ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕೀಲೆ ಚಿತ್ರಲೇಖಾ ಕೊಲೆ ಪ್ರಕರಣ: ದೇವರಾಜ್ ಅರಸ್ ಪುತ್ರಿಗೆ ರಿಲೀಫ್

By Mahesh
|
Google Oneindia Kannada News

ಬೆಂಗಳೂರು, ಡಿ.17: ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ಅವರ ಮಗಳು ಹಾಗೂ ಜೆಡಿಎಸ್ ನ ಮಾಜಿ ಲೀಡರ್ ಭಾರತಿ ಅರಸು ಅವರಿಗೆ ಚಿತ್ರಲೇಖಾ ಕೊಲೆ ಪ್ರಕರಣದಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ಭಾರತಿ ಅರಸ್ ಸೇರಿದಂತೆ ಮೂವರನ್ನು ದೋಷಮುಕ್ತಗೊಳಿಸಿ ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ವಕೀಲೆ ಚಿತ್ರಲೇಖಾ ಕೊಲೆ ಪ್ರಕರಣದಲ್ಲಿ ದೇವರಾಜ ಅರಸ್ ಅವರ ಪುತ್ರಿ ಭಾರತಿ ಅರಸ್,ಸ ಹವರ್ತಿ ಎಲ್.ಎನ್.ಚಂದ್ರಕಾಂತ ಮತ್ತು ಟಿ.ಮಧುಕರ ಅವರು ಆರೋಪಿಗಳಾಗಿದ್ದರು. ಆದರೆ, 2010ರ ಮೇ 27ರಂದು ಕೆಳಹಂತದ ನ್ಯಾಯಲಯ ಎಲ್ಲಾ ಆರೋಪಿಗಳನ್ನು ದೋಷಮುಕ್ತ ಗೊಳಿಸಿ ತೀರ್ಪು ನೀಡಿತ್ತು.

ಒಂದನೇ ತ್ವರಿತ ವಿಲೇವಾರಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಚಿತ್ರಲೇಖಾ ಅವರ ತಾಯಿ ಶಾರದಾ ಅರಸು ಹಾಗೂ ರಾಜ್ಯ ಸರಕಾರದ ಪರವಾಗಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಬಿಳ್ಳಪ್ಪ ಹಾಗೂ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ವಿಭಾಗೀಯ ಪೀಠ, ಕೆಳಹಂತದ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು, ಹೈಕೋರ್ಟ್ ಈ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠವು 145 ಪುಟಗಳ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಭಾರತಿ ಅರಸು ದೂರದ ಸಂಬಂಧಿ ಚಿತ್ರಲೇಖಾ

ಭಾರತಿ ಅರಸು ದೂರದ ಸಂಬಂಧಿ ಚಿತ್ರಲೇಖಾ

ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎಂ.ಪಿ.ಚಂದ್ರಕಾಂತ ರಾಜೇ ಅರಸು ಅವರ ಪುತ್ರಿ ಚಿತ್ರಲೇಖಾ ಅವರು ಭಾರತಿ ಅರಸು ಅವರಿಗೆ ದೂರದ ಸಂಬಂಧಿಯೂ ಹೌದು. ಭಾರತಿ ಅರಸು ಅವರನ್ನು 2004ರ ಜನವರಿ 9ರಂದು ನಗರದ ಅರಮನೆ ರಸ್ತೆಯಲ್ಲಿರುವ ಹರಿಖೋಡೆ ಪಾಮ್ ಗ್ರೋವ್ ಅತಿಥಿ ಗೃಹಕ್ಕೆ ಕರೆಸಿಕೊಳ್ಳಲಾಗಿತ್ತು. ಚಿತ್ರದಲ್ಲಿ ವಕೀಲೆ ಚಿತ್ರಲೇಖಾ.

ನಿಗೂಢವಾಗಿ ನಾಪತ್ತೆ, ಶವವಾಗಿ ಪತ್ತೆಯಾದ ಚಿತ್ರಲೇಖಾ

ನಿಗೂಢವಾಗಿ ನಾಪತ್ತೆ, ಶವವಾಗಿ ಪತ್ತೆಯಾದ ಚಿತ್ರಲೇಖಾ

2004ರ ಜನವರಿ 9ರಂದೇ ಸಂಜೆ 6.50ರಿಂದ 7 ಗಂಟೆಯ ನಡುವಿನ ಅವಧಿಯಲ್ಲಿ ಪಾಮ್ ಗ್ರೋವ್ ಅತಿಥಿ ಗೃಹದಿಂದ ಕಾಣೆಯಾಗಿದ್ದರು. ಎರಡು ತಿಂಗಳ ನಂತರ ಮಾರ್ಚ್ 19ರಂದು ಚಿಕ್ಕಮಗಳೂರು ಗಡಿಯಲ್ಲಿರುವ ಶಿರಾಡಿ ಘಾಟ್ ಕಣಿವೆಯಲ್ಲಿ ಅವರ ಶವ ಪತ್ತೆಯಾಗಿತ್ತು.ಭಾರತಿ ಅರಸು ಮತ್ತು ಚಿತ್ರಲೇಖಾ ಮಧ್ಯೆ ಹಣಕಾಸು ವ್ಯವಹಾರ ಇತ್ತು.

ಭಾರತಿ ಅರಸು ಹಾಗೂ ಸಹಚರರ ಬಂಧನ

ಭಾರತಿ ಅರಸು ಹಾಗೂ ಸಹಚರರ ಬಂಧನ

ಭಾರತಿ ಅರಸು ಅವರ ಸಹಾಯಕರಾದ ಚಂದ್ರಕಾಂತ ಮತ್ತು ಮಧುಕರ ಚಿತ್ರಲೇಖಾ ಅವರನ್ನು ಕಾರಿನಲ್ಲಿ ಕರೆದೊಯ್ದು ಕೊಲೆ ಮಾಡಿದ್ದರು ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ಅರಸ್ ಸೇರಿದಂತೆ ಇತರೆ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಕೆಳಹಂತದ ನ್ಯಾಯಾಲಯದ ತೀರ್ಪಿನ ಬಳಿಕ ಬಿಡುಗಡೆ ಭಾಗ್ಯ ಪಡೆದುಕೊಂಡಿದ್ದರು.

ಗೆಳತಿ ನಾಟಕಗಾರ್ತಿ ಅರುಧಂತಿ ನಾಗ್ ವಿಷಾದ

ಗೆಳತಿ ನಾಟಕಗಾರ್ತಿ ಅರುಧಂತಿ ನಾಗ್ ವಿಷಾದ

ಚಿತ್ರಲೇಖಾ ಮನೆಗೆ ನಾನು ಶಂಕರ್‌ನಾಗ್ ಹೋಗಿಬರುತ್ತಿದ್ದೆವು. ಆ ದಿನ ಅವಳು ಕಾಣೆಯಾದ ಸುದ್ದಿ ಕೇಳಿ ದಿಕ್ಕು ತೋಚದಂತಾಗಿತ್ತು. ನಂತರ ಸಕಲೇಶಪುರ ಘಾಟ್‌ನಲ್ಲಿ ಅವಳ ಶವ ಸಿಕ್ಕಿದಾಗ ದಿಗ್ಭ್ರಮೆಗೊಂಡಿದ್ದೆ ಎಂದು ನೆನಪಿಸಿಕೊಂಡರು. ಈಗ ತೀರ್ಪು ಗಮನಿಸಿದ ಮೇಲೆ ನ್ಯಾಯ ಎಲ್ಲಿದೆ ಎನ್ನುವಂತಾಗಿದೆ ಎಂದಿದ್ದಾರೆ.

ಜಸ್ಟೀಸ್ ಸಾಲ್ಡಾನಾ ಖೇದ

ಜಸ್ಟೀಸ್ ಸಾಲ್ಡಾನಾ ಖೇದ

ಚಿತ್ರಲೇಖಾ ಕೊಲೆ ಕುರಿತ ಪರಿಸ್ಥಿತಿಯ ಸಂದರ್ಭದಲ್ಲಿದ್ದ ಸಾಕ್ಷ್ಯಗಳನ್ನು ಪರಿಗಣಿಸದೆ ಭಾರತಿ ಅರಸ್ ಅವರನ್ನು ಬಿಡುಗಡೆ ಮಾಡಿರುವ ಕೆಳ ಹಂತದ ನ್ಯಾಯಾಲಯದ ಧೋರಣೆಗೆ ಜಸ್ಟೀಸ್ ಸಾಲ್ಡಾನಾ ಖೇದ ವ್ಯಕ್ತಪಡಿಸಿದ್ದಾರೆ. ಈ ರೀತಿಯ ತೀರ್ಪಿನಿಂದ ಜನರು ನ್ಯಾಯಾಲಯದ ಬಗೆಗಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದು ಸಾಲ್ಡಾನಾ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Chitralekha Murder Case: The Karnataka High Court upheld the trial court’s May 27, 2010, verdict of acquitting Bharathi Urs, daughter of the former Chief Minister, D. Devaraja Urs, and two others from the charges of murdering Chitralekha Urs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X