ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ ಹಣ ವರ್ಗಾವಣೆಗೆ ಮುನ್ನ ಫೋನ್‌ ಬರುತ್ತೆ!

|
Google Oneindia Kannada News

ಬೆಂಗಳೂರು, ಡಿ. 26 : ಹಣ ವರ್ಗಾವಣೆ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ನಡೆಯುವ ಅಕ್ರಮಗಳಿಗೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ. ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಮುನ್ನ ಸದರಿ ಖಾತೆದಾರರಿಗೆ ಫೋನ್‌ ಮಾಡಿ ಖಚಿತಪಡಿಸಿಕೊಳ್ಳಿ ಎಂದು ಬ್ಯಾಂಕ್‌ಗಳಿಗೆ ಸಿಐಡಿ ನೋಟಿಸ್‌ ಜಾರಿಗೊಳಿಸಿದೆ.

ಕೆಲವು ದಿನಗಳಿಂದ ಆನ್‌ಲೈನ್‌ ಬ್ಯಾಂಕಿಂಗ್‌ನಲ್ಲಿ ವಂಚನೆ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ಯ ಸೈಬರ್‌ ಕ್ರೈಂ ವಿಭಾಗದ ಅಧಿಕಾರಿಗಳು, ಬ್ಯಾಂಕ್‌ಗಳಿಗೆ ಈ ನೋಟಿಸ್ ಜಾರಿಗೊಳಿಸಿದ್ದಾರೆ. [ಖಾತೆಗೆ ಕನ್ನ, ಒಂದೂವರೆ ಕೋಟಿ ಲೂಟಿ]

Online

ನೋಟಿಸ್‌ನಲ್ಲೇನಿದೆ : ಆನ್‌ಲೈನ್‌ ಮುಖಾಂತರ ಒಬ್ಬರ ಖಾತೆಯಿಂದ ಮತ್ತೂಬ್ಬರ ಖಾತೆಗೆ ಹಣ ವರ್ಗಾವಣೆ ಮಾಡುವ ಮುನ್ನ ಸದರಿ ಖಾತೆದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮೌಖೀಕ ಒಪ್ಪಿಗೆ ಪಡೆದು ನಂತರ ಮಾತ್ರ ಹಣ ವರ್ಗಾವಣೆಗೊಳಿಸಬೇಕು ಎಂದು ಸಿಐಡಿ ನೋಟಿಸ್‌ನಲ್ಲಿ ಹೇಳಿದೆ.

ಇ-ಮೇಲ್‌ ಐಡಿಗಳನ್ನು ಹ್ಯಾಕ್‌ ಮಾಡಿ ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಕೋರಿ ಬರುವ ಇ-ಮೇಲ್‌ ಕಳಿಸಿ ಗ್ರಾಹಕರಿಗೆ ವಂಚಿಸಲಾಗುತ್ತಿದೆ. ಬ್ಯಾಂಕ್‌ ಅಧಿಕಾರಿಗಳು ಇಮೇಲ್‌ ಬಂದ ಬಳಿಕ ಗ್ರಾಹಕರ ಗಮನಕ್ಕೆ ತರದೆ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಆದ್ದರಿಂದ ಇನ್ನುಮುಂದೆ ದೂರವಾಣಿ ಕರೆ ಮಾಡಿ ಖಚಿತಪಡಿಸಿಕೊಂಡು ವರ್ಗಾವಣೆ ಮಾಡಬೇಕು ಎಂದು ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ. [280 ಕೋಟಿ ವಂಚಿಸಿದ್ದವರ ಬಂಧನ]

ಒಂದು ಕೋಟಿ ಲೂಟಿ ಮಾಡಿದ್ದರು : ಕೆಲವು ದಿನಗಳ ಹಿಂದೆ ಕೆನಡಾದಲ್ಲಿರುವ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಹ್ಯಾಕರ್‌ಗಳು ಬರೋಬ್ಬರಿ 1 ಕೋಟಿ 13 ಲಕ್ಷ ರೂಪಾಯಿಗಳನ್ನು ದೋಚಿದ್ದರು. ಮಣಿಪಾಲದ ಸಿಂಡಿಕೇಟ್ ಬ್ಯಾಂಕ್‌ನವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.

English summary
The Criminal Investigation Department (CID) issued notice to banks on online money transferring. Before transferring money banks should call customer for confirmation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X