ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ್ರ ಮನೆಯಲ್ಲಿ ಕುಮಾರಸ್ವಾಮಿ: ಮಣ್ಣಿನಮಗನ ಆಟವ ಬಲ್ಲವರಾರು?

ಸಂಕ್ರಾಂತಿ ಹಬ್ಬದ ಶುಭಾಶಯವನ್ನು, ಬಿಜೆಪಿಗೆ ನಾಟುವಂತೆ, ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, ಮತ್ತು ಜೆಡಿಎಸ್ ಶಾಸಕಾಂಗ ಸಭೆ ನಡೆಯುತ್ತಿಲ್ಲ ಎಂದು ಹೇಳಿದ್ದನ್ನು ಬಿಟ್ಟರೆ, ಗೌಡರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

|
Google Oneindia Kannada News

Recommended Video

ಎಚ್ ಡಿ ದೇವೇಗೌಡ್ರ ಮನೆಯಲ್ಲಿ ಎಚ್ ಡಿ ಕುಮಾರಸ್ವಾಮಿ | ಮುಂದಿನ ತಂತ್ರ ಏನು? | Oneindia Kannada

ರಾಜ್ಯ ರಾಜಕಾರಣದಲ್ಲಿ ಹಿಂದಿನಿಂದಲೂ ಒಂದು ಮಾತಿದೆ. 'ಎಲ್ಲರದ್ದೂ ಒಂದು ರಾಜಕೀಯವಾದರೆ, ದೇವೇಗೌಡರ ರಾಜಕೀಯವೇ ಇನ್ನೊಂದು' ಎಂದು. ಅದಕ್ಕೇ ಅವರನ್ನು 24X7 ಪೊಲಿಟಿಶಿಯನ್ ಎಂದು ಕರೆಯುವುದು.

ಅದೇನೇ ಇರಲಿ.. ಸದ್ಯ ರಾಜ್ಯ ರಾಜಕೀಯಯದ 'ಮಕರ ಸಂಕ್ರಾಂತಿ ಆಪರೇಷನ್ ಕಮಲ' ಆವೃತ್ತಿಯಲ್ಲಿ, ಇಬ್ಬರು ಪಕ್ಷೇತರರು ಸಮ್ಮಿಶ್ರ ಸರಕಾರಕ್ಕೆ ವಿದಾಯ ಹೇಳಿರುವುದು ಸುದ್ದಿ. ಮುಳಬಾಗಿಲು ಶಾಸಕ ಎಚ್.ನಾಗೇಶ್ ಮತ್ತು ರಾಣೆಬೆನ್ನೂರು ಶಾಸಕ ಆರ್.ಶಂಕರ್ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಿದ್ದಾರೆ.

ಇಬ್ಬರ ಬೆಂಬಲ ವಾಪಸಾತಿಯಿಂದ, ಕುಮಾರಸ್ವಾಮಿ ಸರಕಾರದ ಬುಡವೇನೂ ಅಲ್ಲಾಡದಿದ್ದರೂ, ದೆಹಲಿಯಲ್ಲಿ ಕೂತು, ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಮುಖಂಡರಿಗೆ ನೆಮ್ಮದಿಯಿಂದ ಎಳ್ಳುಬೆಲ್ಲ ತಿನ್ನಲು ಯಡಿಯೂರಪ್ಪ ಬಿಡಲಿಲ್ಲ ಎನ್ನುವುದು ಅಷ್ಟೇ ಸತ್ಯ.

'ಸಿಎಂ ಕ್ಲರ್ಕ್' ಮೋದಿ ಹೇಳಿಕೆ: ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನ ಎಂದ ದೇವೇಗೌಡ 'ಸಿಎಂ ಕ್ಲರ್ಕ್' ಮೋದಿ ಹೇಳಿಕೆ: ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನ ಎಂದ ದೇವೇಗೌಡ

ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ, ಸಂಕ್ರಾಂತಿ ಹಬ್ಬದ ಶುಭಾಶಯವನ್ನು, ಬಿಜೆಪಿಗೆ ನಾಟುವಂತೆ, ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, ಮತ್ತು ಜೆಡಿಎಸ್ ಶಾಸಕಾಂಗ ಸಭೆ ನಡೆಯುತ್ತಿಲ್ಲ ಎಂದು ಹೇಳಿದ್ದನ್ನು ಬಿಟ್ಟರೆ, ಗೌಡರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಗೌಡ್ರು

ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಗೌಡ್ರು

ಪದ್ಮನಾಭನಗರದಲ್ಲಿ ಕೂತು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಗೌಡ್ರು ತಮ್ಮ ಪುತ್ರ ಕುಮಾರಸ್ವಾಮಿಯವರನ್ನು ಮನೆಗೆ ಕರೆಸಿಕೊಂಡಿದ್ದಾರೆ.ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಅನ್ನು ವೀಕ್ಷಿಸಿ, ಎಚ್ಡಿಕೆ, ತಂದೆಯ ಬಳಿಗೆ ಹೋಗಿದ್ದಾರೆ.

ಆಪರೇಷನ್ ಕಮಲ : ಕರ್ನಾಟಕ ವಿಧಾನಸಭೆ ಬಲಾಬಲದ ಲೆಕ್ಕಾಚಾರ ಆಪರೇಷನ್ ಕಮಲ : ಕರ್ನಾಟಕ ವಿಧಾನಸಭೆ ಬಲಾಬಲದ ಲೆಕ್ಕಾಚಾರ

ಆಪರೇಷನ್ ಪ್ರಯತ್ನ ಇದು ಮೊದಲೇನೂ ಅಲ್ಲ

ಆಪರೇಷನ್ ಪ್ರಯತ್ನ ಇದು ಮೊದಲೇನೂ ಅಲ್ಲ

ಸರಳ ಬಹುಮತಕ್ಕಿಂತ ನಾಲ್ಕೈದು ಹೆಚ್ಚೇ ಸೀಟ್ ಅನ್ನು ಹೊಂದಿರುವ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಬಿಜೆಪಿ ನಡೆಸುತ್ತಿರುವ ಆಪರೇಷನ್ ಪ್ರಯತ್ನ ಇದು ಮೊದಲೇನೂ ಅಲ್ಲ. ಆದರೆ, ಈ ಬಾರಿ ಇಬ್ಬರು ಪಕ್ಷೇತರರನ್ನು ಗುಡ್ ಬೈ ಹೇಳಿಸುವಲ್ಲಿ ಯಶಸ್ವಿಯಾಗಿರುವುದರಿಂದ, ಬಿಜೆಪಿಯ ಮುಂದಿನ ನಡೆ, ಗೌಡರಿಗೂ ಸವಾಲಾಗಿ ಪರಿಣಮಿಸಿದೆ ಎನ್ನುವ ಮಾಹಿತಿಯಿದೆ.

ಬ್ರೇಕಿಂಗ್ ನ್ಯೂಸ್ : ಇಬ್ಬರು ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಬ್ರೇಕಿಂಗ್ ನ್ಯೂಸ್ : ಇಬ್ಬರು ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್

ಜೆಡಿಎಸ್ ಕೂಡಾ ಬಿಜೆಪಿ ಬುಟ್ಟಿಗೆ ಕೈಹಾಕಿದೆ

ಜೆಡಿಎಸ್ ಕೂಡಾ ಬಿಜೆಪಿ ಬುಟ್ಟಿಗೆ ಕೈಹಾಕಿದೆ

ಕೆಲವೊಂದು ಮೂಲಗಳ ಪ್ರಕಾರ, ಜೆಡಿಎಸ್ ಕೂಡಾ ಬಿಜೆಪಿ ಬುಟ್ಟಿಗೆ ಕೈಹಾಕಿದೆ. ಮೂವರು ಶಾಸಕರನ್ನು ಸೆಳೆಯುವಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದೆ ಎನ್ನುವ ಸುದ್ದಿಯಿದೆ. ಇಬ್ಬರು ಬೆಂಬಲ ವಾಪಸ್ ಪಡೆದಿರುವುದು, ಸದ್ಯದ ಮಟ್ಟಿಗೆ ಬಿಜೆಪಿ ಮೇಲುಗೈ ಸಾಧಿಸಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಸಭೆ ನಡುವೆ ಮಾತನಾಡಿದ ಮಗ ರೇವಣ್ಣನ ಹೊರಕಳುಹಿಸಿದ ದೇವೇಗೌಡ

ಕುಮಾರಸ್ವಾಮಿ ಸರಕಾರ

ಕುಮಾರಸ್ವಾಮಿ ಸರಕಾರ

ಕುಮಾರಸ್ವಾಮಿ ಸರಕಾರವನ್ನು ಸರಳ ಬಹುಮತಕ್ಕಿಂತ ಕೆಳಕ್ಕೆ ತಳ್ಳಲು ಬಿಜೆಪಿಗೆ ಕನಿಷ್ಠ 9-10 ಶಾಸಕರ ಅವಶ್ಯಕತೆಯಿದೆ. ಅಷ್ಟು ಸ್ಥಾನವನ್ನು ಹೊಂದಿಸುವುದು ಬಿಜೆಪಿಗೆ ಕಷ್ಟ ಎನ್ನುವುದು, ಗೌಡರಿಗೆ ಅರಿಯದ ವಿಷಯವೇನೂ ಅಲ್ಲ. ಸದ್ಯದ ಮಟ್ಟಿಗೆ ಮಗನ ಕುರ್ಚಿ ಅಲ್ಲಾಡುವುದಿಲ್ಲ ಎನ್ನುವುದು ಗೌಡರಿಗೆ ಖಾತ್ರಿಯಾಗಿರುವುದರಿಂದಲೇ, ಈ ಎಲ್ಲಾ ಬೆಳವಣಿಗೆಗಳನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಹಲವು ಏಳುಬೀಳುಗಳನ್ನು ಕಂಡಿರುವ ದೇವೇಗೌಡ್ರು

ಹಲವು ಏಳುಬೀಳುಗಳನ್ನು ಕಂಡಿರುವ ದೇವೇಗೌಡ್ರು

ತಮ್ಮ ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ದೇವೇಗೌಡ್ರು, ಮಗನನ್ನು ಮನೆಗೆ ಕರೆಸಿಕೊಂಡಿದ್ದಾರೆ. ಮಗನಿಗೆ ಯಾವ ರೀತಿಯ ಸೂಚನೆ, ಐಡಿಯಾವನ್ನು ಗೌಡ್ರು ಕೊಡಲಿದ್ದಾರೆ. ಮುಂದಿನ ರಾಜಕೀಯ ನಡೆ ಹೇಗಿಡಬೇಕು, ಯಾವ ರೀತಿ ಮಾತನಾಡಬೇಕು ಎಂದು ಕುಮಾರಸ್ವಾಮಿಗೆ ಯಾವ ಉಪದೇಶವನ್ನು ಬೋಧಿಸಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

English summary
Political development in Karnataka. Chief Minister Kumaraswamy in Deve Gowda's house: What will be the next political move by JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X