ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ಪರೀಕ್ಷೆ ಕಿಟ್ ಖರೀದಿಸುವವರ ಫಲಿತಾಂಶ ಏನೋ ಎಂತೋ?: ಸರ್ಕಾರದ ಸುತ್ತೋಲೆ

|
Google Oneindia Kannada News

ನವದೆಹಲಿ, ಜನವರಿ 17: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ತೀವ್ರವಾಗಿ ಹರಡುತ್ತಿದೆ. ರಾಜ್ಯದಲ್ಲಿ ದೈನಂದಿನ ಸೋಂಕಿತ ಪ್ರಕರಣಗಳ ಸಂಖ್ಯೆ ಈಗಾಗಲೇ 30,000 ಗಡಿ ದಾಟಿದೆ.

ಕೊವಿಡ್-19 ಸೋಂಕು ಪತ್ತೆಗೆ ನಡೆಸುವ ರಾಪಿಡ್ ಆಂಟಿಜೆನಿಕ್ ಟೆಸ್ಟ್(RAT Test) ಮತ್ತು RT-PCR ಪರೀಕ್ಷೆ ಜೊತೆ ಹೋಮ್ ಸೇಫ್ಟಿ ಕಿಟ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಹೀಗೆ ಕಿಟ್ ಖರೀದಿಸುತ್ತಿರುವವರ ಅಂಕಿ-ಸಂಖ್ಯೆಯ ಲೆಕ್ಕವೇ ಸಿಗುತ್ತಿಲ್ಲ. ಈ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆದೇಶವೊಂದನ್ನು ಹೊರಡಿಸಿದ್ದಾರೆ.

ಎಚ್ಚರಿಕೆ: ಕರ್ನಾಟಕದಲ್ಲಿ ತುರ್ತು ಅಗತ್ಯವಿಲ್ಲದೇ ಆಸ್ಪತ್ರೆಗೆ ಹೋಗಬೇಡಿಎಚ್ಚರಿಕೆ: ಕರ್ನಾಟಕದಲ್ಲಿ ತುರ್ತು ಅಗತ್ಯವಿಲ್ಲದೇ ಆಸ್ಪತ್ರೆಗೆ ಹೋಗಬೇಡಿ

ಕೊರೊನಾವೈರಸ್ ಸೋಂಕು ಪರೀಕ್ಷೆಗಾಗಿ ಖರೀದಿಯಾಗುತ್ತಿರುವ ಕಿಟ್ ಸಂಖ್ಯೆ ಎಷ್ಟು?, RAT ಕಿಟ್ ಖರೀದಿ ಎಷ್ಟು?, ಹೋಮ್ ಸೇಫ್ಟಿ ಕಿಟ್ ಎಷ್ಟು ಮಾರಾಟವಾಗಿವೆ?, ಹೀಗೆ ಕಿಟ್ ಖರೀದಿಸಿದವರ ವೈದ್ಯಕೀಯ ಪರೀಕ್ಷೆ ಫಲಿತಾಂಶವೇನು? ಎಂಬುದರ ಕುರಿತು ಮೇಲ್ವಿಚಾರಣೆ ನಡೆಸಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಏನಿದೆ ಎಂಬುದನ್ನು ಮುಂದೆ ಉಲ್ಲೇಖಿಸಲಾಗಿದೆ.

Circular on Supervision of Supply and Selling Rapid Antigen and Home Safe Kit used for Covid-19 testing


ಸರ್ಕಾರದ ಆದೇಶದಲ್ಲಿ ಇರುವುದೇನು?:

ಕೊವಿಡ್-19 ಪರೀಕ್ಷೆಗೆ ಬಳಸುತ್ತಿರುವ RT-PCR, RAT ಪರೀಕ್ಷೆ, ಹೋಮ್ ಸೇಫ್ಟಿ ಕಿಟ್ ಅನ್ನು ಗ್ರಾಹಕರೇ ನೇರವಾಗಿ ಖರೀದಿಸುತ್ತಿದ್ದಾರೆ. ಆದರೆ ಹೀಗೆ ಖರೀದಿಸಿದ ಕಿಟ್ ಪೈಕಿ ಬಳಕೆ ಆಗಿರುವುದು ಎಷ್ಟು. ಬಳಕೆಯಾಗಿರುವ ಕಿಟ್ ಫಲಿತಾಂಶ ಏನಾಗಿದೆ ಎಂಬುದರ ಬಗ್ಗೆ ಆರೋಗ್ಯ ಇಲಾಖೆಗೆ ಸ್ಪಷ್ಟ ಮಾಹಿತಿಯಿಲ್ಲ. ಈ ಕುರಿತು ಮಾಹಿತಿ ಪಡೆಯುವುದು ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಸಿ ಮತ್ತು ಎಫ್ ಹಾಗೂ ವಿತರಕರುಗಳಲ್ಲಿ ಸ್ವೀಕೃತವಾಗಿರುವ ಹಾಗೂ ಮಾರಾಟ ಮಾಡುತ್ತಿರುವ ಕೊವಿಡ್-19 ಪರೀಕ್ಷೆಗೆ ಬಳಸುವ RT-PCR Test, RAT Test, Home Safe Kit ಸರಬರಾಜು ಮತ್ತು ಮಾರಾಟದ ವಿವರಗಳನ್ನು ಪರಿಶೀಲಿಸಿ ಸುತ್ತೋಲೆ ಜೊತೆ ಲಗತ್ತಿಸಿರುವ ನಮೂನೆ ಎ-ರಲ್ಲಿ ಪಡೆದು ದುರ್ಬಳಕೆಯಾಗದ ರೀತಿಯಲ್ಲಿ ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.

ಸದರಿ Home Safe Kit ಅನ್ನು ದಾಸ್ತಾನು ಮಾಡುವ ಹಾಗೂ ಅವುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ವ್ಯಾಪಾರಿಗಳು ಅದನ್ನು ಖರೀದಿಸುವ ಗ್ರಾಹಕರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿಟ್ಟುಕೊಳ್ಳಬೇಕು. ತದನಂತರದಲ್ಲಿ ಅದನ್ನು ಸುತ್ತೋಲೆಯ ನಮೂಲೆ ಬಿ-ಕಾಲಂನಲ್ಲಿ ಸಂಗ್ರಹಿಸಬೇಕು. ಇದರ ಜೊತೆಗೆ ಕಿಟ್ ಅನ್ನು ಅಪ್ಲಿಕೇಶನ್ ನಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಯಂತೆ ಬಳಸಬೇಕು. ಒಂದು ವೇಳೆ ಕೊವಿಡ್-19 ಸೋಂಕಿನ ಪಾಸಿಟಿವ್ ವರದಿ ಬಂದರೆ ತಕ್ಷಣ ಹತ್ತಿರದ ಕೊರೊನಾವೈರಸ್ ಕೇಂದ್ರ ಅಥವಾ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲು ತಿಳಿಸಲಾಗಿದೆ. ಖಾಸಗಿಯಾಗಿ ಕೊವಿಡ್-19 ಪರೀಕ್ಷೆ ಕಿಟ್ ಖರೀದಿಸುವವರ ಮಾಹಿತಿಯನ್ನು ಸಂಗ್ರಹಿಸಿ ಪ್ರತಿವಾರ ಆರೋಗ್ಯ ಇಲಾಖೆಗೆ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಕೊವಿಡ್-19 ಹೊಸ ದಾಖಲೆ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಪ್ರತಿನಿತ್ಯ ಭಾರತದಲ್ಲಿ ಹೊಸ ದಾಖಲೆಯನ್ನು ಬರೆಯುತ್ತಿದೆ. ದೇಶದಲ್ಲಿ ಕೊರೊನಾವೈರಸ್ ಪಾಟಿಸಿವಿಟಿ ದರ ಶೇ.119.65ರಷ್ಟಾಗಿದೆ. ಕಳೆದ ಒಂದೇ ದಿನದಲ್ಲಿ 13,13,444 ಮಂದಿಗೆ ಕೊವಿಡ್-19 ಸೋಂಕಿನ ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಈವರೆಗೂ 70,37,62,282 ಜನರಿಗೆ ಕೊರೊನಾವೈರಸ್ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ 2,58,089 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಮವಾರ ವರದಿಯಾದ ಪ್ರಕರಣಗಳ ಸಂಖ್ಯೆಯಲ್ಲಿ 13,113 ಇಳಿಕೆಯಾಗಿದೆ. ಅದೇ ರೀತಿ ಒಂದು ದಿನದಲ್ಲಿ 1,51,740 ಸೋಂಕಿತರು ಗುಣಮುಖರಾಗಿದ್ದರೆ, 385 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಕೊವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆಯು 16,56,341ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ಮೂರನೇ ಅಲೆಗೆ ಕಾರಣ ಎನ್ನಲಾದ ಓಮಿಕ್ರಾನ್ ರೂಪಾಂತರಿ ಪ್ರಕರಣಗಳ ಸಂಖ್ಯೆಯು 8,209ಕ್ಕೆ ಏರಿಕೆಯಾಗಿದೆ.

Recommended Video

ಹೊಸ ನಾಯಕನ ಮುಂದೆ Kohli ಹೇಗಿರಬೇಕು ಎಂದ Kapil Dev | Oneindia Kannada

English summary
Karnataka Govt Circular on Supervision of Supply and Selling Rapid Antigen and Home Safe Kit used for Covid-19 testing in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X