ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಘವೇಶ್ವರ ಶ್ರೀ ಮೇಲಿನ ಎರಡೂ ಪ್ರಕರಣ ಸಿಐಡಿಗೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 03: ಹೊಸನಗರ ತಾಲೂಕು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಮೇಲೆ ದಾಖಲಾಗಿರುವ ಅತ್ಯಾಚಾರಕ್ಕೆ ಸಂಬಂಧಿಸಿದ ಎರಡನೇ ದೂರಿನ ವಿಚಾರಣೆಯನ್ನು ಸಿಐಡಿ ಅಧಿಕಾರಿಗಳೇ ನಡೆಸಲಿದ್ದಾರೆ.

ಯಕ್ಷಗಾನ ಕಲಾವಿದೆಯೊಬ್ಬರು ದಾಖಲಿಸಿರುವ ದೂರಿನ ವಿಚಾರಣೆಯನ್ನು ಸಿಐಡಿ ಅಧಿಕಾರಿಗಳೇ ನಡೆಸಬೇಕು ಎಂದು ಡಿಜಿ ಮತ್ತು ಐಜಿಪಿ ಸಿಐಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗೃಹಸಚಿವ ಕೆ ಜೆ ಜಾರ್ಜ್ ಸಹ ಎರಡು ಪ್ರಕರಣಗಳನ್ನು ಸಿಐಡಿ ಅಧಿಕಾರಿಗಳೇ ತನಿಖೆ ಮಾಡಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.[ಪ್ರೇಮಲತಾ ಪ್ರಕರಣವೇನು?]

bengaluru

ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಈ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮತ್ತು ಗಿರಿನಗರ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ನಡುವೆ ಮಹಿಳೆ ಜನವಾದಿ ಸಂಘಟನೆ ನೆರವಿನಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅವರಿಗೂ ಮಹಿಳೆ ಮನವಿ ನೀಡಿದ್ದು ಗಿರಿನಗರ ಪೊಲೀಸರ ಮೇಲೂ ಆರೋಪ ಮಾಡಿದ್ದಾರೆ.

ಪ್ರೇಮಲತಾ ದಿವಾಕರ್ ನೀಡಿರುವ ದೂರನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದು ತನಿಖೆ ಅಂತಿಮ ಹಂತದಲ್ಲಿದೆ. 2006 ಮತ್ತು 2012ರಲ್ಲಿ ನನ್ನ ಮೇಲೆ ಸ್ವಾಮೀಜಿ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಆಗಸ್ಟ್ 29 ರಂದು ಗಿರಿನಗರ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು. ಸ್ವಾಮೀಜಿ ಗಿರಿನಗರದಲ್ಲೇ ಚಾರ್ತುಮಾಸ್ಯ ಕೈಗೊಂಡಿದ್ದು ಅವರ ತಪಸ್ಸು ಭಂಗ ಮಾಡಲು ಸುಳ್ಳು ದೂರು ದಾಖಲಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿತ್ತು.

ನಿರೀಕ್ಷಣಾ ಜಾಮೀನಿಗೆ ಅರ್ಜಿ
ಈ ನಡುವೆ ರಾಘವೇಶ್ವರ ಸ್ವಾಮೀಜಿ ಪರ ವಕೀಲರು ಎರಡನೇ ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅತ್ಯಾಚಾರ ಪ್ರಕರಣದ ಎರಡನೇ ಆರೋಪಿ ಹೈಕೋರ್ಟ್ ವಕೀಲ ಅರುಣ್ ಶ್ಯಾಂಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಿರೀಕ್ಷಣಾ ಜಾಮೀನಿನ ವಿಚಾರಣೆ ಗುರುವಾರ(ಸೆಪ್ಟೆಂಬರ್ 3) ರಂದು ನಡೆಯಲಿದೆ.

English summary
CID Officers investigate both rape cases against Raghaveswara Swamiji. The woman who accused the pontiff of Ramachandrapura Muth, Hosanagara, of sexually harassing her, met members of the Women's Safety Committee, headed by Congress leader V S Ugrappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X