ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಡ್ ಶೆಡ್ಡಿಂಗ್ ಮಾಡದಂತೆ ಎಚ್‌ಡಿ ಕುಮಾರಸ್ವಾಮಿ ಸೂಚನೆ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿಯಿಂದ ಲೋಡ್ ಶೆಡ್ಡಿಂಗ್ ಮಾಡದಂತೆ ಸೂಚನೆ | oneindia Kannada

ಬೆಂಗಳೂರು, ಅಕ್ಟೋಬರ್ 24: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿತ್ತು ಜತೆಗೆ ವಿದ್ಯುತ್ ಉತ್ಪಾದನೆಯಲ್ಲಿ ಕೂಡ ತೊಂದರೆ ಕಾಣಿಸಿಕೊಂಡಿತ್ತು ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ಕುರಿತು ಆಲೋಚಿಸಲಾಗಿತ್ತು.

ವಿದ್ಯುತ್ ಕೊರತೆ : ಬೆಂಗಳೂರಲ್ಲಿ 1 ಗಂಟೆ ಲೋಡ್ ಶೆಡ್ಡಿಂಗ್? ವಿದ್ಯುತ್ ಕೊರತೆ : ಬೆಂಗಳೂರಲ್ಲಿ 1 ಗಂಟೆ ಲೋಡ್ ಶೆಡ್ಡಿಂಗ್?

ಜೆಸ್ಕಾಂ ಹಾಗೂ ಬೆಸ್ಕಾಂ ಈಗಾಗಲೇ ಲೋಡ್ ಶೆಡ್ಡಿಂಗ್ ಮಾಡುವಂತೆ ಆದೇಶವನ್ನೂ ಹೊರಡಿಸಿತ್ತು, ರಾಜ್ಯದ ಜನರಿಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಈ ಕುರಿತು ಇಂಧನ ಇಲಾಖೆ ಕಾರ್ಯದರ್ಶಿ ಹಾಗೂ ಎಂಡಿ ಜತೆ ಚರ್ಚೆ ನಡೆಸಿದ್ದಾರೆ.

ನವೆಂಬರ್ 01ರಿಂದ ಸುಸ್ಥಿರ ಕೃಷಿ ಕ್ರಾಂತಿಗೆ ಮುನ್ನುಡಿ : ಎಚ್ಡಿಕೆ ನವೆಂಬರ್ 01ರಿಂದ ಸುಸ್ಥಿರ ಕೃಷಿ ಕ್ರಾಂತಿಗೆ ಮುನ್ನುಡಿ : ಎಚ್ಡಿಕೆ

ರಾಜ್ಯದ ಐದು ವಿಭಾಗಗಳಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ಸೂಚನೆ ನೀಡಿದ್ದಾರೆ, ರಾಜ್ಯದ ಜನರು ಹಾಗೂ ರೈತರಿಗೆ ವರ್ಷಪೂರ್ತಿ ವಿದ್ಯುತ್ ಬೆನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ನಾಣು ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಚನೆ ನೀಡುವವರೆಗೂ ಯಾವುದೇ ಆದೇಶ ಹೊರಡಿಸುವ ಹಾಗಿಲ್ಲ ಎಂದು ಬೆಸ್ಕಾಂ, ಜೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂಗೆ ಸೂಚನೆ ನೀಡಿದ್ದಾರೆ.

ಜಾತಿ ಗಣತಿ ಬಹಿರಂಗಪಡಿಸುವ ಪ್ರಸ್ತಾವವೇ ಇಲ್ಲ: ಕುಮಾರಸ್ವಾಮಿ ಜಾತಿ ಗಣತಿ ಬಹಿರಂಗಪಡಿಸುವ ಪ್ರಸ್ತಾವವೇ ಇಲ್ಲ: ಕುಮಾರಸ್ವಾಮಿ

CM kumaraswamy intervenes to control load shedding

ರೈತರಿಗೆ ಏಳು ಗಂಟೆ ಮಾತ್ರ ನಿರಂತರ 3 ಫೇಸ್ ವಿದ್ಯುತ್ ಪೂರೈಸಲಾಗುತ್ತದೆ, ಗ್ರಾಮೀಣ ಭಾಗದಲ್ಲೂ ಲೋಡ್ ಶೆಡ್ಡಿಂಗ್ ಮಾಡುವಂತೆ ಆದೇಶ ನೀಡಲಾಗಿತ್ತು. ಗ್ರಾಮೀಣ ಭಾಗದಲ್ಲಿ 8 ಗಂಟೆ ವಿದ್ಯುತ್ ಕಡಿತಗೊಳಿಸಲು ಆದೇಶ ನೀಡಲಾಗಿತ್ತು ಇದಕ್ಕೆ ಕುಮಾರಸ್ವಾಮಿ ಬ್ರೇಕ್ ಹಾಕಿದ್ದಾರೆ.

English summary
CM kumaraswamy gave instructions to bescom officers that not to make any load shedding. Bescom already issued order to make load shedding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X