• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಡವ, ರೈತ, ಮಹಿಳೆ, ಕಾರ್ಮಿಕರಿಗೆ ಮೋದಿ ಪ್ಯಾಕೇಜ್: ಬಿಎಸ್ವೈ ಪ್ರಶಂಸೆ

|

ಬೆಂಗಳೂರು, ಮಾ. 26: ಕೋವಿಡ್-19 ಪಿಡುಗಿನಿಂದ ಜನಜೀವನದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಲು ಕೇಂದ್ರ ಸರ್ಕಾರವು ರೂ.1.70 ಲಕ್ಷ ಕೊಟಿ ಹಣ ಬಿಡುಗಡೆ ಮಾಡಿದ್ದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

"ಸಂಕಷ್ಟದ ಈ ಸಮಯದಲ್ಲಿ ಕೇಂದ್ರ ಸರಕಾರದ ಈ ನಿರ್ಧಾರವು ಬಡವರನ್ನು ರೈತರನ್ನು, ಮಹಿಳೆಯರನ್ನು ಮತ್ತು ಕೂಲಿ ಕಾರ್ಮಿಕರನ್ನು ನೆಮ್ಮದಿಯಾಗಿ ಬದುಕಲು ಅನುವು ಮಾಡಿಕೊಡುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್-19 ರ ವಿರುದ್ಧ ತೆಗೆದುಕೊಂಡ ಕ್ರಮಗಳನ್ನು ಹೆಚ್ಚು ಗಂಭೀರವಾಗಿ ಮತ್ತು ಚುರುಕಾಗಿ ಅನುಷ್ಠಾನಗೊಳಿಸುವಲ್ಲಿ ಸಹಕಾರಿಯಾಗುತ್ತದೆ.''

1 ಲಕ್ಷ 70 ಕೋಟಿ ಆರ್ಥಿಕ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

''ಬಡವರ ಹಸಿವಿನ ಅರ್ಥ ಅರಿತುಕೊಂಡ ಸರ್ಕಾರವು 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆ.ಜಿ. ಹೆಚ್ಚುವರಿ ಗೋಧಿ ಅಥವಾ ಅಕ್ಕಿ ಮತ್ತು 1 ಕೆ.ಜಿ. ಬೇಳೆಯನ್ನು ಕೊಡಲು ನಿರ್ಧರಿಸಿದ್ದು ಒಂದು ದೊಡ್ಡ ಅಸಾಧಾರಣ ನಿರ್ಧಾರವನ್ನು ತೆಗೆದುಕೊಂಡಿದೆ."

''ಮಹಿಳೆಯರ ಜನಧನ್ ಖಾತೆಗೆ ಪ್ರತಿ ತಿಂಗಳು ರೂ.500 ರಂತೆ 3 ತಿಂಗಳಿಗೆ ರೂ. 1500/- ಗಳನ್ನು ಮುಂಗಡವಾಗಿ ಹಣ ನೇರವಾಗಿ ವರ್ಗಾವಣೆ ಮಾಡುವುದು, ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿನ ರೂ. 2,000 ಹಣವನ್ನು ಮುಂಗಡವಾಗಿ ಕೊಡುವುದು, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಯೋಜನೆ ರೂ. 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಿದ್ದು ಇದರಿಂದ 63 ಲಕ್ಷ ಮಹಿಳಾ ಸ್ವಸಹಾಯ ಸಂಘಗಳಿಗೆ ಲಾಭವಾಗಲಿದೆ. 8.3 ಕೋಟಿ ಗೃಹಿಣಿಯರಿಗೆ ಉಜ್ವಲ್ ಯೋಜನೆ ಅಡಿ 3 ಉಚಿತ ಗ್ಯಾಸ್ ಸಿಲಿಂಡರ್ಗಳನ್ನು ನೀಡುವುದು, ಸಂಘಟಿತ ವಲಯದ ಕಾರ್ಮಿಕರಿಗೆ ಇ.ಪಿ.ಎಫ್. ಮೇಲೆ ಸಾಲ ಸೌಲಭ್ಯ ಮತ್ತು ಉದ್ಯೋಗ ಖಾತರಿ ಯೋಜನೆಯಡಿ ಅಡಿ ಕೂಲಿ ದರವನ್ನು ರೂ.182 ರಿಂದ ರೂ.202 ಏರಿಸಿದ್ದು, ದೇಶದ ಬಡವರು ಇಂತಹ ಸಂದಿಗ್ಧ ಸಮಯದಲ್ಲಿ ಹಸಿವಿನಿಂದ ಬಳಲದಂತೆ ಮಾಡುತ್ತದೆ."

''ಇದರ ಜೊತೆಗೆ ವಯೋವೃದ್ಧರಿಗೆ, ವಿಧವೆಯರಿಗೆ ರೂ.1000/- ಗೌರವಧನವನ್ನು 3 ತಿಂಗಳವರೆಗೆ ಕೊಡುವುದು ಒಳ್ಳೆಯ ನಿರ್ಧಾರ. ಇದಲ್ಲದೇ ಕೇಂದ್ರ ಸರ್ಕಾರದಿಂದ ಉದ್ಯಮ ವಲಯಕ್ಕೆ ಹಲವಾರು ಹಣಕಾಸು ಸಹಾಯಕ ಯೋಜನೆಗಳನ್ನು ಕೊಡಮಾಡಿ ಕೋವಿಡ್-19 ಮಹಾಮಾರಿಯ ಪರಿಣಾಮದಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವಲ್ಲಿ ಸಹಕಾರಿಯಾಗಲಿದೆ."

''ಬಡವರಿಗೆ ಇಷ್ಟೊಂದು ದೊಡ್ಡಮಟ್ಟದ ಹಣಕಾಸು ಸಹಾಯ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇನ್ನೊಮ್ಮೆ ಅಭಿನಂದಿಸುತ್ತೇನೆ'' ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
CM BS Yediyurappa welcomed Union Finance minister Nirmala Sitharaman announcement under PM Garib Kalyan Yojana to give financial help to BPL card holders, woman, self help groups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more