ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕದ ಕಡು ಬಡವ ಸೈಕ್ಲಿಸ್ಟ್‌ಗೆ 5 ಲಕ್ಷ ರೂ. ಬೆಲೆಯ ಸೈಕಲ್ ಉಡುಗೊರೆ!

|
Google Oneindia Kannada News

ಬೆಂಗಳೂರು, ಸೆ. 24: ಟೋಕಿಯೋ ಒಲಿಂಪಿಕ್ಸ್‌ ಬಳಿಕ ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಬಹಳಷ್ಟು ಸ್ಪಂದನೆ ಸಿಗುತ್ತಿದೆ. ಬರೀ ಪದಕಗಳನ್ನು ಎದುರು ನೋಡುತ್ತಿದ್ದ ಸರ್ಕಾರ, ಈಗ ಪದಕ ಪಡೆಯಲು ಬೇಕಾದ ಸೌಲಭ್ಯಗಳನ್ನು ಒದಗಿಸಲೂ ಮುಂದಾಗುತ್ತಿದೆ. ಸೈಕಲ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ರಾಷ್ಟ್ರೀಯ ಸೈಕ್ಲಿಸ್ಟ್‌ಗೆ ಸರ್ಕಾರದ ಸಹಾಯದಿಂದ 5 ಲಕ್ಷ ರೂ. ಬೆಲೆ ಬಾಳುವ ಅಂತಾರಾಷ್ಟ್ರೀಯ ಗುಣಮಟ್ಟದ ಸೈಕಲ್ ದೊರೆತಿದೆ.

ಗದಗ ಜಿಲ್ಲೆಯ ರಾಷ್ಟ್ರಮಟ್ಟದ ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಣಮಟ್ಟದ ಸೈಕಲ್ ಒದಗಿಸಲು ಸಹಾಯ ಮಾಡಿದ್ದಾರೆ. ಸೈಕ್ಲಿಸ್ಟ್ ಪವಿತ್ರಾ ಅವರು ದೂರವಾಣಿ ಮೂಲಕ ಸಿಎಂ ಬೊಮ್ಮಾಯಿ ಅವರನ್ನು ಸಂಪರ್ಕಿಸಿ, ಮಾತನಾಡಿ ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ನಲ್ಲಿ ಭಾಗವಹಿಸಲು ಉತ್ತಮ ದರ್ಜೆಯ ಸೈಕಲ್‌ ಒದಗಿಸುವಂತೆ ಮನವಿ ಮಾಡಿದ್ದರು.

ಆಗ ಉತ್ತಮ ಗುಣಮಟ್ಟದ ಸೈಕಲ್‌ ಕೊಡಿಸುವುದಾಗಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ತಾವು ಕೊಟ್ಟಿದ್ದ ಮಾತಿನಂತೆಯೇ ಒಂದು ವಾರದಲ್ಲಿಯೇ ಅಂತಾರಾಷ್ಟ್ರೀಯ ಸೈಕ್ಲಿಸ್ಟ್‌ಗಳು ಬಳಸುವ ಸೈಕಲ್‌ನ್ನು ಪವಿತ್ರಾಗೆ ಸಿಎಂ ಬೊಮ್ಮಾಯಿ ಹಸ್ತಾಂತರಿಸಿದ್ದಾರೆ.

ಪವಿತ್ರಾ ಕನಸು-ನನಸು ಮಾಡಿದ ಕ್ರೀಡಾ ಇಲಾಖೆ!

ಪವಿತ್ರಾ ಕನಸು-ನನಸು ಮಾಡಿದ ಕ್ರೀಡಾ ಇಲಾಖೆ!

ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ಕ್ರೀಡಾ ಇಲಾಖೆ ಹಾಗೂ ದಾನಿಗಳ ಸಹಕಾರದೊಂದಿಗೆ Aergon-18 E119 ಮಾದರಿಯ ಸೈಕಲ್‌ನ್ನು ಖರೀದಿಸಿ ಸೈಕ್ಲಿಸ್ಟ್ ಪವಿತ್ರಾ ಅವರಿಗೆ ಒದಗಿಸಿದ್ದಾರೆ. ಆ ಮೂಲಕ ಸೈಕ್ಲಿಸ್ಟ್‌ ಪವಿತ್ರಾ ಕನಸು ನನಸುಗೊಳಿಸಿ ಅ೦ತರಾಷ್ಟೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲುಚ ರಾಜ್ಯ ಸರ್ಕಾರ ಸಹಾಯ ಮಾಡಿದಂತಾಗಿದೆ.

ವಿಧಾನಸೌಧದಲ್ಲಿ ಸೈಕಲ್ ಹಸ್ತಾಂತರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ರಾಷ್ಟ್ರಮಟ್ಟದ ಸೈಕ್ಲಿಸ್ಟ್‌ ಪವಿತ್ರಾ ಅವರಿಗೆ ಸೈಕಲ್ ಅಗತ್ಯವಿರುವ ಬಗ್ಗೆ ತಿಳಿದು ಬಂದಿತ್ತು. ಆಗ ನಾನೇ ಖುದ್ದಾಗಿ ಕ್ರೀಡಾ ಸಚಿವರಿಗೆ ಈ ಬಗ್ಗೆ ತಿಳಿಸಿದ್ದೆ. ಕೇವಲ 8 ದಿನಗಳಲ್ಲಿ ಕೆನಡಾದಿಂದ ಸೈಕಲ್ ತರಿಸಿಕೊಡುವ ಕೆಲಸವನ್ನು ಕ್ರೀಡಾ ಇಲಾಖೆ ಮಾಡಿದೆ. ಸರ್ಕಾರದ ಅನುದಾನ ಪಡೆಯದೆ ಕ್ರೀಡಾಭಿಮಾನಿಗಳಿಂದ ದೇಣಿಗೆ ಪಡೆದು ಪವಿತ್ರಾಗೆ ಸೈಕಲ್ ಕೊಡಿಸಿರುವುದು ಶ್ಲಾಘನೀಯ" ಎಂದರು.

5 ಲಕ್ಷ ರೂ. ಬೆಲೆಯ ಸೈಕ್ಲಿಸ್ಟ್‌ಗಳು ಬಳಸುವ ಸೈಕಲ್!

5 ಲಕ್ಷ ರೂ. ಬೆಲೆಯ ಸೈಕ್ಲಿಸ್ಟ್‌ಗಳು ಬಳಸುವ ಸೈಕಲ್!

ಪವಿತ್ರಾ ಕುರ್ತಕೋಟಿ ಪಟಿಯಾಲದಲ್ಲಿ ನಡೆಯಲಿರುವ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಅವರು ಪ್ರತಿನಿಧಿಸುವ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಸಿಎಂ ಬೊಮ್ಮಾಯಿ ಇದೆ ವೇಳೆ ಶುಭ ಹಾರೈಸಿದರು. ಪವಿತ್ರಾಗೆ ಕೊಡುಗೆ ಕೊಟ್ಟಿರುವ ಸೈಕಲ್‌ನ್ನು ಕೆನಡಾ ದೇಶದಿಂದ ತರಿಸಲಾಗಿದೆ. ಅದರ ವೆಚ್ಚ 5 ಲಕ್ಷ ರೂಪಾಯಿ. ಈ ವೆಚ್ಚವನ್ನು ಎಂಬಸಿ, ಬ್ಲಾಸಂ ಆಸ್ಪತ್ರೆ ಹಾಗೂ ಮಧುಸೂಧನ ಎಂಬುವರು ಸಿಎಸ್‌ಆರ್ ನಿಧಿಯಿಂದ ಭರಿಸಿದ್ದಾರೆ ಎಂದು ಕ್ರೀಡಾ ಇಲಾಖೆ ಮಾಹಿತಿ ಕೊಟ್ಟಿದೆ.

ಸೈಕ್ಲಿಸ್ಟ್ ಪವಿತ್ರಾ ಸಾಧನೆಯ ಹಾದಿ!

ಸೈಕ್ಲಿಸ್ಟ್ ಪವಿತ್ರಾ ಸಾಧನೆಯ ಹಾದಿ!

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಅಶೋಕ್‌ ಹಾಗೂ ರೇಣುಕಾ ದಂಪತಿಯ ಪುತ್ರಿ ಪವಿತ್ರಾ ಕುರ್ತಕೋಟಿ 5ನೇ ತರಗತಿಯಿಂದಲೇ ಸೈಕ್ಲಿಂಗ್‌ನಲ್ಲಿ ಸಾಧನೆ ಆರಂಭಿಸಿದ್ದರು. ಈಗ ಪಿಯುಸಿಯಲ್ಲಿ ಓದುತ್ತಿದ್ದು, ತಂದೆ ರೈತ ಕಾರ್ಮಿಕರಾಗಿದ್ದು, ತಾಯಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ಅಡುಗೆ ಸಹಾಯಕರಾಗಿದ್ದಾರೆ. ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪವಿತ್ರಾಗೆ ಮೊದಲಿನಿಂದಲೂ ಸೈಕ್ಲಿಂಗ್‌ನಲ್ಲಿ ಆಸಕ್ತಿ. ಆದರೆ ಗುಣಮಟ್ಟದ ಸೈಕಲ್‌ ಖರೀದಿಸುವ ಶಕ್ತಿ ಇರಲಿಲ್ಲ. ದಾನಿಗಳ ಸಹಾಯದಿಂದ ಸೈಕ್ಲಿಸ್ಟ್‌ ಪವಿತ್ರ ಸೈಕಲ್‌ ಖರೀದಿಸಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದಿದ್ದಾರೆ.

Recommended Video

ಗಂಡು ಮಗುವಿಗೆ ಜನುಮ ಕೊಟ್ಟ ನಿಖಿಲ್ ಕುಮಾರಸ್ವಾಮಿ ದಂಪತಿ | Oneindia Kannada
ಸೈಕ್ಲಿಂಗ್‌ನಲ್ಲಿ ಪವಿತ್ರಾ ಸಾಧನೆ ಹೀಗಿದೆ!

ಸೈಕ್ಲಿಂಗ್‌ನಲ್ಲಿ ಪವಿತ್ರಾ ಸಾಧನೆ ಹೀಗಿದೆ!

* 2018ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರೋಡ್‌ ಸೈಕ್ಲಿಂಗ್‌ 158.ಮಿ. ಸ್ಪರ್ಧೆಯಲ್ಲಿ 5ನೇ ಸ್ಥಾನ.

* 2019ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಎಂ.ಟಿ.ಬಿ. ಸೈಕಲ್‌ ಸ್ಪರ್ಧೆಯಲ್ಲಿ 9ನೇ ಸ್ಥಾನ.

* 2021ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಎಂ.ಟಿ.ಬಿ. ಮೌಂಟೇನ್‌ ಬೈಕ್‌ ಸ್ಪರ್ಧೆಯಲ್ಲಿ 3ನೇ ಸ್ಥಾನ.

* 2021ರಲ್ಲಿ ಗದಗದಲ್ಲಿ ನಡೆದ ರಾಷ್ಟ್ರೀಯ ಎಂ.ಟಿ.ಬಿ. ಮೌಂಟೇನ್‌ ಬೈಕ್‌ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ.


ಈಗ ನ್ಯಾಶನಲ್‌ ಲೆವೆಲ್‌ ಗೇಮ್ಸ್‌ ಚಾಂಪಿಯನ್‌ ಶಿಪ್‌ಗೆ ಆಯ್ಕೆಯಾಗಿದ್ದಾರೆ. ಪಂಜಾಬ್‌ನ ಪಟಿಯಾಲದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಟೀಂಗೆ ಆಯ್ಕೆಯಾಗಿದ್ದು, ಈ ಕ್ಯಾಂಪ್‌ನಲ್ಲಿ ಪಾಲ್ಗೊಳ್ಳಲು ಅಂತರಾಷ್ಟ್ರೀಯ ಮಟ್ಟದ ಸೈಕಲ್‌ ಅಗತ್ಯವಿತ್ತು.

English summary
Chief Minister Basavaraj Bommai has helped national cyclist Pavithra Kurtakoti of Gadag district to provide a quality bicycle. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X