ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲಮನ್ನಾ ಆಗಿಲ್ಲ ಎಂದ ಮೋದಿಗೆ ಅಂಕಿ-ಅಂಶ ನೀಡಿದ ಕುಮಾರಸ್ವಾಮಿ

|
Google Oneindia Kannada News

Recommended Video

ನರೇಂದ್ರ ಮೋದಿಯವರ ಸಾಲ ಮನ್ನಾ ಆಗಿಲ್ಲ ಎಂಬ ಮಾತಿಗೆ ಎಚ್ ಡಿ ಕೆ ಹೇಳಿದ್ದು ಹೀಗೆ

ಬೆಂಗಳೂರು, ಫೆಬ್ರವರಿ 08: ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಇಂದು ಮಾಡಿದ ಭಾಷಣದಲ್ಲಿ ಕರ್ನಾಟಕದ ಸಾಲಮನ್ನಾ ಬಗ್ಗೆ ಮಾಡಿದ ಟೀಕೆಗೆ ಸಿಎಂ ಕುಮಾರಸ್ವಾಮಿ ಅವರು ಟ್ವಿಟ್ಟರ್‌ ಮೂಲಕ ಉತ್ತರ ನೀಡಿದ್ದಾರೆ.

ಸಂಸತ್‌ನಲ್ಲಿ ಮಾತನಾಡಿದ್ದ ಮೋದಿ ಅವರು, ಕಾಂಗ್ರೆಸ್‌ನ ರೈತರ ಸಾಲಮನ್ನಾ ಭರವಸೆಯನ್ನು ಟೀಕಿಸುತ್ತಾ, ಕರ್ನಾಟಕದಲ್ಲಿ ಈ ವರೆಗೆ ಕೇವಲ 7000 ರೈತರ ಸಾಲಮನ್ನಾ ಆಗಿದೆ ಎಂದಿದ್ದರು.

CM Kumaraswamy tweets farmer loan waive off details to Modi

ಇದಕ್ಕೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ, ಈಗಾಗಲೇ 1900 ಕೋಟಿ ಸಾಲಮನ್ನಾ ಆಗಿದೆ. ಇದರಿಂದ 4 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದು ಸಿಎಂ ಅವರು ಹೇಳಿದ್ದಾರೆ.

ಬಜೆಟ್ ಮಂಡನೆ ಬಳಿಕವೇ ಬಿಜೆಪಿಗೆ ಬಜೆಟ್ ಪ್ರತಿ: ಎಚ್‌ಡಿಕೆ ತಂತ್ರಬಜೆಟ್ ಮಂಡನೆ ಬಳಿಕವೇ ಬಿಜೆಪಿಗೆ ಬಜೆಟ್ ಪ್ರತಿ: ಎಚ್‌ಡಿಕೆ ತಂತ್ರ

ಇದೇ ಫೆಬ್ರವರಿ ತಿಂಗಳಲ್ಲಿ ಅರ್ಹ ರೈತರ ಖಾಸಗಿ ಬ್ಯಾಂಕುಗಳ ಬೆಳೆ ಸಾಲದ ಮೊದಲ ಕಂತು ಪಾವತಿ ಮಾಡಲಾಗುತ್ತದೆ ಎಂದು ಸಿಎಂ ಟ್ವೀಟ್‌ನಲ್ಲಿ ಹೇಳಿದ್ದಾರೆ. ರೈತ ಸಾಲ ಮನ್ನಾದ ಮಾಹಿತಿಯುಳ್ಳ ಸರ್ಕಾರದ ವೆಬ್‌ಸೈಟ್ ವಿಳಾಸವನ್ನೂ ಟ್ವೀಟ್‌ಗೆ ಲಗತ್ತಿಸಿದ್ದಾರೆ.

ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಗ್ರಹಚಾರ ಬಿಡಿಸಿದ ನರೇಂದ್ರ ಮೋದಿಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಗ್ರಹಚಾರ ಬಿಡಿಸಿದ ನರೇಂದ್ರ ಮೋದಿ

ಮೋದಿ ಅವರು ಪ್ರಜಾಪ್ರಭುತ್ವದ ದೇವಸ್ಥಾನವಾದ ಸಂಸತ್‌ನಲ್ಲಿ ನಿಂದು ತಪ್ಪು ಮಾಹಿತಿ ಹರಡುತ್ತಿರುವುದು ದುರಾದೃಷ್ಟಕರ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನಾಳೆ ಮೈತ್ರಿ ಸರ್ಕಾರದ ಎರಡನೇ ಬಜೆಟ್ ಅನ್ನು ಕುಮಾರಸ್ವಾಮಿ ಮಂಡಿಸಲಿದ್ದು, ಅರ್ಹ ರೈತರ ಖಾಸಗಿ ಬ್ಯಾಂಕುಗಳ ಬೆಳೆ ಸಾಲದ ಮೊದಲ ಕಂತಿನ ಹಣವನ್ನು ಬಜೆಟ್‌ನಲ್ಲಿ ಘೋಷಿಸುವ ಎಲ್ಲಾ ಸಾಧ್ಯತೆಗಳು ಇವೆ.

ಸಂಸತ್ತಿನಲ್ಲಿ ಕೆಣಕಿದ ಮೋದಿಗೆ ಟ್ವಿಟ್ಟರ್‌ನಲ್ಲಿ ದೇವೇಗೌಡ ಉತ್ತರ ಸಂಸತ್ತಿನಲ್ಲಿ ಕೆಣಕಿದ ಮೋದಿಗೆ ಟ್ವಿಟ್ಟರ್‌ನಲ್ಲಿ ದೇವೇಗೌಡ ಉತ್ತರ

ಮೋದಿ ಅವರು ತಮ್ಮ ಭಾಷಣದಲ್ಲಿ ದೇವೇಗೌಡ ಅವರ ಉಲ್ಲೇಖವನ್ನೂ ಮಾಡಿದ್ದರು. ಅದಕ್ಕೆ ದೇವೇಗೌಡ ಅವರು ಸಹ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

English summary
CM Kumaraswamy tweets to Modi and give details of farmer loan waive off. He said 1900 crore agriculture loan of 4 lakh farmers has been waive off till now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X