ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದಂಗಡಿ ಓಪನ್ ಮಾಡಿ ಅಂತ ಅಧಿಕಾರಿಗಳು ಹೇಳಿದ್ರೂ, ಸಿಎಂ ಒಪ್ಪುತ್ತಿಲ್ಲ!

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಯಾರಿಗೆ ಕಷ್ಟ ಆಗಿದ್ಯೋ, ಇಲ್ವೋ... ಆದರೆ ಕುಡುಕರಿಗೆ ಮಾತ್ರ ಸಿಕ್ಕಾಪಟ್ಟೆ ತೊಂದರೆಯಾಗಿದೆ. ಲಾಕ್ ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವುದರಿಂದ, ಎಣ್ಣೆ ಸಿಗದೆ ಕುಡುಕರಂತೂ ಪರದಾಡುತ್ತಿದ್ದಾರೆ.

Recommended Video

ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ದುನಿಯಾ ವಿಜಯ್ | Duniya Vijay | Dr Rajkumar Birthday

ಕುಡಿತದ ಚಟ ಅಂಟಿಸಿಕೊಂಡಿದ್ದ ಕೆಲ ಮದ್ಯ ವಸ್ಯನಿಗಳು, ಎಣ್ಣೆ ಸಿಗದೆ ಆತ್ಮಹತ್ಯೆಗೂ ಶರಣಾಗಿದ್ದಾರೆ. ಮದ್ಯ ಮಾರಾಟ ಇಲ್ಲದೆ ಹೆಚ್ಚು ಅವಾಂತರಗಳು ಸೃಷ್ಟಿಯಾಗುತ್ತಿದ್ದರೂ, ಮದ್ಯದಂಗಡಿಗಳನ್ನು ತೆರೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಅನುಮತಿ ನೀಡುತ್ತಿಲ್ಲ.

ಮದ್ಯ ಮಾರಾಟ ಮಾಡಿ ಎಂದು ಸರ್ಕಾರಕ್ಕೆ ಎಚ್ ವಿಶ್ವನಾಥ್ ಮನವಿಮದ್ಯ ಮಾರಾಟ ಮಾಡಿ ಎಂದು ಸರ್ಕಾರಕ್ಕೆ ಎಚ್ ವಿಶ್ವನಾಥ್ ಮನವಿ

''ಮದ್ಯದಂಗಡಿ ಓಪನ್ ಮಾಡಿದರೆ ಒಳಿತು'' ಅಂತ ಸ್ವತಃ ಅಧಿಕಾರಿಗಳೇ ಹೇಳಿದರೂ, ಅದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತ್ರ ಅಸ್ತು ಎನ್ನುತ್ತಿಲ್ಲ. ''ಪ್ರಧಾನಿ ಹೇಳುವವರೆಗೂ ಮದ್ಯದಂಗಡಿ ಓಪನ್ ಬೇಡ'' ಅಂತ ಕಡ್ಡಿ ತುಂಡು ಮಾಡಿದ ಹಾಗೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಆರ್ಥಿಕ ಇಲಾಖೆಯ ಅಧಿಕಾರಿಗಳ ಮನವಿ

ಆರ್ಥಿಕ ಇಲಾಖೆಯ ಅಧಿಕಾರಿಗಳ ಮನವಿ

''ರಾಜ್ಯದಲ್ಲಿ ರೆವಿನ್ಯೂ ಸರ್ವೀಸ್ ಸ್ಟಾರ್ಟ್ ಮಾಡಬೇಕು. ರಿಜಿಸ್ಟ್ರೇಷನ್ ಓಪನ್ ಆದ್ರೆ ಸಂಪನ್ಮೂಲ ಕ್ರೋಡೀಕರಣ ಸಾಧ್ಯ'' ಎಂದು ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣದ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಅರ್ಥಿಕ ಇಲಾಖೆಯ ಅಧಿಕಾರಿಗಳು ಇಂದು ಮನವಿ ಮಾಡಿದರು.

 ಮದ್ಯದಂಗಡಿ ಬಗ್ಗೆ ಅಧಿಕಾರಿಗಳ ಮನವಿ

ಮದ್ಯದಂಗಡಿ ಬಗ್ಗೆ ಅಧಿಕಾರಿಗಳ ಮನವಿ

''ಮದ್ಯದಂಗಡಿ ಓಪನ್ ಮಾಡಿದರೆ ಒಳಿತು'' ಎಂತಲೂ ಅಧಿಕಾರಿಗಳು ತಿಳಿಸಿದರು. ಆದರೆ, ''ಮೇ 3 ಕ್ಕೆ ಪಿಎಂ ಭಾಷಣ ಮಾಡಿ, ಓಪನ್ ಮಾಡಿ ಅಂದ್ರೆ ಮಾತ್ರ ಎಣ್ಣೆ ಅಂಗಡಿ ಓಪನ್'' ಅಂತ ಖಡಕ್ ಆಗಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮೆಡಿಕಲ್ ಶಾಪ್ ನಲ್ಲಿ ಬಿಯರ್ ಮಾರಾಟ: ಮಾಲೀಕನ ಬಂಧನಮೆಡಿಕಲ್ ಶಾಪ್ ನಲ್ಲಿ ಬಿಯರ್ ಮಾರಾಟ: ಮಾಲೀಕನ ಬಂಧನ

ಎಂ.ಎಸ್.ಐ.ಎಲ್ ಆದರೂ ಓಪನ್ ಮಾಡಿ

ಎಂ.ಎಸ್.ಐ.ಎಲ್ ಆದರೂ ಓಪನ್ ಮಾಡಿ

''ಎಂ.ಎಸ್.ಐ.ಎಲ್ ಆದ್ರೂ ಓಪನ್ ಮಾಡಿ. ಗ್ರೀನ್ ಝೋನ್ ಏರಿಯಾಗಳಲ್ಲಿ ಓಪನ್ ಮಾಡಿದರೆ ಒಳಿತು'' ಅಂತ ಅಧಿಕಾರಿಗಳು ಹೇಳಿದರು. ಜೊತೆಗೆ ''ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿ ಅಂಗಡಿ ಓಪನ್ ಮಾಡಬಹುದು'' ಎಂದು ಮತ್ತೊಮ್ಮೆ ಮುಖ್ಯಮಂತ್ರಿಗಳಲ್ಲಿ ಅಧಿಕಾರಿಗಳು ಮನವಿ ಮಾಡಿದರು.

 ಆಸಕ್ತಿ ತೋರದ ಸಿಎಂ

ಆಸಕ್ತಿ ತೋರದ ಸಿಎಂ

ಅಧಿಕಾರಿ ಮನವಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಆಸಕ್ತಿ ತೋರಿಸಲಿಲ್ಲ. ಕೇಂದ್ರದ ನಿರ್ಧಾರ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳೋಣ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಸದ್ಯಕಂತೂ ಎಣ್ಣೆ ಭಾಗ್ಯ ಇಲ್ಲ. ಕಡುಕರಿಗೆ ಉಪವಾಸ ಕಟ್ಟಿಟ್ಟಬುತ್ತಿ.

ಕುಡುಕರಿಗೆ ಉಪವಾಸ ಮುಂದುವರಿಕೆ ಮೇ 3ರ ತನಕ ಎಣ್ಣೆ ಸಿಗಲ್ಲಕುಡುಕರಿಗೆ ಉಪವಾಸ ಮುಂದುವರಿಕೆ ಮೇ 3ರ ತನಕ ಎಣ್ಣೆ ಸಿಗಲ್ಲ

 ಎಣ್ಣೆ ಬಿಟ್ಟು ಮಿಕ್ಕಿದ್ದಕ್ಕೆಲ್ಲಾ ಗ್ರೀನ್ ಸಿಗ್ನಲ್

ಎಣ್ಣೆ ಬಿಟ್ಟು ಮಿಕ್ಕಿದ್ದಕ್ಕೆಲ್ಲಾ ಗ್ರೀನ್ ಸಿಗ್ನಲ್

ವೆಹಿಕಲ್ ರಿಜಿಸ್ಟ್ರೇಷನ್ ಗೆ ಗ್ರೀನ್ ಸಿಗ್ನಲ್ ಕೊಡುವಂತೆಯೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದರು. ಇದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಅಸಲಿಗೆ, 'ಎಣ್ಣೆ ಮ್ಯಾಟ್ರು' ಬಿಟ್ಟು ಉಳಿದ ಎಲ್ಲಾ ಮನವಿಗಳಿಗೂ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ಕೊಟ್ಟಿದ್ದಾರೆ.

English summary
CM BS Yediyurappa rejects plea to open liquor shops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X