ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಹಾನಿ ಪೀಡಿತ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್: ಎಚ್ಡಿಕೆ

By Nayana
|
Google Oneindia Kannada News

ಬೆಂಗಳೂರು, ಜೂನ್ 14: ಕರ್ನಾಟಕದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪ, ಮಳೆಯಿಂದ ಉಂಟಾದ ಅನಾಹುತ ಮತ್ತು ಶಿಕ್ಷಣ ಗುಣಮಟ್ಟ ಇಲಾಖೆಯ ಕೆಲವು ಲೋಪಗಳ ಬಗ್ಗೆ ಕುರಿತಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ, ಇಲಾಖೆ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಅಧಿಕಾರದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಈಗಾಗಲೇ ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಬೇಕು. ಯಾವ ಇಲಾಖೆಯಲ್ಲೂ ಕೂಡ ಭ್ರಷ್ಟಾಚಾರ ನಡೆಯ ಕೂಡದು ಸಾರ್ವಜನಿಕರಿಂದ ದೂರುಗಳು ಬಂದರೆ ಗಂಭೀರವಾಗಿ ಪಡಿಗಣಿಸಲಾಗುವುದು ಎಂದರು.

ಉನ್ನತ ಶಿಕ್ಷಣ ಖಾತೆಯ ಸಚಿವ ಸ್ಥಾನ ಖಾಲಿಯಿದೆ, ನೀವೇ ಇಟ್ಕೊಳ್ಳಿ! ಉನ್ನತ ಶಿಕ್ಷಣ ಖಾತೆಯ ಸಚಿವ ಸ್ಥಾನ ಖಾಲಿಯಿದೆ, ನೀವೇ ಇಟ್ಕೊಳ್ಳಿ!

ಮಳೆ ಹಾನಿ ಪರಿಹಾರ ಕಾರ್ಯಕ್ಕೆ 5 ಕೋಟಿ ಹಣ ಮೀಸಲಿಡಬೇಕು, ಮಳೆಯಿಂದಾದ ಹಾನಿ, ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ. ತುರ್ತು ಕ್ರಮಕೈಗೊಳ್ಳುವಂತೆ ಡಿಸಿಗಳಿಗೆ ಸೂಚನೆ ನೀಡಿದ್ದೇನೆ. ರಾಜ್ಯಾದ್ಯಂತ 38 ಕೋಟಿ ಮೌಲ್ಯದಷ್ಟು ಆಸ್ತಿಪಾಸ್ತಿಗಳಿಗೆ ನಷ್ಟವಾಗಿದೆ. ರಸ್ತೆ. ಸೇತುವೆಗೆ ಹಾನಿಯಾಗಿದೆ. ಬಳ್ಳಾರಿ, ಬೆಳಗಾವಿ, ಹಾಸನ, ಉಡುಪಿ, ದಾವಣಗೆರೆ, ವಿಜಯಪುರ, ಶಿವಮೊಗ್ಗಕ್ಕೆ ಪ್ರತ್ಯೇಕ ಹೆಚ್ಚುವರಿ ಅನುದಾನ ನೀಡಲಾಗುತ್ತದೆ ಎಂದರು.

CM intends to ensure special package for rain fed districts

ರಾಜ್ಯಸ ಸರ್ಕಾರದ ಕಾರ್ಯದರ್ಶಿಗಳು ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ ಎಚ್‌.ಡಿ. ಕುಮಾರಸ್ವಾಮಿ, ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ಪ್ರವಾಹ ಮತ್ತಿತರೆ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಆರ್‌ಟಿಇ ಕಾಯ್ದೆಯಡಿ ಬಡ ಮಕ್ಕಳಿಗೆ ನೀಡಬೇಕಾದ ಸೀಟುಗಳ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಒಬ್ಬ ಡಿಡಿಪಿಐ ಅಮಾನತು ಮಾಡಿದ್ದೇನೆ, ಇನ್ನುಮುಂದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಶಿಕ್ಷಣ ಇಲಾಖೆಗಳು ಕೈಜೋಡಿಸಿದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ವಾಡಿಕೆಗಿಂತ ಶೇ.58ರಷ್ಟು ಪ್ರತಿಶತ ಹೆಚ್ಚು ಮಳೆಯಾಗಿದೆ, ಮೊದಲಿಗೆ ರಾಜ್ಯದ ಎಲ್ಲಾ ಕಾರ್ಯದರ್ಶಿಗಳು ಒಗ್ಗಟ್ಟಿನಿಂದ ನ್ಯಾಯ ಬದ್ದವಾಗಿ ಕೆಲಸ ಮಡಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮ ಪಡುವಂತೆ ಸೂಚಿಸಿದರು.

ಅದರಲ್ಲೂ ವಿಕಲಚೇತನ ಮತ್ತು ಶಿಕ್ಷಣ ಇಲಾಖೆ ಯವರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು ಇದು ಜನ ಸ್ನೇಹಿ ಸರ್ಕಾರ ಹೀಗಾಗಿ ಪ್ರತಿಯೊಂದು ಇಲಾಖೆಯು ಸರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಎಚ್ಚರಿಸಿದರು.
ಹಾಗೆಯೇ ಪಂಚಾಯತ್ ಮಟ್ಟದಿಂದ ಜಿಲ್ಲಾ ಮಟ್ಟದ ವರೆಗೂ ಸರ್ಕಾರಿ ಜಾಗವನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಎರಡೂ ತಿಂಗಳು ಗಡವು ನೀಡಲು ಆದೇಶಿಸಿದ ಸಿಎಂ ಎಚ್ ಡಿ ಕುಮಾರಸ್ವಾಮಿ ಜನರಿಗಾಗಿ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ, ಸಚಿವ ಕೃಷ್ಣಬೈರೇಗೌಡ ಉಪಸ್ಥಿತರಿದ್ದರು.

English summary
Chief minister H.D.Kumarswamy said that the state government is committed to ensure special package for rain affected districts in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X