• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ ಅನಾರೋಗ್ಯ: ಜಯದೇವ ವೈದ್ಯರ ರಿಪೋರ್ಟ್‌

|
   ಎಚ್ ಡಿ ಕೆ ಅನಾರೋಗ್ಯದ ಹಿನ್ನೆಲೆ ಜಯದೇವ ಆಸ್ಪತ್ರಯಿಂದ ಬಂತು ವರದಿ | Oneindia Kannada

   ಬೆಂಗಳೂರು, ಅಕ್ಟೋಬರ್ 24: ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಆಸ್ಪತ್ರೆ ಸೇರಿದ್ದರು.

   ಆರೋಗ್ಯದಲ್ಲಿ ವ್ಯತ್ಯಯ ಆದ ವಾಲ್ಮಿಕಿ ಜಯಂತಿ ಸೇರಿದಂತೆ ಇಂದಿನ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಯಿತು. ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಬಂದಿದ್ದ ಸಮುದಾಯದ ಜನರ ವಿರೋಧಕ್ಕೂ ಇದು ಕಾರಣವಾಯಿತು.

   ಸಿಎಂ ಕುಮಾರಸ್ವಾಮಿಗೆ ಅನಾರೋಗ್ಯ: ಎಲ್ಲ ಕಾರ್ಯಕ್ರಮ ರದ್ದು

   ಆದರೆ ಇದೀಗ ಕುಮಾರಸ್ವಾಮಿ ಅವರ ಆರೋಗ್ಯದ ಕುರಿತು ವೈದ್ಯರ ವರದಿ ಬಂದಿದ್ದು, ಅವರು ಆರೋಗ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ, ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್‌ ಆಗಿದ್ದು ಮನೆಗೆ ತೆರಳಿದ್ದಾರೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ವೈದ್ಯ ಮಂಜುನಾಥ ಅವರು ಹೇಳಿದ್ದಾರೆ.

   ಕುಮಾರಸ್ವಾಮಿ ಅವರಿಗೆ ಬೆಳಿಗ್ಗೆ ಏಕಾ-ಏಕಿ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಅವರನ್ನು ಜಯದೇವ ಆಸ್ಪತ್ರೆಗೆ ಅಡ್ಮಿಟ್‌ ಮಾಡಲಾಗಿತ್ತು. ಅಲ್ಲಿ ಅವರಿಗೆ ಅವರ ಸಂಬಂಧಿಕರೇ ಆಗಿರುವ ವೈದ್ಯ ಮಂಜುನಾಥ ಅವರು ಚಿಕಿತ್ಸೆ ನೀಡಿದ್ದಾರೆ.

   ಇಸಿಜಿ, ಎಂಆರ್‌ಐ ಸ್ಕಾನ್‌ ಮಾಡಿದ ವೈದ್ಯರು

   ಇಸಿಜಿ, ಎಂಆರ್‌ಐ ಸ್ಕಾನ್‌ ಮಾಡಿದ ವೈದ್ಯರು

   ಕುಮಾರಸ್ವಾಮಿ ಅವರಿಗೆ ಜಯದೇವದಲ್ಲಿ ಇಸಿಜಿ, ಎಂಆರ್‌ಐ ಸ್ಕಾನ್‌ಗಳನ್ನು ಮಾಡಲಾಗಿದೆ. ಅವರಿಗೆ ಸಕ್ಕರೆ ಖಾಯಿಲೆ ಸಹ ಇರುವ ಕಾರಣ ರೆಗ್ಯುಲರ್ ಚೆಕಪ್ ಸಹ ಮಾಡಲಾಗಿದೆ. ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಕೂಡ ಇರುವ ಕಾರಣ ಇನ್ನೂ ಕೆಲವು ಪರೀಕ್ಷೆಗಳ್ನು ಮಾಡಲಾಗಿದೆ.

   ಕುಮಾರಸ್ವಾಮಿಗೆ 24 ಗಂಟೆ ಬೆಡ್‌ರೆಸ್ಟ್‌

   ಕುಮಾರಸ್ವಾಮಿಗೆ 24 ಗಂಟೆ ಬೆಡ್‌ರೆಸ್ಟ್‌

   ಎಲ್ಲ ಪರೀಕ್ಷೆಗಳ ವರದಿಯ ಪ್ರಕಾರ ಗಂಭೀರವಾದ ಆರೋಗ್ಯ ಸಮಸ್ಯೆ ಕುಮಾರಸ್ವಾಮಿ ಅವರಿಗೆ ಇಲ್ಲ, ಒತ್ತಡದ ಕಾರಣ ಹಾಗೂ ಆಹಾರದಲ್ಲಿ ವ್ಯತ್ಯಾಸದ ಕಾರಣ ಹೊಟ್ಟೆ ನೋವು ಕಾಣಿಸಿಕೊಂಡಿದೆ ಅವರು ಇದೀಗ ಮನೆಗೆ ತೆರಳಿದ್ದು, ಅವರಿಗೆ 24 ಗಂಟೆಗಳ ಬೆಡ್‌ ರೆಸ್ಟ್‌ನ ಅವಶ್ಯಕತೆ ಇದೆ ಎಂದು ವೈದ್ಯ ಮಂಜುನಾಥ ಅವರು ಹೇಳಿದ್ದಾರೆ.

   ವಾಲ್ಮೀಕಿ ಜಯಂತಿಗೆ ಸಿಎಂ ಗೈರು: ವಿಧಾನಸೌಧದ ಎದುರು ಪ್ರತಿಭಟನೆ

   ಎಚ್‌ಡಿಕೆಗೆ ಒತ್ತಡ ಹೆಚ್ಚಾಗಿದೆ

   ಎಚ್‌ಡಿಕೆಗೆ ಒತ್ತಡ ಹೆಚ್ಚಾಗಿದೆ

   ಕುಮಾರಸ್ವಾಮಿ ಅವರಿಗೆ ಒತ್ತಡ ಹೆಚ್ಚಾಗಿದೆ ಎಂದು ಹಿರಿಯ ವೈದ್ಯ ಮಂಜುನಾಥ ಅವರು ಹೇಳಿದ್ದಾರೆ. ಪ್ರತಿನಿತ್ಯ ಟಿವಿಗಳಲ್ಲಿ ಬರುವ ಎಲ್ಲ ಸುದ್ದಿಗಳನ್ನು ನೋಡಿ ಒತ್ತಡಕ್ಕೆ ಒಳಗಾಗುತ್ತಾರೆ ಅದಕ್ಕೆಲ್ಲಾ ಪ್ರತಿಕ್ರಿಯಿಸುತ್ತಾರೆ ಇದು ಒತ್ತಡ ಹೆಚ್ಚಿಸುತ್ತದೆ. ಅವರಿಗೆ ಇಂತಹಾ ಸುದ್ದಿಗಳನ್ನು ನೋಡಬೇಡಿ, ನೋಡಿದರೂ ಮನಸ್ಸಿಗೆ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

   ಜನತಾ ದರ್ಶನ: 17 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ, 50% ಇತ್ಯರ್ಥ

   ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ

   ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ

   ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಆಗಿತ್ತು. ಒಮ್ಮೆ ಬೆಂಗಳೂರಿನಲ್ಲಿ ಆಗಿದ್ದರೆ ಮತ್ತೊಮ್ಮೆ ಸಿಂಗಪುರದಲ್ಲಿ ಚಿಕತ್ಸೆ ಪಡೆದುಕೊಂಡಿದ್ದರು. ಹಾಗಾಗಿ ಇಂದು ಅವರಿಗೆ ಆರೋಗ್ಯದಲ್ಲಿ ವ್ಯತ್ಯವಾದಾಗ ಅವರ ಬೆಂಬಲಿಗರು ಆತಂಕಕ್ಕೆ ಒಳಗಾಗಿದ್ದರು.

   ಜೆಡಿಎಸ್ ಅಧ್ಯಕ್ಷ ವಿಶ್ವನಾಥ್‌ಗೆ ಅನಾರೋಗ್ಯ: ರಾಜೀನಾಮೆ ಸಾಧ್ಯತೆ

   English summary
   CM Kumaraswamy health is good now says Jayadeva hospital senior doctor Manjunath. He said Kumaraswamy needs 24 hours bed rest. He said Kumaraswamy taking very stress so his health is fluctuating little bit.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X