ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಿಭಜಿತ ಕೋಲಾರ ಜಿಲ್ಲೆ ದಶಕದ ಕನಸು ನನಸು

By Mahesh
|
Google Oneindia Kannada News

ಚಿಕ್ಕಬಳ್ಳಾಪುರ, ನ.8: ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಜನರ ದಶಕದ ಕನಸು ನನಸಾಗಿದೆ. ಅತಿ ಕಡಿಮೆ ವೆಚ್ಚದಲ್ಲಿ ಆರಾಮದಾಯಕ ಪ್ರಯಾಣ ಮಾಡಬಹುದೆಂದು ಉತ್ಸಾಹ ಎಲ್ಲರಲ್ಲೂ ಮನೆ ಮಾಡಿದೆ. ಚಿಕ್ಕಬಳ್ಳಾಪುರ-ಕೋಲಾರ ನಡುವಿನ ಬ್ರಾಡ್ ಗೇಜ್ ಮೇಲೆ ರೈಲ್ವೆ ಸಂಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹಸಿರು ನಿಶಾನೆ ನೀಡಿದ್ದಾರೆ.

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮುಖಾಂತರ ಕೋಲಾರಕ್ಕೆ ರೈಲು ಸಂಚಾರ ದೊರೆತರೆ ರೈತರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ಜನರಿಗೆ ಅತಿ ಹೆಚ್ಚು ಅನುಕೂಲವಾಗುತ್ತದೆ ಎಂಬ ಒಕ್ಕೊರಲಿನ ಬೇಡಿಕೆ 11996 ರಿಂದಲೇ ಬಂದಿತ್ತು.

ರಾಜ್ಯರಸ್ತೆ ಸಾರಿಗೆ ಪ್ರಯಾಣ ದರ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿರುವುದರಿಂದ ಬಡಜನ ಕಂಗೆಟ್ಟು ರೈಲು ಸೌಕರ್ಯಕ್ಕೆ ಮತ್ತಷ್ಟು ಒತ್ತಾಯ ಹೆಚ್ಚಾಯಿತು.

ಉಪನಗರ: ಬೆಂಗಳೂರು ನಗರದ ಜನಜೀವನ ಒತ್ತಡವನ್ನು ಕಡಿಮೆ ಮಾಡಲು ಚಿಕ್ಕಬಳ್ಳಾಪುರ ಬಳಿ ಉಪನಗರ ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ 169 ಆಶ್ವಾಸನೆ ಪೈಕಿ 60 ಭರವಸೆಗಳನ್ನು ಈಡೇರಿಸಿದೆ. ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಇನ್ನೂ 10 ಸಾವಿರ ಕೋಟಿ ರು ನಿಧಿ ಎತ್ತಿಡಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ಸಂಸದ ಕೆ.ಎಚ್.ಮುನಿಯಪ್ಪ ಅವರು ಕೇಂದ್ರ ರೈಲ್ವೆ ಸಹಾಯಕ ಸಚಿವರಾದಾಗ ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ರೈಲು ಸಂಚಾರ ವಿಸ್ತರಿಸಲು ಮನಸ್ಸು ಮಾಡಿದರು. ಇದೀಗ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಸಚಿವರಾಗಿದ್ದು, ಎರಡೂ ಜಿಲ್ಲೆಗಳ ಜನರ ಕನಸು ಕಡೆಗೂ ನನಸಾಗುವಂತಾಗಿದೆ.

Chikkaballapur Kolar Railway Services Inaugurated By CM Siddaramaiah

ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳೆರಡ ರಲ್ಲೂ ತರಕಾರಿ ಪ್ರಮುಖ ಬೆಳೆ. ತಾವು ಬೆಳೆದ ಬೆಳೆಯನ್ನು ಬೇರೆಡೆಗೆ ರೈತರು ಇನ್ನು ನೆಮ್ಮದಿಯಿಂದ ರೈಲಿನಲ್ಲೇ ಸಾಗಿಸಬಹುದಲ್ಲ ಎಂಬ ಸಂತಸದಲ್ಲಿದ್ದಾರೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಸಣ್ಣ ಪುಟ್ಟ ಗ್ರಾಮಗಳಿಂದ ಮೈಲಿಗಟ್ಟಲೆ ನಡೆದು ಬಸ್ ಹಿಡಿದು, ಚಾಲಕ-ನಿರ್ವಾಹಕರಿಂದ ಬೈಸಿಕೊಂಡು ಪ್ರಯಾಣಿಸಬೇಕಾಗಿತ್ತು.

ರೈಲಿನ ಸೌಲಭ್ಯ ದೊರೆಯುವುದರಿಂದ ಅವರಿಗೂ ನೆಮ್ಮದಿ. ಇನ್ನು ಚಿಕ್ಕಬಳ್ಳಾಪುರದಿಂದ ಕೋಲಾರ ಮಾರ್ಗದಲ್ಲಿ ಬರುವ ಬಹಳಷ್ಟು ತಾಲೂಕುಗಳ ಸಣ್ಣ-ಪುಟ್ಟ ಗ್ರಾಮಗಳ ಮುಖಾಂತರವು ರೈಲು ಹಾದು ಹೋಗುವುದರಿಂದ ಎಲ್ಲ ಜನರೂ ಕೂಡ ಸಂಭ್ರಮಗೊಂಡಿದ್ದಾರೆ.

ಜಿಲ್ಲೆ ರೈಲಿನ ಕಥೆ: 1915-1920 ರ ಸುಮಾರಿನಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾ ಪುರಕ್ಕೆ ಪ್ರಪ್ರಥಮವಾಗಿ ನ್ಯಾರೋಗೇಜ್ ಪ್ರಾರಂಭವಾಗಿತ್ತು. 1975ರವರೆಗೂ ಚಿಕ್ಕಬಳ್ಳಾಪುರದ ಜನರು ನೆಮ್ಮದಿಯಿಂದ ಪ್ರಯಾಣಿಸುತ್ತಿದ್ದರು.

ಆದರೆ ನ್ಯಾರೋಗೇಜ್ ಬದಲು ಬ್ರಾಡ್‌ಗೇಜ್ ಮಾಡುವುದಾಗಿ ಹೇಳಿ ರೈಲು ಸೌಕರ್ಯವನ್ನು ಬಂದ್ ಮಾಡಲಾಗಿತ್ತು. ಹಾಗಾಗಿ ಜನ ಮತ್ತೆ ಪ್ರಯಾಣಕ್ಕಾಗಿ ಪ್ರಯಾಸಪಡುತ್ತಿದ್ದರು.ಅಂದಿನ ರೈಲ್ವೆ ಮಂತ್ರಿ ಸಿ.ಕೆ.ಜಾಫರ್ ಶರೀಫ್ ಅವರ ಪ್ರಯತ್ನದಿಂದಾಗಿ 1996ರಲ್ಲಿ ಬ್ರಾಡ್ ಗೇಜ್ ಆಗಿ ಪರಿವರ್ತನೆಗೊಂಡು ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಮತ್ತೆ ರೈಲು ಸಂಚಾರ ಪ್ರಾರಂಭವಾಯಿತು.

ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ 48 ಕಿ.ಮೀ. ರೈಲ್ವೆ ಮಾರ್ಗ ಇದ್ದುದನ್ನು ಕೋಲಾರಕ್ಕೆ ವಿಸ್ತರಿಸಿ 133ಕಿ.ಮೀ. ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ 85 ಕಿ.ಮೀ. ರೈಲ್ವೆ ಬ್ರಾಡ್ ಗೇಜ್ ಕಾಮಗಾರಿಯನ್ನು 452 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದ್ದು, ಇಂದು ಚಿಕ್ಕಬಳ್ಳಾಪುರದಲ್ಲಿ ಉದ್ಘಾಟನೆಗೊಂಡಿದೆ.

ಚಿಕ್ಕಬಳ್ಳಾಪುರ ನಿಲ್ದಾಣದ ನಂತರ ಶಿಡ್ಲಘಟ್ಟ ಹಾಗೂ ಚಿಂತಾಮಣಿಯಲ್ಲೂ ನೂತನ ನಿಲ್ದಾಣಗಳನ್ನು ಮಾಡಲಾಗಿದೆ ಹಾಗೂ ಹತ್ತು ಕಡೆ ರೈಲನ್ನು ನಿಲುಗಡೆ ಮಾಡಲಾಗುತ್ತದೆ.

English summary
The new railway line between Chikkaballapur and Kolar Inaugurated By CM Siddaramaiah today (Nov.8). CM Siddaramaiah in his speech announced Congress government having a proposal about formation of a new Satellite town near Chikkaballapur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X