ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಮನ್ನಾ ಕುರಿತು ಮಾಧ್ಯಮಗಳಲ್ಲಿ ತಪ್ಪು ಮಾಹಿತಿ: ಸಿಎಂ ಸ್ಪಷ್ಟನೆ

|
Google Oneindia Kannada News

Recommended Video

ಸಾಲಮನ್ನಾ ಗೊಂದಲಕ್ಕೆ ಸ್ಪಷ್ಟನೆ ಕೊಟ್ಟ ಸಿಎಂ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಜೂನ್ 11: ರೈತರ ಸಾಲಮನ್ನಾದ ಕುರಿತು ಕೆಲವು ಮಾಧ್ಯಮಗಳು ತಪ್ಪು ಮಾಹಿತಿಯನ್ನು ಪ್ರಕಟಿಸಿವೆ ಎಂದಿರುವ ಕುಮಾರಸ್ವಾಮಿ ಅವರು ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಗಳ ವರ್ಗೀಕರಣ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಉಂಟಾಗಿದೆ. ಪ್ರತಿ ಸಾಲ ಮನ್ನಾ ನಂತರ ರಾಜ್ಯ ಸರ್ಕಾರ ನಡೆಸುವ ಆಡಿಟ್ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ ಎಂದು ಸಿಎಂ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.

ಐಎಂಎ ಜ್ಯುವೆಲರ್ಸ್‌ ವಂಚನೆ ಪ್ರಕರಣ ಸಿಸಿಬಿಗೆ: ಕುಮಾರಸ್ವಾಮಿಐಎಂಎ ಜ್ಯುವೆಲರ್ಸ್‌ ವಂಚನೆ ಪ್ರಕರಣ ಸಿಸಿಬಿಗೆ: ಕುಮಾರಸ್ವಾಮಿ

ಈ ವರೆಗೆ 13988 ರೈತರ ಸಾಲ ಖಾತೆಗಳಲ್ಲಿ ಈ ಗೊಂದಲ ಉಂಟಾಗಿದೆ. ಸ್ಥಳೀಯ ಬ್ಯಾಂಕುಗಳು ತಮ್ಮಿಂದ ಆಗಿರುವ ಲೋಪದ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜೂನ್ 14ರಂದು ಮಧ್ಯಾಹ್ನ 2.30 ಗಂಟೆಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆ ಕರೆಯಲಾಗಿದೆ ಎಂದು ಸಿಎಂ ಹೇಳಿದ್ದಾರೆ.

CM Kumaraswamy called meeting of Bank officials to discuss loan waive

ಚುನಾವಣೆಗೂ ಸಾಲಮನ್ನಾ ಹಣಕ್ಕೂ ಸಂಬಂಧವಿಲ್ಲ: ಕುಮಾರಸ್ವಾಮಿ ಚುನಾವಣೆಗೂ ಸಾಲಮನ್ನಾ ಹಣಕ್ಕೂ ಸಂಬಂಧವಿಲ್ಲ: ಕುಮಾರಸ್ವಾಮಿ

ಮಾಧ್ಯಮಗಳಲ್ಲಿ ಸರ್ಕಾರದ ಲೋಪದಿಂದ ಹೀಗಾಗಿದೆ ಎಂದು ವರದಿ ಪ್ರಕಟವಾದ ಹಿನ್ನಲೆಯಲ್ಲಿ ಅದರ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ, ರಾಜ್ಯ ಸರ್ಕಾರದಿಂದ ಈ ಗೊಂದಲ ಉಂಟಾಗಿಲ್ಲ. ಹಾಗೂ ಚುನಾವಣೆಗೂ ಈ ಗೊಂದಲಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

ಸಿಎಂ ಗ್ರಾಮ ವಾಸ್ತವ್ಯ: ಜಿಲ್ಲಾಡಳಿತಕ್ಕೆ ಮಾರ್ಗಸೂಚಿ ರವಾನೆ ಸಿಎಂ ಗ್ರಾಮ ವಾಸ್ತವ್ಯ: ಜಿಲ್ಲಾಡಳಿತಕ್ಕೆ ಮಾರ್ಗಸೂಚಿ ರವಾನೆ

ಮುಂದುವರೆದು, ಮಾಧ್ಯಮಗಳು ಇಂತಹ ವಿಷಯಗಳನ್ನು ಅಧಿಕೃತ ಮಾಹಿತಿ ಪಡೆದುಕೊಂಡ ನಂತರವೇ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

English summary
CM Kumaraswamy called for bank officials meeting on June 14 to discuss about farmers loan waive off. He said some farmers have suffered due to banks not from government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X