ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸ್ಥಾನಕ್ಕಾಗಿ ಪ್ರಯತ್ನ: ಅರುಣ್ ಸಿಂಗ್ ಭೇಟಿಯಾದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

|
Google Oneindia Kannada News

ನವದೆಹಲಿ, ಫೆ.9: ಸಚಿವ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ಆರಂಭಿಸಿರುವ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡು ಮಾತುಕತೆ ನಡೆಸಿದರು.

ಮುಖ್ಯಮಂತ್ರಿಯ ಎರಡು ದಿನ ದೆಹಲಿ ಪ್ರವಾಸದ ವೇಳೆ ಬಸವರಾಜ ಬೊಮ್ಮಾಯಿ ಅವರೊಂದಿಗೆ ತೆರಳಿದ್ದ ರೇಣುಕಾಚಾರ್ಯ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಸದ್ಯದಲ್ಲಿಯೇ ಉತ್ತಮ ಸ್ಥಾನ ಸಿಗಲಿದೆ ಎಂಬ ಆಶ್ವಾಸನೆಯನ್ನು ಅರುಣ್ ಸಿಂಗ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಪುಟದ ಸಚಿವರ ಬಗ್ಗೆ ರೇಣುಕಾಚಾರ್ಯ ಇತ್ತೀಚೆಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಕೆಲವು ಸಚಿವರು ಶಾಸಕರ ದೂರವಾಣಿ ಕರೆಯ ಸ್ವೀಕರಿಸುವುದಿಲ್ಲ. ಅಲ್ಲದೆ, ನಮ್ಮ ಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳನ್ನೂ ಮಾಡಿ ಕೊಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

CM Political secretary MP Renukacharya met bjp state incharge Arun singh

ಮಾತುಕತೆಯ ಸಂದರ್ಭದಲ್ಲಿ ಅರುಣ್ ಸಿಂಗ್ ಅವರು ಕೆಲವು ಸಚಿವರ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾದಂತೆ ಯಾರೆಲ್ಲ ಸಚಿವರು ಶಾಸಕರ

ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿಲ್ಲ ಎಂಬುದರ ಕುರಿತು ವಿವರ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಳ್ಮೆಯಿಂದ ಇರಿ

ಇನ್ನು ಮಾತುಕತೆಯ ವೇಳೆ ಅರುಣ್ ಸಿಂಗ್ ಅವರು ರೇಣುಕಾಚಾರ್ಯ ಅವರಿಗೆ ಸಂಯಮದಿಂದ ಇರುವಂತೆ ಕಿವಿಮಾತು ಹೇಳಿದ್ದಾರೆ.

CM Political secretary MP Renukacharya met bjp state incharge Arun singh

ನಿಮಗೆ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ. ಕೊರೊನಾ ಸಂದರ್ಭದಲ್ಲಿ ನೀವು ಮಾಡಿರುವ ಕೆಲಸಗಳನ್ನು ವರಿಷ್ಟರು ಗಮನಿಸಿದ್ದಾರೆ. ಸಚಿವ ಸ್ಥಾನ ನಿಮಗೆ ಹಿಂದೆಯೇ ಸಿಗಬೇಕಿತ್ತು. ಕೆಲವು ‌ಕಾರಣಗಳಿಂದ ಕೈ ತಪ್ಪಿ ಹೋಗಿದೆ. ಪಕ್ಷವು ನೀವು ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಮೆಚ್ಚಿಕೊಂಡಿದೆ. ತಾಳ್ಮೆಯಿಂದ ಇದ್ದರೆ ಖಂಡಿತವಾಗಿಯೂ ನಿಮಗೆ ಉತ್ತಮ ಭವಿಷ್ಯ ಇದೆ ಭರವಸೆ ಕೊಟ್ಟಿದ್ದಾರೆ.ಸೂಕ್ತ ಕಾಲದಲ್ಲಿ ಪಕ್ಷವು ನಿಮಗೆ ಮಹತ್ವದ ಜವಾಬ್ದಾರಿ ನೀಡಲಿದೆ ಎಂಬ ಅಭಯ ನೀಡಿದ್ದಾರೆ ಎನ್ನಲಾಗುತ್ತಿದೆ.

ನಿಮ್ಮ ಬಗ್ಗೆ ವೈಯಕ್ತಿಕವಾಗಿ ನನಗೆ ಬಹಳಷ್ಟು ಗೌರವವಿದೆ. ರಾಜಕೀಯದಲ್ಲಿ ಸಹನೆ ಮತ್ತು ತಾಳ್ಮೆ ಮುಖ್ಯ.ಶೀಘ್ರದಲ್ಲೇ ನಿಮ್ಮ ಭವಿಷ್ಯವು ಉಜ್ವಲವಾಗಲಿದೆ ಎಂದು ಅರುಣ್ ‌ಸಿಂಗ್ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ರೇಣುಕಾಚಾರ್ಯ ಎಂ‌.ಪಿ.ಕುಮಾರಸ್ವಾಮಿ, ಶಿವರಾಜ್ ಪಾಟೀಲ್ ಅವರುಗಳು ಕೇಂದ್ರದ ಸಂಸದೀಯ ವ್ಯವಹಾರಗಳ ‌ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

English summary
Chief Minister Political Secretary M.P. Renukacharya met Arun Singh in charge of the state BJP in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X