ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೇ ಎರಡೂವರೆ ವರ್ಷ ಸಿಎಂ ಎನ್ನುವುದು 'ಅಪಾಯ'ದ ಮುನ್ಸೂಚನೆ

|
Google Oneindia Kannada News

ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ನಿರಾಳರಾಗಿದ್ದರು. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರದ ಹೊಸವರ್ಷದ ಮುನ್ನಾದಿನ ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಎನ್ನುವ ಹೇಳಿಕೆಯನ್ನು ಮುಖ್ಯಮಂತ್ರಿಗಳು ನೀಡಿದ್ದರು.

ಪೂರ್ಣಾವಧಿಗೆ ನಾನೇ ಸಿಎಂ ಎಂದು ಖುದ್ದು ತಾವೇ ಹೇಳುವುದರ ಹಿಂದಿನ ಕಾರಣ ಅತ್ಯಂತ ಸ್ಪಷ್ಟ. ಸದ್ಯ ಸದಾ ಸುದ್ದಿಯಲ್ಲಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಬ್ರೇಕ್ ಹಾಕಲು ಯಡಿಯೂರಪ್ಪ ಈ ಹೇಳಿಕೆಯನ್ನು ನೀಡಿರಬಹುದು.

ದೆಹಲಿಯಿಂದ ಬಂದ ಖಚಿತ ಮಾಹಿತಿ ಎಂದು ಸಿದ್ದರಾಮಯ್ಯ ಪದೇಪದೆ ಬಿಎಸ್ವೈ ಬಗ್ಗೆ ಯಾಕೆ ಹೀಗೆ ಹೇಳುತ್ತಿದ್ದಾರೆ? ದೆಹಲಿಯಿಂದ ಬಂದ ಖಚಿತ ಮಾಹಿತಿ ಎಂದು ಸಿದ್ದರಾಮಯ್ಯ ಪದೇಪದೆ ಬಿಎಸ್ವೈ ಬಗ್ಗೆ ಯಾಕೆ ಹೀಗೆ ಹೇಳುತ್ತಿದ್ದಾರೆ?

ರಾಜ್ಯದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, "ನಾಯಕತ್ವದ ವಿಚಾರದಲ್ಲಿ ಪಕ್ಷದಲ್ಲಿ ಗೊಂದಲವಿದೆ ಎನ್ನುವುದು ಕಪೋಕಲ್ಪಿತ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ"ಎಂದು ಸ್ಪಷ್ಟ ಪಡಿಸಿದ್ದರು.

ಅದೇನೇ ಇರಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಸಂಬಂಧ ಹೇಳಿಕೆಯನ್ನು ನೀಡುತ್ತಾ, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದು ಅಪಾಯದ ಮುನ್ಸೂಚನೆ ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಒಂದು ದಿನದ ಮುನ್ನಾ ಡಿಕೆಶಿಯವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿ ಬದಲಾವಣೆ: ಮೊದಲ ಬಾರಿ ಮೌನ ಮುರಿದ ಯಡಿಯೂರಪ್ಪ!ಮುಖ್ಯಮಂತ್ರಿ ಬದಲಾವಣೆ: ಮೊದಲ ಬಾರಿ ಮೌನ ಮುರಿದ ಯಡಿಯೂರಪ್ಪ!

ಮುಂದಿನ ಎರಡೂವರೆ ವರ್ಷಕ್ಕೆ ನಾನೇ ಸಿಎಂ ಅಗಿರುತ್ತೇನೆ

ಮುಂದಿನ ಎರಡೂವರೆ ವರ್ಷಕ್ಕೆ ನಾನೇ ಸಿಎಂ ಅಗಿರುತ್ತೇನೆ

ಡಿಸೆಂಬರ್ 31ರಂದು ಶಾಸಕರ ವಿಭಾಗವಾರು ಸಭೆ ನಡೆಸಿದ ನಂತರ ಮಾತನಾಡುತ್ತಿದ್ದ ಸಿಎಂ ಯಡಿಯೂರಪ್ಪ, "ಆಡಳಿತ ಯಂತ್ರ ಚುರುಕುಗೊಳ್ಳಲಿದೆ. ನಮ್ಮ ಉಸ್ತುವಾರಿಯವರೇ ನಾಯಕತ್ವ ಬದಲಾವಣೆಯಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದರಿಂದ, ಮುಂದಿನ ಎರಡೂವರೆ ವರ್ಷಕ್ಕೆ ನಾನೇ ಸಿಎಂ ಅಗಿರುತ್ತೇನೆ. ಈ ಬಗ್ಗೆ ಸಂಶಯವಿಲ್ಲ"ಎಂದು ಬಿಎಸ್ವೈ ಹೇಳಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, "ಮುಖ್ಯಮಂತ್ರಿಯಾದವರು ನಾನೇ ಎರಡೂವರೆ ವರ್ಷ ಸಿಎಂ ಎನ್ನುವ ಹೇಳಿಕೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಯಾಕೆ. ಇದರಿಂದ ಸಿಎಂ ಕುರ್ಚಿಗೆ ಸಂಚಕಾರವಾಗಿದೆ ಎಂದು ಭಾವಿಸಬೇಕಾಗುತ್ತದೆ. ಇದು ಅಪಾಯದ ಮುನ್ಸೂಚನೆ"ಎಂದು ಹೇಳಿದ್ದಾರೆ.

ನಾವು ಯಡಿಯೂರಪ್ಪನವರ ಸಿಎಂ ಅಧಿಕಾರದ ಬಗ್ಗೆ ಪ್ರಶ್ನಿಸಿಲ್ಲ

ನಾವು ಯಡಿಯೂರಪ್ಪನವರ ಸಿಎಂ ಅಧಿಕಾರದ ಬಗ್ಗೆ ಪ್ರಶ್ನಿಸಿಲ್ಲ

"ನಾವು ಯಡಿಯೂರಪ್ಪನವರ ಸಿಎಂ ಅಧಿಕಾರದ ಬಗ್ಗೆ ಪ್ರಶ್ನಿಸಿಲ್ಲ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ತಮಗೆ ತಾವೇ ಯಡಿಯೂರಪ್ಪನವರು ಸರ್ಟಿಫಿಕೇಟ್ ಕೊಟ್ಟುಕೊಂಡರೆ ಹೇಗೆ. ಇದರಲ್ಲಿ ಏನೋ ಎಡವಟ್ಟಿದೆ"ಎನ್ನುವ ಗುಮಾನಿಯನ್ನು ಡಿಕೆಶಿ ಪ್ರದರ್ಶಿಸಿದ್ದಾರೆ.

Recommended Video

ಅವ್ರು ನಾಶ ಆಗಿ ಹೋಗ್ತಾರೆ ಅಂತ ಹೇಳಿದ್ದು ಯಾರಿಗೆ ?? | Manjunath HS | Youth Congress Interview Part 2
ಸಿದ್ದರಾಮಯ್ಯ ಹಲವು ಬಾರಿ ಹೇಳಿಕೆ

ಸಿದ್ದರಾಮಯ್ಯ ಹಲವು ಬಾರಿ ಹೇಳಿಕೆ

"ಯಡಿಯೂರಪ್ಪನವರ ಮುಖ್ಯಮಂತ್ರಿ ಕುರ್ಚಿಯೇ ಅಲ್ಲಾಡ್ತಿದೆ. ದೆಹಲಿಯಿಂದ ನನಗೆ ಬಂದ ಖಚಿತ ಮಾಹಿತಿಯ ಪ್ರಕಾರ ಯಡಿಯೂರಪ್ಪನವರನ್ನು ಮುಖ್ಯಮಂತಿ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ. ಹಾಗಾಗಿಯೇ, ಬಿಜೆಪಿ ವರಿಷ್ಠರು ಯಡಿಯೂರಪ್ಪನವರನ್ನು ನೆಗ್ಲೆಕ್ಟ್ ಮಾಡುತ್ತಿರುವುದು. ಸಂಪುಟ ವಿಸ್ತರಣೆ ಆಗದೇ ಇರುವುದು ಕೂಡಾ ಅದೇ ಕಾರಣಕ್ಕೆ"ಎಂದು ಸಿದ್ದರಾಮಯ್ಯ ಹಲವು ಬಾರಿ ಹೇಳಿದ್ದರು.

English summary
Claiming Himself, I Will Continue As CM And Complete The Term Is Not Good Sign, DK Shivakumar Statement,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X