ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಡಿಗೆರೆ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಆಲೆಖಾನ್ ಹೊರಟ್ಟಿ ಎಂಬ ಪುಟ್ಟ ಹಳ್ಳಿಯ ವಿದ್ಯಾರ್ಥಿನಿ ನಮನ, ಪ್ರಧಾನಿ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಹೊಸ ಸಂಚಲನ ಮೂಡಿಸಿದೆ.

By Mahesh
|
Google Oneindia Kannada News

ಚಿಕ್ಕಮಗಳೂರು, ಡಿ.20: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಆಲೆಖಾನ್ ಹೊರಟ್ಟಿ ಎಂಬ ಪುಟ್ಟ ಹಳ್ಳಿಯ ವಿದ್ಯಾರ್ಥಿನಿ ನಮನ, ಪ್ರಧಾನಿ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಹೊಸ ಸಂಚಲನ ಮೂಡಿಸಿದೆ. ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಮನವಿ ಸಲ್ಲಿಸಿದ ನಮನಳಿಗೆ ಪ್ರಧಾನಿ ಮೋದಿ ಅವರ ಸಚಿವಾಲಯ ಸ್ಪಂದಿಸಿದೆ.

ಆಲೆಖಾನ್ ಹೊರಟ್ಟಿ ಗ್ರಾಮದ ಗೋಪಾಲ್‌ಗೌಡ ಮತ್ತು ಪವಿತ್ರ ದಂಪತಿಯ ಪುತ್ರಿ ನಮನ ಜಿ. ಬಿದರಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ 10ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಾರ್ಮಾಡಿ ಘಾಟ್ ಗೆ ಹೊಂದಿಕೊಂಡಂತೆ ಇರುವ ಈ ಗ್ರಾಮಕ್ಕೆ ಹೆದ್ದಾರಿಯಿಂದ ಐದಾರು ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಬೇಕು.

ಈ ಗ್ರಾಮದಲ್ಲಿ ರಸ್ತೆ. ಅಂಗನವಾಡಿ ಕೇಂದ್ರ, ಕುಡಿಯುವ ನೀರು ಸರಬರಾಜು, ಆರೋಗ್ಯ ಕೇಂದ್ರ, ದೂರವಾಣಿ, ಮೊಬೈಲ್ ಸಂಪರ್ಕ, ವಿದ್ಯುತ್, ವಾಹನ ಸಂಪರ್ಕ(ಎಸ್ಟೇಟ್ ವಾಹನಗಳನ್ನು ಬಿಟ್ಟು) ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ಈ ಕೊರತೆಯನ್ನು ನೀಗಿಸುವಂತೆ ಪ್ರಧಾನಿ ಸಚಿವಾಲಯಕ್ಕೆ ನಮನ ಪತ್ರ ಬರೆದಿದ್ದರು.

Chikkamgaluru Mudigere Student’s plea draws PM Modi’s attention

ವಿದ್ಯಾರ್ಥಿನಿಯ ಈ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿಗೆ ಪತ್ರ ಬರೆದು ತಕ್ಷಣ ಈ ಬಗ್ಗೆ ವರದಿ ನೀಡುವಂತೆ ಆದೇಶಿಸಿದ್ದಾರೆ. ಮೂಡಿಗೆರೆ ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ ಮತ್ತು ಜಾವಳಿ ಗ್ರಾಪಂ ಪಿಡಿಒ ಜೇಕುಂರನ್ನು ಕರೆಸಿ ಹಳ್ಳಿಯ ದಯನೀಯ ಪರಿಸ್ಥಿತಿಯ ಬಗ್ಗೆ ಸೋಮವಾರ ಚರ್ಚೆ ನಡೆಸಿದ್ದಾರೆ.

ವಿದ್ಯಾರ್ಥಿನಿ ನಮನ ಬರೆದ ಪತ್ರದ ಪ್ರತಿ ಇಲ್ಲಿದೆ

ಗೆ,
ನರೇಂದ್ರ ಮೋದಿಜೀ
ಪ್ರಧಾನ ಮಂತ್ರಿಗಳು
ಭಾರತ ಸರ್ಕಾರ,

ಪ್ರೀತಿಯ ಪ್ರಧಾನ ಮಂತ್ರಿಗಳಿಗೆ, ನನ್ನ ಹೆಸರು ನಮನ, ನಾನು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲೇಖಾನ್ ಹೊರಟ್ಟಿಯ ಗೋಪಾಲಗೌಡ ಎಂಬುವರ ಮಗಳು.. ನಾನು ನನ್ನ ಊರಿನಿಂದ ದಿನನಿತ್ಯ ಹೋಗಿ ಬರಲು ಸಾಧ್ಯವಿಲ್ಲದ ಕಾರಣ ಸುಮಾರು 30 ಕಿಮೀ ದೂರ ಇರುವ ಬಿದರಹಳ್ಳಿ ಎಂಬ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ..

ನೀವು ದೇಶದ ಪ್ರಧಾನಿ ಆದ ಬಳಿಕ ಸ್ವಚ್ಛ ಭಾರತ್, ಗ್ರಾಮೀಣ ಅಭಿವೃದ್ಧಿ, ಭ್ರಷ್ಟಚಾರ ನಿರ್ಮೂಲನೆ ಸೇರಿದಂತೆ ಇನ್ನಿತರ ಯೋಜನೆಗಳನ್ನ ಜಾರಿಗೆ ತಂದು ದೇಶದಲ್ಲಿ ಸಂಚಲನ ಮೂಡಿಸಿದ್ದಾರೆ. ದಿನಪತ್ರಿಕೆಗಳಲ್ಲಿ, ಟಿವಿಗಳಲ್ಲಿ ನಿಮ್ಮ ಕೆಲಸದ ಬಗ್ಗೆ ಬಂದ ವರದಿಗಳನ್ನ ನೋಡಿ ನಾನು ತುಂಬಾ ಪ್ರಭಾವಿತಳಾಗಿದ್ದೇನೆ..

Chikkamgaluru Mudigere Student’s plea draws PM Modi’s attention

ಈ ಹಿನ್ನೆಲೆಯಲ್ಲೇ ನಾನು ನನ್ನ ಊರು ಕೂಡ ಮಾದರಿ ಗ್ರಾಮ ಆಗಬಹುದಾ ಅನ್ನೋ ನಿರೀಕ್ಷೆ ಇಟ್ಟುಕೊಂಡು ಈ ಪತ್ರವನ್ನ ಬರೆಯುತ್ತಿದ್ದೇನೆ.. ನನ್ನೂರು ಅಲೇಖಾನ್ ಹೊರಟ್ಟಿ, ಚಿಕ್ಕಮಗಳೂರು ಜಿಲ್ಲೆಯ ಗಡಿಗ್ರಾಮವಾಗಿದ್ದು, ಪಶ್ಚಿಮಘಟ್ಟದ ತಪ್ಪಲು ಚಾರ್ಮಾಡಿ ಘಾಟ್ ಅನ್ನೋ ಪ್ರದೇಶದಲ್ಲಿ ಬರುತ್ತದೆ.. ಪ್ರಾಕೃತಿಕವಾಗಿ ನನ್ನೂರು ಸುಂದರವಾಗಿದೆ,

ಆದರೆ ಯಾವುದೇ ಅಭಿವೃದ್ಧಿ ಕಾಣದೇ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದೆ.. ಸಾರಿಗೆ ಸಮಸ್ಯೆ ಇದ್ದು, ಕೊಟ್ಟಿಗೆಹಾರದಿಂದ ಹೊರಡುವ ಬಸ್ಗಳು ಅಲ್ಲಿ ನಿಲುಗಡೆ ಇಲ್ಲ.. ಕೊಟ್ಟಿಗೆಹಾರದಿಂದ ಆಟೋಗೆ 300ರೂ ಹೆಚ್ಚು ಕೊಟ್ಟು ನಮ್ಮ ಊರು ತಲುಪಬೇಕು.. ಹೇಗಾದ್ರೂ ಮಾಡಿ ಯಾವುದಾದ್ರೂ ವಾಹನ ಹತ್ತಿ ನಮ್ಮ ಊರಿನ ಸ್ಟಾಪ್ನಲ್ಲಿ ಇಳಿದ್ರೂ ಕೂಡ ನನ್ನ ಊರಿಗೆ ಮುಖ್ಯ ರಸ್ತೆಯಿಂದ 5 ಕೀಲೋ ಮೀಟರ್ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕು.. ಸಮರ್ಪಕವಾದ ರಸ್ತೆ ಕನಸಿನ ಮಾತಾಗಿದೆ..

ಊರಲ್ಲಿ ಪ್ರಾಥಮಿಕ ಶಾಲೆ ಇಲ್ಲ, ಹಾಗಾಗೀ ಮಕ್ಕಳು ಅನಿವಾರ್ಯವಾಗಿ ಚಿಕ್ಕವಯಸ್ಸಿನಲ್ಲೇ ಹೆತ್ತವರ ಪ್ರೀತಿಯನ್ನ ತೊರೆದು ಶಿಕ್ಷಣಕ್ಕಾಗಿ ಊರ ಬಿಡಬೇಕಾದ ಪರಿಸ್ಥಿತಿ ಇದೆ.. ನೀವು ಡಿಜಿಟಲ್ ಇಂಡಿಯಾ ಅಂತೀರಿ, ಆದ್ರೆ ನಮ್ಮ ಊರಲ್ಲಿ ಮೊಬೈಲ್ ನೆಟ್ವರ್ಕ್ ಸಿಗೋದೇ ಇಲ್ಲ..

ಕಾಡಿನಂಚಿನಲ್ಲಿರುವ ಗ್ರಾಮ ಆಗಿರುವುದರಿಂದ ಕಾಡು ಪ್ರಾಣಿಗಳ ಭೀತಿಯಿಂದ ಜೀವನ ಸಾಗಿಸುತ್ತಿದ್ದೇವೆ.. ಯಾರಿಗಾದ್ರೂ ಆರೋಗ್ಯ ಸಮಸ್ಯೆ ಆದ್ರೆ ಅವರನ್ನ ಆಸ್ಪತ್ರೆಗೆ ಕರೆತರಲು ಹರಸಾಹಸ ಪಡಬೇಕು.. ಹೀಗೆ ಹತ್ತು ಹಲವಾರು ಸಮಸ್ಯೆಗಳ ಅಗರ ನನ್ನ ಊರಲ್ಲಿ ಇದೆ.. ದಯವಿಟ್ಟು ತಾವು ಮನಸ್ಸು ಮಾಡಿ ನನ್ನ ಊರನ್ನೂ ಕೂಡ ಮಾದರಿ ಗ್ರಾಮವಾಗಿ ಮಾಡುತ್ತೀರ ಅಂತಾ ಆಶಿಸುತ್ತೇನೆ.. ನಿಮ್ಮಿಂದ ಉತ್ತರದ ನಿರೀಕ್ಷೆಯಲ್ಲಿಯೂ ಇದ್ದೀನಿ ಸರ್......

ಇಂತಿ ನಿಮ್ಮ ಪ್ರೀತಿಯ
ನಮನ
10ನೇ ತರಗತಿ, ಮೊರಾರ್ಜಿ ದೇಸಾಯಿ ಶಾಲೆ, ಬಿದರಹಳ್ಳಿ

English summary
Namana -a class 10 student of a residential school in Mudigere taluk has drawn Prime Minister Narendra Modi’s attention to the lack of basic amenities in her native village, Alekhan Horatti, in the Mudigere taluk, Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X