ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 15ರಿಂದ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ: ಕೃಷಿ ಸಚಿವ

|
Google Oneindia Kannada News

ಚಿಕ್ಕಬಳ್ಳಾಪುರ, ಮೇ 21: ಜೂನ್ 15ನೇ ತಾರೀಖಿನಿಂದ ರಾಜ್ಯದ ಆಯ್ದ ಪ್ರದೇಶಗಳಲ್ಲಿ ಮಳೆಗಾಗಿ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ರಾಜ್ಯ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಬಾರಿ ವಾಡಿಕೆಗಿಂತಲೂ ಕಡಿಮೆ ಮಳೆ ಆಗಲಿದೆ, ಹಾಗಾಗಿ ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ ಎಂದಿದ್ದಾರೆ. ಇದೇ ವಿಷಯವನ್ನು ಇತ್ತೀಚೆಗಷ್ಟೆ ಸಚಿವ ಕೃಷ್ಣಬೈರೇಗೌಡ ಅವರೂ ಹೇಳಿದ್ದರು.

ಮುಂಗಾರು ಮಳೆ ಕಡಿಮೆ ಮುನ್ಸೂಚನೆ : ಸರ್ಕಾರದಿಂದ ಮೋಡ ಬಿತ್ತನೆ ಮುಂಗಾರು ಮಳೆ ಕಡಿಮೆ ಮುನ್ಸೂಚನೆ : ಸರ್ಕಾರದಿಂದ ಮೋಡ ಬಿತ್ತನೆ

ಕಳೆದ ವರ್ಷ ವಿಧಾನಸಭೆ ಚುನಾವಣೆ ಇದ್ದ ಕಾರಣ ಮೋಡ ಬಿತ್ತನೆ ಸಾಧ್ಯವಾಗಲಿಲ್ಲ, ಆದರೆ ಈ ಬಾರಿ ಹಾಗಾಗದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದು, ಹುಬ್ಬಳ್ಳಿ ಮತ್ತು ಬೆಂಗಳೂರು ಕೇಂದ್ರಗಳ ಮೂಲಕ ಜೂನ್ 15 ರಿಂದ ಮೋಡ ಬಿತ್ತನೆ ಆರಂಭವಾಗಲಿದೆ ಎಂದರು.

Cloud seeding starts from June 15 in Karnataka

ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಸಚಿವರು, ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಇತರರೊಂದಿಗೆ ಸಭೆ ನಡೆಸಿದರು.

ಪೂರ್ವ ಮುಂಗಾರು ಮಳೆ ಕ್ಷೀಣ : ರೈತರಿಗೆ ಕೆಲವು ಸಲಹೆಗಳುಪೂರ್ವ ಮುಂಗಾರು ಮಳೆ ಕ್ಷೀಣ : ರೈತರಿಗೆ ಕೆಲವು ಸಲಹೆಗಳು

88 ಕೋಟಿ ರೂಪಾಯಿ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸಲು ಸರ್ಕಾರ ತಯಾರಾಗಿದೆ. ಈ ಬಾರಿ ಮುಂಗಾರು ಕ್ಷೀಣಿಸುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಕಾರಣ ಮಳೆ ಕೊರತೆ ಆಗದಂತೆ ಮಾಡಲು ಮೋಡ ಬಿತ್ತನೆ ಮಾಡಲಾಗುತ್ತಿದೆ.

ಜೂನ್ 06ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ, ಜೂನ್ 8 ಅಥವಾ 9 ರಂದು ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಲಿದೆ. ಆದರೆ ಈ ಬಾರಿ ವಾಡಿಕೆಗಿಂತಲೂ ಅತ್ಯಂತ ಕಡಿಮೆ ಮಳೆ ಆಗಲಿದೆ ಎನ್ನಲಾಗಿದೆ.

English summary
Cloud seeding will start in Karnataka from June 15 says Agriculture minister Shishankar Reddy. He says tender process already completed, cloud seeding will done in Bengaluru and Hubli centers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X