ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಕಮಲದ ಆಡಿಯೋ ವಿಚಾರ ಮರೆತ ರಾಜಕೀಯ ಪಕ್ಷಗಳು!

|
Google Oneindia Kannada News

ಬೆಂಗಳೂರು, ಫೆಬ್ರವರಿ 25 : ಆಪರೇಷನ್ ಕಮಲದ ಆಡಿಯೋ ಬಗ್ಗೆ ಎಸ್‌ಐಟಿ ತನಿಖೆ ನಡೆಸುವ ವಿಚಾರ ಎಲ್ಲಿಗೆ ಬಂತು?. ವಿಧಾನಸಭೆಯಲ್ಲಿ ಮೂರು ದಿನಗಳ ಕಾಲ ಚರ್ಚೆ ನಡೆದ ಬಳಿಕವೂ ಸರ್ಕಾರ ಇನ್ನೂ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಂಡಿಲ್ಲ.

ಹೌದು, ಫೆ.13ರಂದು ಬಜೆಟ್ ಅಧಿವೇಶನ ಮುಕ್ತಾಯಗೊಂಡಿತ್ತು. ಅಧಿವೇಶನ ಮುಗಿದು ಎರಡು ವಾರಗಳು ಕಳೆದರೂ ಆಡಳಿತ ಮತ್ತು ಪ್ರತಿಪಕ್ಷದ ಯಾವ ನಾಯಕರು ಆಪರೇಷನ್‌ ಕಮಲದ ಆಡಿಯೋ ವಿಚಾರದಲ್ಲಿ ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ.

ಯಡಿಯೂರಪ್ಪಗೆ ರಿಲೀಫ್: ಕಲಬುರಗಿ ಹೈಕೋರ್ಟ್‌ನಿಂದ ಎಫ್‌ಐಆರ್‌ಗೆ ಮಧ್ಯಂತರ ತಡೆಯಡಿಯೂರಪ್ಪಗೆ ರಿಲೀಫ್: ಕಲಬುರಗಿ ಹೈಕೋರ್ಟ್‌ನಿಂದ ಎಫ್‌ಐಆರ್‌ಗೆ ಮಧ್ಯಂತರ ತಡೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಸೋಮವಾರ ಈ ಕುರಿತು ಹೇಳಿಕೆ ನೀಡಿದ್ದಾರೆ. 'ಎಸ್‌ಐಟಿ ರಚನೆ ಮಾಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದು ಪ್ರೀತಂ ಗೌಡ ಸ್ಪಷ್ಟನೆಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದು ಪ್ರೀತಂ ಗೌಡ ಸ್ಪಷ್ಟನೆ

ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶಾಸಕರ ರಾಜೀನಾಮೆ ಪಡೆಯಲು ಲಂಚ ನೀಡಲಾಗುತ್ತದೆ ಎಂಬ ಆಡಿಯೋ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಹುಟ್ಟುಹಾಕಿತ್ತು. ಮೂರು ದಿನಗಳ ಕಾಲ ಈ ಕುರಿತು ವಿಧಾನಸಭೆಯಲ್ಲಿ ಭಾರಿ ಚರ್ಚೆಯಾಗಿತ್ತು. ಆದರೆ, ಈಗ ವಿವಾದ ತಣ್ಣಗಾಗಿದೆ...

ಆಪರೇಷನ್ ಕಮಲ: ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ವ್ಯಂಗ್ಯದ ರಸಪ್ರಶ್ನೆಆಪರೇಷನ್ ಕಮಲ: ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ವ್ಯಂಗ್ಯದ ರಸಪ್ರಶ್ನೆ

ಸಿದ್ದರಾಮಯ್ಯ ಟ್ವೀಟ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಆಪರೇಷನ್ ಕಮಲದ ಆಡಿಯೋಗ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿಯೂ ಈ ವಿಚಾರದ ಕುರಿತು ಮಾತನಾಡಿದ್ದು, 'ಎಸ್‌ಐಟಿ ರಚನೆ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು' ಎಂದು ಹೇಳಿದ್ದಾರೆ.

ಎಸ್‌ಐಟಿ ರಚಿಸಲು ಸ್ಪೀಕರ್ ಸಲಹೆ

ಎಸ್‌ಐಟಿ ರಚಿಸಲು ಸ್ಪೀಕರ್ ಸಲಹೆ

ಆಪರೇಷನ್ ಕಮಲದ ಆಡಿಯೋದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರು ಸಹ ಕೇಳಿಬಂದಿತ್ತು. ವಿಧಾನಸಭೆಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್ ಅವರು ಎಸ್‌ಐಟಿ ರಚನೆ ಮಾಡಿ, 15 ದಿನದಲ್ಲಿ ವರದಿ ನೀಡುವಂತೆ ಗಡುವು ನೀಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು.

ಎಸ್‌ಐಟಿ ರಚನೆಗೆ ಸಿದ್ಧ ಎಂದಿದ್ದ ಸರ್ಕಾರ

ಎಸ್‌ಐಟಿ ರಚನೆಗೆ ಸಿದ್ಧ ಎಂದಿದ್ದ ಸರ್ಕಾರ

ಸ್ಪೀಕರ್ ರಮೇಶ್ ಕುಮಾರ್ ಅವರ ಸಲಹೆಯನ್ನು ಒಪ್ಪಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎಸ್‌ಐಟಿ ರಚನೆ ಮಾಡಲು ಸರ್ಕಾರ ಸಿದ್ಧ ಎಂದು ಹೇಳಿದ್ದರು. ಆದರೆ, ಇದುವರೆಗೂ ಎಸ್‌ಐಟಿ ರಚನೆ ಮಾಡಿಲ್ಲ. ಆಪರೇಷನ್ ಕಮಲದ ಆಡಿಯೋ ವಿಚಾರ ಜನರ ಮನಸ್ಸಿನಿಂದ ದೂರವಾಗುತ್ತಿದೆ.

ಬಿಜೆಪಿ ವಿರೋಧಿಸಿತ್ತು

ಬಿಜೆಪಿ ವಿರೋಧಿಸಿತ್ತು

ಆಪರೇಷನ್ ಕಮಲದ ಆಡಿಯೋ ವಿಚಾರದಲ್ಲಿ ಎಸ್‌ಐಟಿ ತನಿಖೆ ಬೇಡ. ನ್ಯಾಯಾಂಗ ತನಿಖೆ ನಡೆಸಿ ಎಂದು ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿತ್ತು. ಸದನ ಸಮಿತಿ ಅಥವ ನ್ಯಾಯಾಂಗ ತನಿಖೆಯಾಗಲಿ. ರಾಜ್ಯ ಸರ್ಕಾರ ರಚಿಸುವ ಎಸ್‌ಐಟಿಯ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ವಿಧಾನಸಭೆಯಲ್ಲಿ ಧರಣಿ ನಡೆಸಿತ್ತು.

ಸಭೆ ವಿಫಲವಾಗಿತ್ತು

ಸಭೆ ವಿಫಲವಾಗಿತ್ತು

ಆಪರೇಷನ್ ಕಮಲದ ಆಡಿಯೋ ವಿಚಾರದಲ್ಲಿ ಎಸ್‌ಐಟಿ ತನಿಖೆ ಬಗ್ಗೆ ಚರ್ಚಿಸಲು ಸ್ಪೀಕರ್ ರಮೇಶ್ ಕುಮಾರ್ ನಡೆಸಿದ್ದ ಸಭಾ ನಾಯಕರ ಸಭೆ ವಿಫಲವಾಗಿತ್ತು. ಎಸ್‌ಐಟಿ ತನಿಖೆಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಸಭೆಯಿಂದ ಹೊರ ನಡೆದಿತ್ತು. ಈಗ ಯಾವ ತನಿಖೆ ನಡೆಯಲಿದೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

English summary
Former Chief Minister of Karnataka Siddaramaiah said that, Chief Minister should decide on SIT probe into operation kamala. Karnataka Assembly Speaker Ramesh Kumar suggested the govt for the SIT probe on operation kamala audio case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X