• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶೇಷ: ಕರ್ನಾಟಕದ ಗ್ರಾಮಗಳಲ್ಲಿ ಕ್ರಿಸ್ಮಸ್ ಆಚರಣೆ ಹೇಗೆ?

By ಯಜಮಾನ್ ಫ್ರಾನ್ಸಿಸ್
|

ಕ್ರಿಸ್ಮಸ್, ಜಗತ್ತಿನಾದ್ಯಂತ ಇರುವ ಕೈಸ್ತರ ಅತ್ಯಂತ ಪ್ರಮುಖವಾದ ಹಬ್ಬ. ಜಗತ್ತಿಗೆ ಹೊಸ ಶಕೆಯನ್ನೇ ಹುಟ್ಟುಹಾಕಿದ ಯೇಸುಕ್ರಿಸ್ತನ ಹುಟ್ಟುಹಬ್ಬ! ಧಾರ್ಮಿಕ ವಿಧಿವಿಧಾನಗಳಲ್ಲಿ ಅದಾಗಲೇ ಡಿಸೆಂಬರ್ 25 ನ್ನು ಸೂರ್ಯನ ಹುಟ್ಟಿನ ದಿನವಾಗಿ ಆಚರಿಸುತ್ತಿದ್ದರು. ಕ್ರಿಸ್ತನ ಹುಟ್ಟೂ ಇದರೊಳಗೆ ಅಡಕವಾಗಿ, ಹೆಚ್ಚು ಪ್ರಸ್ತುತವೂ, ಭಾವಪೂರ್ಣವೂ ಆಗಿ ಪರಿಣಮಿಸಿತು.

ಪ್ರತಿ ಮನೆಯ ಮುಂದೊಂದು ನಕ್ಷತ್ರ ಇಳಿಬಿಟ್ಟು, ಬೆಳಕು ತುಂಬುವುದರೊಂದಿಗೆ, ಸಾಮಾನ್ಯವಾಗಿ ಒಂದು ತಿಂಗಳ ಮುಂಚಿತವಾಗಿ, ಕ್ರಿಸ್ತಜಯಂತಿಯ ಹಬ್ಬದ ಸಕಲ ಸಿದ್ಧತೆಗಳು ಪ್ರಾರಂಭವಾಗುತ್ತವೆ. [ಲಾರಾ ಇಂಗಲ್ಸ್ ವೈಲ್ಡರ್ ಮತ್ತು ಕ್ರಿಸ್ಮಸ್]

ಪೂರ್ವದೇಶದಿಂದ ಬಂದ ಮೂವರು ಜ್ಯೋತಿಷಿಗಳಿಗೆ ಬೆತ್ಲೆಹೇಮಿಗೆ ದಾರಿತೋರಿಸಿ, ಕ್ರಿಸ್ತನನ್ನು ದರ್ಶಿಸಲು ಅನುವು ಮಾಡಿಕೊಟ್ಟ ನಕ್ಷತ್ರದ ನೆನಪಿನಲ್ಲಿ ಈ ಪ್ರಕ್ರಿಯೆ ಇಂದಿಗೂ ಜೀವಂತವಿದೆ. ಮನೆಮನೆಯಲ್ಲಿ ತೋರಣಗಟ್ಟಿದ ಈ ನಕ್ಷತ್ರಗಳನ್ನು ಗುರುತಿಸುವ ಹಾಡುಗಾರರ ತಂಡಗಳು ಪ್ರತಿಮನೆಗೂ ತೆರಳಿ ಈ ವಿಶೇಷ ಸಂದರ್ಭಕ್ಕಾಗಿಯೇ ರಚಿಸಲಾದ ಹಾಡುಗಳನ್ನು ಹಾಡುತ್ತ ಸಂಭ್ರಮಿಸುತ್ತಾರೆ. ಕ್ರಿಸ್ತನನ್ನು ತೂಗಿಸುವ ಲಾಲಿ ಹಾಡುಗಳಿಗೆ ಇಲ್ಲಿ ಪ್ರಾಶಸ್ತ್ಯವಿದೆ.

"ಜೋ ಜೋ ಕ್ರಿಸ್ತ

ಜೋ ಜೋ ರಾಜ

ಜೋ ಜೋ ಕ್ರಿಸ್ತಾ....."

"ಮಲಗಯ್ಯಾ ಯೇಸು

ಮಲಗಯ್ಯಾ ಯೇಸು,

ಬಡವನಾ ಮಡಿಲಾಗ........"

"ಹುಟ್ಯಾನ ಕ್ರಿಸ್ತ ಗೋದಲಿಯಾಗ

ಬಂಗಾರ ಯಾಕ ತಂದೀರೋ ?

ಇದ್ದಾನ ಕ್ರಿಸ್ತ ತೊಟ್ಟಿಲ ಒಳಗಾ,

ಚಿನ್ನಾದ ಮನಸ ತನ್ನೀರೋ...."

ಗ್ರಾಮೀಣ ಭಾಗದಲ್ಲಿ ಹಾರ್ಮೋನಿಯಂ, ಖಂಜಿರ, ಮುಂತಾದ ಪಕ್ಕವಾದ್ಯಗಳೊಂದಿಗೆ ಹಾಡುತ್ತಾ ಹೊರಟರೆ, ನಗರ ಪ್ರದೇಶಗಳಲ್ಲಿ ಗಿಟಾರ್ ಹಿಡಿದು 'ಜಿಂಗಲ್ ಬೆಲ್ಸ್...... ಜಿಂಗಲ್ ಬೆಲ್ಸ್' ಹಾಡುವುದು ರೂಢಿ. ಇದನ್ನು ಕ್ರಿಸ್ಮಸ್ ಕ್ಯಾರಲ್ಸ್ ಎಂಬ ಹೆಸರಿನಿಂದ ಕರೆಯುತ್ತಾರೆ. [ಮನೆ ಬೆಳಗುವ ಅಲಂಕಾರಿಕ ಕ್ರಿಸ್ಮಸ್ ಟ್ರೀ]

ಎದೆ ಎದೆಗಳಲ್ಲಿ ಮೃದುಮಧುರ ತರಂಗಗಳನ್ನು ಹೊಮ್ಮಿಸುವ ವಾದ್ಯಗಳ ಸ್ಥಾನದಲ್ಲಿ, ಇದೀಗ ಎಲೆಕ್ಟ್ರಾನಿಕ್ ವಾದ್ಯಗಳ ಕರ್ಕಶ ಸದ್ದು ಬಂದು ಕುಳಿತಿರುವುದು ಸಾಂಸ್ಕೃತಿಕ ದುರಂತ!

ಯೇಸು ಕ್ರಿಸ್ತನ ಹುಟ್ಟು:ಕ್ರಿಸ್ತ ಹುಟ್ಟಿದ್ದು ಪ್ಯಾಲೆಸ್ತೇನ್ ದೇಶದ ಬೆತ್ಲೆಹೇಮಿನಲ್ಲಿ. ರೋಮಿನ ದೊರೆಯಾದ ಅಗಸ್ಟಿಸ್ ಸೀಸರನು, ಪ್ಯಾಲೆಸ್ತೇನಿನಲ್ಲಿರುವ ಪ್ರತಿಯೊಬ್ಬರು ತಮ್ಮ ತಮ್ಮ ಊರುಗಳಿಗೆ ಹೋಗಿ, ಜನಗಣತಿಯಲ್ಲಿ ತಮ್ಮ ಹೆಸರುಗಳನ್ನು ನೋದಾಯಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿದಾಗ ಜೋಸೇಫನು, ನಜರೇತಿನಿಂದ ಬೆತ್ಲೆಹೇಮಿಗೆ ತುಂಬುಗರ್ಭಿಣಿ ಮರಿಯಳನ್ನು ಕರೆದುಕೊಂಡು ಹೊರಡುತ್ತಾನೆ.

ನಜರೇತಿನಿಂದ ಬೆತ್ಲೆಹೇಮಿಗೆ ತೊಂಬತ್ತು ಮೈಲುಗಳಷ್ಟು ದೂರ. ಸುಮಾರು ಐದು ದಿನಗಳ ಪ್ರಯಾಣ. ದಿನತುಂಬಿದ ಮಡದಿ ಮರಿಯಳನ್ನು ಕತ್ತೆಯ ಮೇಲೆ ಕರೆದುಕೊಂಡು ಅನಿವಾರ್ಯವಾಗಿ ಹೊರಡಬೇಕಾಯಿತು. [ತೋಟದಲ್ಲಿ ಉದುರಿವೆ ಆಗಸದ ನಕ್ಷತ್ರಗಳು]

ಅವರಂತೆಯೇ ಜನಸಾಗರವೇ ಹೊರಟಿದ್ದುದರಿಂದ ಅವರಿಗೆ ತಂಗಲು ಸ್ಥಳವೇ ಸಿಗಲಿಲ್ಲ. ಬೆತ್ಲೆಹೇಮನ್ನು ತಲುಪುವಾಗ ರಾತ್ರಿಯಾಗಿತ್ತು. ಮರಿಯಳಿಗೆ ಪ್ರಸವ ಬೇನೆ ಕಾಣಿಸಿಕೊಂಡಿತು. ಯಾರ ಮನೆಯಲ್ಲಿಯೂ ಅವರಿಗೆ ಉಳಿದುಕೊಳ್ಳಲು ಅವಕಾಶ ಸಿಗದೇ ಹೋಯಿತು. ಬೇರೆ ಮಾರ್ಗ ತೋಚದೆ, ಜೋಸೇಫನು ಹತ್ತಿರದ ದನಗಳ ಗೋದಲಿಗೆ ಕರೆದೊಯ್ದನು. ಅಲ್ಲಿ ಏಸುವಿನ ಜನನವಾಯಿತು.

ದಸರೆಯ ಸನ್ನಿವೇಶ ನೆನಪಿಸುತ್ತದೆ:ಈ ಗೋದಲಿಯ ಪ್ರತಿರೂಪವನ್ನು, ಪ್ರತಿ ಚರ್ಚಿನಲ್ಲಿ ಹಾಗೂ ಎಲ್ಲಾ ಮನೆಗಳಲ್ಲಿ ಸೃಷ್ಠಿಸಿ, ಬಾಲಯೇಸು, ಜೋಸೇಫ, ಮರಿಯ, ದನಕುರಿಗಳು, ಮೊದಲು ನೋಡಿದ ಕುರಿಗಾಹಿಗಳು, ಜ್ಯೋತಿಷಿಗಳು ಮುಂತಾದವರನ್ನು ಹೋಲುವ ಗೊಂಬೆಗಳನ್ನು ಇಡುವ ಪರಿಪಾಠವಿದೆ. ಇದು ನನಗೆ ದಸರೆಯ ಸನ್ನಿವೇಶವನ್ನು ನೆನಪಿಗೆ ತರುತ್ತದೆ. ಗೋದಲಿಯ ಪಕ್ಕದಲ್ಲಿ ಶೃಂಗರಿಸಿದ ಕ್ರಿಸ್ಮಸ್ ಟ್ರೀ ಕಾಣಸಿಗುತ್ತವೆ.

ಸರಿಸುಮಾರು 15ನೇ ಶತಮಾನದಿಂದ ಇದೊಂದು ಧಾರ್ಮಿಕ ಆಚರಣೆಯಾಗಿ ಜರ್ಮನಿಯಲ್ಲಿ ಚಾಲ್ತಿಗೆ ಬಂತು. ಪೈನ್ ಮರದ ರೆಂಬೆಕೊಂಬೆಗಳನ್ನು ಕಡಿದು ತಂದು ಕ್ರಿಸ್ಮಸ್ ಸಂದರ್ಭದಲ್ಲಿ, ಮನೆಯ ಮುಂದೆ ಇಟ್ಟು, ಹಣ್ಣು ಕಾಯಿಗಳಿಂದ ಸಿಂಗಾರ ಮಾಡುತ್ತಿದ್ದರು. ಇದೇ ಮುಂದುವರಿದು ಈಗ ಎಲ್ಲಾ ಕ್ರೈಸ್ತರು ಗೋದಲಿಯ ಪಕ್ಕದಲ್ಲಿ ಕ್ರಿಸ್ಮಸ್ ಗಿಡವೊಂದನ್ನು ಇಡುತ್ತಾರೆ. ಹಣ್ಣು ಕಾಯಿಗಳ ಬದಲಿಗೆ ವರ್ಣರಂಜಿತ ಬೆಳಕಿನ ದೀಪಗಳನ್ನು ಬಳಸುವುದು ವಾಡಿಕೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Christmas traditions vary from country to country. Elements common to many nations include the installing and lighting of Christmas trees, the hanging of Advent wreaths, Christmas stockings, candy canes, and the creation of Nativity scenes depicting the birth of Jesus Christ. Here is look at cultural and traditional rituals carried out during the X Mas eve.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more