ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಪಾಠ

|
Google Oneindia Kannada News

ಬೆಂಗಳೂರು, ಜುಲೈ 19 : ಕೋವಿಡ್ - 19 ಪರಿಣಾಮ ಶಾಲೆಗಳು ಮುಚ್ಚಿವೆ. ನಿಗದಿತ ಅವಧಿಯಲ್ಲಿ ಶಾಲೆಗಳು ಬಾಗಿಲಿ ತೆರೆದಿಲ್ಲ. ಕರ್ನಾಟಕ ಸರ್ಕಾರ ಜುಲೈನಿಂದ ಡಿಸೆಂಬರ್ ತನಕ ಚಂದನ ವಾಹಿನಿ ಮೂಲಕ ಪಾಠ ಪ್ರಸಾರ ಮಾಡುವ ಯೋಜನೆಗೆ ಅನುಮೋದನೆ ನೀಡಿದೆ.

Recommended Video

Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಜುಲೈನಿಂದ ಡಿಸೆಂಬರ್ ತನಕ ಚಂದನ ವಾಹಿನಿ ಮೂಲಕ ಪಾಠ ಪ್ರಸಾರ ಮಾಡಲಾಗುತ್ತದೆ. ಶಾಲೆಗಳು ಎಂದು ಬಾಗಿಲು ತೆರೆಯಲಿವೆ ಎಂಬುದನ್ನು ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ.

 ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ

ಈ ಯೋಜನೆ ಅನುಷ್ಠಾನಕ್ಕೆ 1.60 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಕಾರ್ಯಕ್ರಮಗಳ ಪ್ರಯೋಜನವನ್ನು ಹೆಚ್ಚು ವಿದ್ಯಾರ್ಥಿಗಳು ಪಡೆಯುವಂತಾಗಲು ಯೂ ಟ್ಯೂಟ್‌ನಲ್ಲಿಯೂ ಪಾಠಗಳ ವಿಡಿಯೋ ಲಭ್ಯವಾಗುವಂತೆ ಮಾಡಲಾಗುತ್ತದೆ.

ಆನ್‌ಲೈನ್ ಕ್ಲಾಸ್‌ಗೆ ಕರ್ನಾಟಕದ ಒಪ್ಪಿಗೆ; ತರಗತಿಗಳ ವಿವರ ಆನ್‌ಲೈನ್ ಕ್ಲಾಸ್‌ಗೆ ಕರ್ನಾಟಕದ ಒಪ್ಪಿಗೆ; ತರಗತಿಗಳ ವಿವರ

ಶಾಲೆಗಳಿಗೆ ಮೂಲ ಸೌಕರ್ಯ, ಯಂತ್ರೋಪಕರಣ, ಸಾಧನ, ಸಾಮಾಗ್ರಿ ಖರೀದಿ ಯೋಜನೆಯಡಿ ಬಿಡುಗಡೆ ಮಾಡಲಾದ ಅನುದಾನದಿಂದ ಈ ವೆಚ್ಚವನ್ನು ಭರಿಸಲು ತೀರ್ಮಾನಿಸಲಾಗಿದೆ. ಖಾಸಗಿ ಶಾಲೆಗಳು ಈಗಾಗಲೇ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿವೆ.

ಭಾರತದಲ್ಲಿ ಆನ್‌ಲೈನ್ ಶಿಕ್ಷಣ ಉತ್ತೇಜಿಸಲು CBSE ಜೊತೆಗೆ ಕೈ ಜೋಡಿಸಿದ ಗೂಗಲ್ಭಾರತದಲ್ಲಿ ಆನ್‌ಲೈನ್ ಶಿಕ್ಷಣ ಉತ್ತೇಜಿಸಲು CBSE ಜೊತೆಗೆ ಕೈ ಜೋಡಿಸಿದ ಗೂಗಲ್

1,17,24,480 ರೂ. ಪಾವತಿ

1,17,24,480 ರೂ. ಪಾವತಿ

ಕರ್ನಾಟಕ ಸರ್ಕಾರ ದೂರದರ್ಶನಕ್ಕೆ 30 ನಿಮಿಷಗಳ ಎಂಟು ಅವಧಿಯ 120 ದಿನದ ಕಾರ್ಯಕ್ರಮ ಪ್ರಸಾರಕ್ಕೆ ಗಂಟೆಗೆ 24,426 ರೂ.ಗಳಂತೆ 1.17 ಕೋಟಿ ರೂ. ಪಾವತಿ ಮಾಡಲಿದೆ.

ಶಿಕ್ಷಕರ ಭತ್ಯೆ ಪ್ರತ್ಯೇಕ

ಶಿಕ್ಷಕರ ಭತ್ಯೆ ಪ್ರತ್ಯೇಕ

ಸಂಪನ್ಮೂಲ ಶಿಕ್ಷಕರ ಭತ್ಯೆ, ಪ್ರಯಾಣ ಭತ್ಯೆ ಮತ್ತು ಸಂಭಾವನೆಗಾಗಿ 960 ಗಂಟೆಗೆ ತಲಾ 2 ಸಾವಿರದಂತೆ 19.20 ಲಕ್ಷವನ್ನು ನೀಡಬೇಕಿದೆ. ಒಂದು ತಿಂಗಳು ಪಾಠ ಪ್ರಸಾರವಾದ ಬಳಿಕ ವಿದ್ಯಾರ್ಥಿಗಳಿಗೆ ಕಿರು ಪರೀಕ್ಷೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ.

ತರಗತಿ ಸಂಯೋಜನೆ ಜವಾಬ್ದಾರಿ

ತರಗತಿ ಸಂಯೋಜನೆ ಜವಾಬ್ದಾರಿ

ಟಿವಿ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳನ್ನು ಟಿವಿ ಇರುವ ವಿದ್ಯಾರ್ಥಿಯೊಂದಿಗೆ ಅನುಮತಿ ಪಡೆದು ಸಂಯೋಜಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಹೊಣೆಗಾರಿಕೆ ನೀಡಲಾಗಿದೆ. ಇದಕ್ಕಾಗಿ 20 ಮಕ್ಕಳಿಗೆ ಒಬ್ಬರು ಶಿಕ್ಷಕರು ಜವಾಬ್ದಾರಿಯಾಗಿದ್ದಾರೆ.

ತಾಂತ್ರಿಕ ಸಹಾಯಗಳು

ತಾಂತ್ರಿಕ ಸಹಾಯಗಳು

ಟಿವಿಯಲ್ಲಿ ಪಾಠ ಪ್ರಸಾರವಾಗಲು ತಾಂತ್ರಿಕ ಸಹಾಯ ಅಗತ್ಯ. ತಾಂತ್ರಿಕ ತಂಡದವರಿಗೆ 960 ಗಂಟೆಗೆ ತಲಾ 500 ರೂ. ನಂತೆ 48 ಲಕ್ಷ, 15 ಮಂದಿಯ ಉಪಹಾರಕ್ಕೆ 5.25 ಲಕ್ಷ, ಸ್ಟುಡಿಯೋ ಹೆಚ್ಚುವರಿ ಉಪಕರಣಗಳ ಬಾಡಿಗೆಯಾಗಿ 5 ಲಕ್ಷ ಸೇರಿದಂತೆ ಒಟ್ಟು 3 ಲಕ್ಷದ ಕ್ರಿಯಾ ಯೋಜನೆಗೂ ಸರ್ಕಾರ ಒಪ್ಪಿಗೆ ಕೊಟ್ಟಿದೆ.

English summary
Karnataka government approved to conduct class to 8, 9 and 10th standard students through Doordarshan Chandana from July to December. School closed due to COVID pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X