ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಹರದ ಘಟನೆ ಬಗ್ಗೆ ಸ್ವಾಮಿಜಿಗಳ ಕ್ಷಮೆ ಕೋರಿದ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಜ. 16: 'ಬೈದವರೆನ್ನ ಬಂಧುಗಳು' ಎಂಬ ಬಸವಣ್ಣನವರ ಉಕ್ತಿಯಲ್ಲಿ ನಂಬಿಕೆ ಇಟ್ಟವನು ನಾನು. ಅಂದು ನಾನು ಆಡಿದ ಮಾತುಗಳಿಂದ ಯಾರಿಗಾದರು ಬೇಸರವಾದರೆ ಕ್ಷಮೆ ಇರಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸ್ವಾಮೀಜಿ Vs ಯಡಿಯೂರಪ್ಪ: ಯಾರು ಸರಿ? ಯಾರದು ತಪ್ಪು?ಸ್ವಾಮೀಜಿ Vs ಯಡಿಯೂರಪ್ಪ: ಯಾರು ಸರಿ? ಯಾರದು ತಪ್ಪು?

Recommended Video

ರಶ್ಮಿಕಾ ಕುಟುಂಬದ ಒಟ್ಟು ಆಸ್ತಿ ವಿವರ ಗೊತ್ತಾ? | RASHMIKA MANDANNA | IT RAID | ONEINDIA KANNADA

ವಚನಾನಂದ ಸ್ವಾಮಿಗಳ ಹೇಳಿಕೆ ಸಹಜ ಪ್ರಕ್ರಿಯೆ. ಇದರ ಬಗ್ಗೆ ಚರ್ಚೆ ಅನಾವಶ್ಯಕ ಎಂದಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಸಚಿವಾಲಯದಿಂದ ಪ್ರಕಟವಾಗಿರುವ ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಅಭಿಪ್ರಾಯವನ್ನು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ವಿವಿಧ ಸಮಾಜಗಳ ಒತ್ತಡ ಸರಕಾರದ ಮೇಲೆ ನಿರಂತರವಾಗಿ ಇರುತ್ತದೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿ ಎಂದಿದ್ದಾರೆ.

CM B S Yediyurappa apologies to swamijis regarding harihar incident

"ಎಲ್ಲಾ ಸ್ವಾಮೀಜಿಗಳು, ಸಾಧುಗಳು, ಸಂತರು ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ ಮತ್ತು ನನ್ನ ಮೇಲೆ ವಿಶ್ವಾಸವಿದೆ. ನನ್ನ ಮೇಲೆ ಇದ್ದ ಸಲುಗೆ ಮತ್ತು ಪ್ರೀತಿಯಿಂದ ಇಂತಹ ಪ್ರತಿಕ್ರಿಯೆಗಳು ಸಹಜ. ಎಲ್ಲರೂ ನಮ್ಮವರೇ, 'ಬೈದವರೆನ್ನ ಬಂಧುಗಳು' ಎಂಬ ಬಸವಣ್ಣನವರ ಉಕ್ತಿಯಲ್ಲಿ ನಂಬಿಕೆ ಇಟ್ಟವನು. ಅಂದು ನಾನು ಆಡಿದ ಮಾತುಗಳಿಂದ ಯಾರಿಗಾದರು ಬೇಸರವಾದರೆ ಕ್ಷಮೆ ಇರಲಿ. ನಾಡಿನ ಶರಣರು, ಸಂತರು, ಸ್ವಾಮೀಜಿಗಳು, ಮಾರ್ಗದರ್ಶಕರ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ ಎಂದು ಭಾವಿಸಿದ್ದೇನೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Chief minister bs yediyurappa apologies regarding harihara incident, and he said all seers were with him. And also request to stop discussion about the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X