, 4 Mar
ಸಣ್ಣ, ಗುಡಿ ಕೈಗಾರಿಕೆಗಳಿಗೆ ಆದ್ಯತೆ ಸಿಗಬೇಕು ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ಆದರೆ, ಆ ರೀತಿಯ ನೀತಿ ನಮ್ಮ ದೇಶದಲ್ಲಿ ಇಲ್ಲ. ಬೃಹತ್ ಕೈಗಾರಿಕೆಗಳಿಗೆ ಆದ್ಯತೆ ಹೆಚ್ಚು ಸಿಗುತ್ತಿದೆ.
12:50 PM, 4 Mar
ಉದ್ಯೋಗ ಸೃಷ್ಟಿ ಮಾಡುವುದು ಬಹಳ ದೊಡ್ಡ ಕೆಲಸ. ಭಾರತದಂತಹ ಹೆಚ್ಚು ಜನಸಂಸಖ್ಯೆ ಹೊಂದಿರುವ ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವುದು ಸವಾಲು. ಯಾವ ತರಹದ ಕೈಗಾರಿಕೆಗಳು ಬೆಳೆಯಬೇಕು ಎಂದು ಸರ್ಕಾರ ನಿರ್ಧರಿಸಬೇಕು.
12:47 PM, 4 Mar
ಈ 165 ಪ್ರದೇಶದಲ್ಲಿ ನೂರಾರು ಕೈಗಾರಿಕೆಗಳು ಬಂದಿದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿದೆ. ಒಂದು ರಾಜ್ಯ, ದೇಶ ಸರ್ವತೋಮುಖವಾಗಿ ಅಭಿವೃದ್ಧಿಯಾಗಬೇಕು ಎಂದರೆ ರಾಜ್ಯದ ಎಲ್ಲಾ ಜನರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಸಿಗಬೇಕು
12:47 PM, 4 Mar
ರಾಜ್ಯದಲ್ಲಿ ಕೈಗಾರಿಕೆಗಳು ಬೆಳೆಯಬೇಕಾದರೆ, ಕೈಗಾರಿಕೆಗಳು ಬರಬೇಕಾದರೆ ಭೂಮಿಯನ್ನು ಅಭಿವೃದ್ಧಿಪಡಿಸಿ ಕೊಡಬೇಕು. 165 ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ನೀಡಲಾಗಿದೆ.
12:45 PM, 4 Mar
ಕೆಐಎಡಿಬಿ ಕಳೆದ 50 ವರ್ಷಗಳಲ್ಲಿ ರಾಜ್ಯದ ಕೈಗಾರಿಕೆಗಳ ಬೆಳವಣಿಗೆಗೆ ಮಹತ್ತರ ಪಾತ್ರ ವಹಿಸಿದೆ. ಜೊತೆಗೆ ಇಷ್ಟು ವರ್ಷಗಳ ಕಾಲ ಕೆಐಎಡಿಬಿ ತನ್ನದೇ ಆದ ಸ್ವಂತ ಕಟ್ಟಡ ಇರಲಿಲ್ಲ. ಇಂದು ಸ್ವಂತ ಕಟ್ಟಡ ನಿರ್ಮಾಣಕ್ಕೆ ಶಂಕಿ ಸ್ಥಾಪನೆ ಮಾಡಲಾಗಿದೆ.
12:41 PM, 4 Mar
ಕೆಐಎಡಿಬಿ 50 ವರ್ಷಗಳನ್ನು ಪೂರ್ಣಗೊಳಿಸಿದೆ. ಯಾವುದೇ ಸಂಸ್ಥೆ 50 ವರ್ಷಗಳನ್ನು ಪೂರೈಸುವುದು ಒಂದು ಮಹತ್ವದ ಮೈಲಿಗಲ್ಲು. ವಯಸ್ಸು ಹೆಚ್ಚಾಗುತ್ತ ಮನಷ್ಯ ದುರ್ಬಲಗೊಳ್ಳುತ್ತಾರೆ. ಆದರೆ, ಸಂಸ್ಥೆಗಳು ಸದೃಢವಾಗುತ್ತವೆ.

English summary
Karnataka Chief Minister Siddaramaiah on March 4, 2018 addressed Golden Jubilee celebrations of Karnataka Industrial Area Development Board (KIADB). Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X