ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಮಾನಿಕ ಸಮೀಕ್ಷೆ ವೇಳೆ ಪೇಪರ್ ಓದಿದ ಪ್ರಕರಣದ ಬಗ್ಗೆ ಸಿಎಂ ಸ್ಪಷ್ಟನೆ

By Manjunatha
|
Google Oneindia Kannada News

Recommended Video

ಕೊಡಗಿನ ವೈಮಾನಿಕ ಸಮೀಕ್ಷೆ ವೇಳೆ ಪೇಪರ್ ಓದಿದ್ದ ಬಗ್ಗೆ ಎಚ್ ಡಿ ಕೆ ಸ್ಪಷ್ಟನೆ | Oneindia Kannada

ಬೆಂಗಳೂರು, ಆಗಸ್ಟ್ 22: ಹೆಲಿಕಾಪ್ಟರ್‌ನಲ್ಲಿ ಕೂತು ಸಿಎಂ ಕುಮಾರಸ್ವಾಮಿ ಅವರು ಪೇಪರ್ ಓದುತ್ತಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಕೊಡಗು ವೈಮಾನಿಕ ಸಮೀಕ್ಷೆ ವೇಳೆ ಸಿಎಂ ಪತ್ರಿಕೆ ಓದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಈ ಬಗ್ಗೆ ಕುಮಾರಸ್ವಾಮಿ ಇಂದು ಸ್ಪಷ್ಟೀಕರಣ ನೀಡಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಕೂತು ಪೇಪರ್ ಓದಿದ ಘಟನೆ ಬಗ್ಗೆ, ಸಿಎಂ ಕರ್ನಾಟಕ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟೀಕರಣವಾಗಿ ಪತ್ರವೊಂದನ್ನು ಪ್ರಕಟಿಸಿರುವ ಸಿಎಂ ಅವರು, ತಾವು ಮೈಸೂರಿನಿಂದ ಕೊಡಗಿಗೆ ಹೋಗುವ ಸಮಯದಲ್ಲಿ ಪತ್ರಿಕೆ ಓದಿದ್ದೇ ವಿನಃ ವೈಮಾನಿಕ ಸಮೀಕ್ಷೆ ವೇಳೆಯಲ್ಲಲ್ಲ ಎಂದು ಹೇಳಿದ್ದಾರೆ.

ಮಲೆನಾಡು ಪ್ರವಾಸ ರದ್ದು, ಮತ್ತೆ ಕೊಡಗಿಗೆ ಕುಮಾರಸ್ವಾಮಿಮಲೆನಾಡು ಪ್ರವಾಸ ರದ್ದು, ಮತ್ತೆ ಕೊಡಗಿಗೆ ಕುಮಾರಸ್ವಾಮಿ

ಕುಮಾರಸ್ವಾಮಿ ಅವರು ಆಗಸ್ಟ್ 18 ಮತ್ತು 19ರಂದು ಪ್ರವಾಹ ಪೀಡಿತ ಕೊಡಗಿನ ವೈಮಾನಿಕ ಸಮೀಕ್ಷೆ ಮಾಡಿದ್ದರು. ಎರಡನೇ ದಿನದ ಸಮೀಕ್ಷೆ ವೇಳೆ ಕುಮಾರಸ್ವಾಮಿ ಅವರು ಪೇಪರ್ ಓದುತ್ತಿರುವ ದೃಶ್ಯವನ್ನು ಹೆಲಿಕಾಪ್ಟರ್‌ನಲ್ಲಿರುವವರೆ ವಿಡಿಯೋ ಚಿತ್ರೀಕರಿಸಿದ್ದರು.

ಮೈಸೂರಿನಿಂದ ತೆರಳಿದಾಗ ಪತ್ರಿಕೆ ಓದಿದ್ದೆ

ಆಗಸ್ಟ್‌ 19 ರಂದು ಮೈಸೂರಿನಿಂದ ಕೊಡಗಿಗೆ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ತೆರಳುವ ವೇಳೆ ಏರ್‌ಫೋರ್ಸ್‌ ಅಧಿಕಾರಿ ತಮಗೆ ಪ್ರವಾಹದ ಮಾಹಿತಿ ನೀಡುವ ಕೆಲವು ಕ್ಷಣದ ಹಿಂದೆ ಸುದ್ದಿ ಪತ್ರಿಕೆಯೊಂದರ ಮೇಲೆ ಕಣ್ಣಾಡಿಸಿದ್ದೇನೆ ಅಷ್ಟೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಪಟ್ಟಭದ್ರ ಹಿತಾಸಕ್ತಿಗಳ ಕೃತ್ಯ

ಪಟ್ಟಭದ್ರ ಹಿತಾಸಕ್ತಿಗಳ ಕೃತ್ಯ

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆ ಘಟನೆಯ ವಿಡಿಯೋವನ್ನು ತಪ್ಪು ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಜನತೆಗೆ ತಪ್ಪು ಸಂದೇಶ ತಲುಪಿಸುವ, ಅಪಪ್ರಚಾರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.

ಕೊಡಗಿನ ಪ್ರವಾಹವನ್ನ ವೈಮಾನಿಕ ಸಮೀಕ್ಷೆಯಲ್ಲಿ ವೀಕ್ಷಿಸಿದ ಎಚ್ ಡಿ ಕುಮಾರಸ್ವಾಮಿ

ಇದು ಸಂಕಷ್ಟದ ಸಮಯ ಎಲ್ಲರೂ ಒಟ್ಟಾಗಿರಬೇಕು

ಇದು ಸಂಕಷ್ಟದ ಸಮಯ ಎಲ್ಲರೂ ಒಟ್ಟಾಗಿರಬೇಕು

ಇದು ಸಂಕಷ್ಟದ ಸಮಯ, ಎಲ್ಲರೂ ಒಗ್ಗಟ್ಟಿನಿಂದ ಸಂತ್ರಸ್ತರ ಪರವಾಗಿ ಕೆಲಸ ಮಾಡಬೇಕಿದೆ. ಕೊಡಗನ್ನು ಮತ್ತೆ ಕಟ್ಟಬೇಕಿದೆ. ಇಂತಹಾ ಸಮಯದಲ್ಲಿ ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ರೀತಿಯ ಕುಕೃತ್ಯಗಳಲ್ಲಿ ತೊಡಗಿ, ಪರಿಹಾರ ಕಾರ್ಯವನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಹೀಗಳೆದಿದ್ದಾರೆ.

ಸೇನಾ ವಿಮಾನದಲ್ಲಿ ಕೊಡಗು ಪ್ರವಾಹ ಸಮೀಕ್ಷೆಗೆ ಹೊರಟ ಎಚ್‌ಡಿಕೆಸೇನಾ ವಿಮಾನದಲ್ಲಿ ಕೊಡಗು ಪ್ರವಾಹ ಸಮೀಕ್ಷೆಗೆ ಹೊರಟ ಎಚ್‌ಡಿಕೆ

ಪರ-ವಿರೋಧ ಜಗಳ ಹಚ್ಚಿದ್ದ ವಿಡಿಯೋ

ಪರ-ವಿರೋಧ ಜಗಳ ಹಚ್ಚಿದ್ದ ವಿಡಿಯೋ

ಕುಮಾರಸ್ವಾಮಿ ಅವರು ಹೆಲಿಕಾಪ್ಟರ್‌ನಲ್ಲಿ ಕೂತು ಪತ್ರಿಕೆ ಓದುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಸಮೀಕ್ಷೆ ಮಾಡುವುದು ಬಿಟ್ಟು ಪತ್ರಿಕೆ ಓದುತ್ತಿದ್ದಾರೆ ಎಂದು ಹಲವರು ದೂರಿದ್ದರು. ಕುಮಾರಸ್ವಾಮಿ ಬೆಂಬಲಿಗರು ಎಚ್‌ಡಿಕೆ ಅವರ ಕೃತ್ಯವನ್ನು ಸಮರ್ಥಿಸಿಕೊಂಡು 'ಅವರು ಪತ್ರಿಕೆ ಓದುತ್ತಿದ್ದಾರೆ, ಬಿಜೆಪಿಯವರಂತೆ ಬ್ಲೂ ಫಿಲಂ ನೋಡುತ್ತಿಲ್ಲಾ' ಎಂದು ಪ್ರತಿಕ್ರಿಯಿಸಿದ್ದರು.

English summary
CM Kumaraswamy gives clarification about the news paper issue. he said i was going to Kodagu from Mysuru in helicopter in that i was reading paper. Some people using that video to create miss lead the Kodagu people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X