ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣ್ಣಿನ ಮೊಮ್ಮಗ ಕುಮಾರಸ್ವಾಮಿ ವ್ಯಕ್ತಿಚಿತ್ರ

By Mahesh
|
Google Oneindia Kannada News

ಬೆಂಗಳೂರು, ಏ.1: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಮೂರನೇ ಪುತ್ರ. ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ಎಚ್ ಡಿ ಕುಮಾರಸ್ವಾಮಿ ಅವರು ಲೋಕಸಭೆಗೆ ಸ್ಪರ್ಧಿಸುವ ಮೂಲಕ ಕಣಕ್ಕೆ ರಂಗು ತುಂಬಿದ್ದಾರೆ. ಕೊನೆ ಕ್ಷಣದಲ್ಲಿ ತಮ್ಮ ಕ್ಷೇತ್ರ ಬದಲಾಯಿಸಿರುವ ಕುಮಾರಸ್ವಾಮಿ ಅವರು ರಾಮನಗರದಿಂದ ಚಿಕ್ಕಬಳ್ಳಾಪುರಕ್ಕೆ ಬಂದು ನಾನು ನಿಮ್ಮೂರಿನ ಅಳಿಯ ನನಗೆ ಮತ ನೀಡಿ ಎಂದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ಸಿನಿಂದ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ಬಿಜೆಪಿಯಿಂದ ಮಾಜಿ ಸಚಿವ ಬಿ.ಎನ್ ಬಚ್ಚೇಗೌಡ, ಎಎಪಿಯಿಂದ ಮಾಜಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ ಅರ್ಕೇಶ್ ಸ್ಪರ್ಧೆಯಲ್ಲಿರುವ ಇತರೆ ಅಭ್ಯರ್ಥಿಗಳಾಗಿದ್ದಾರೆ.

ರಾಮನಗರ ಕ್ಷೇತ್ರದ ಶಾಸಕರಾಗಿರುವ ಕುಮಾರಸ್ವಾಮಿ ಅವರು ಚಿಂತಾಮಣಿ ತಾಲೂಕಿನವರಾದ ಪತ್ನಿ ಅನಿತಾ ಕುಮಾರಸ್ವಾಮಿ ಅವರ ನಾಮ ಬಲ, ಜಿಲ್ಲೆಯಲ್ಲಿರುವ ಎರಡೂ ಮುಕ್ಕಾಲು ಲಕ್ಷ ಒಕ್ಕಲಿಗರ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಚಿತ್ರ ನಿರ್ಮಾಣ ಮಾಡಿಕೊಂಡಿದ್ದ ಕುಮಾರಸ್ವಾಮಿ ಅವರು ಅನುಭವವಿಲ್ಲದ ಕಾಲದಲ್ಲೇ ರಾಜಕೀಯ ಪ್ರವೇಶಿಸಿ ಹಲವು ಪ್ರಥಮಗಳಿಗೆ ನಾಂದಿ ಹಾಡಿದವರು.. ಈಗ ತಂತ್ರಗಾರಿಕೆಯಲ್ಲಿ ನಿಷ್ಣಾತರಾಗಿರುವ ಕುಮಾರಸ್ವಾಮಿ ಅವರ ರಾಜಕೀಯ ಪಯಣ ಪರಿಚಯ ಇಲ್ಲಿದೆ...

1996ರಲ್ಲೇ ಲೋಕಸಭೆಗೆ ಆಯ್ಕೆಯಾಗಿದ್ದ ಎಚ್ಡಿಕೆ

1996ರಲ್ಲೇ ಲೋಕಸಭೆಗೆ ಆಯ್ಕೆಯಾಗಿದ್ದ ಎಚ್ಡಿಕೆ

* ರಾಜಕೀಯ ಅನುಭವವಿಲ್ಲದಿದ್ದರೂ 1996ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
* 1998ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು 1999ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು
* 2004ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.
* ಫೆಬ್ರವರಿ 2006 ರಿಂದ ಅಕ್ಟೋಬರ್ 2007ರ ತನಕ ಮುಖ್ಯಮಂತ್ರಿಯಾಗಿ ಅಧಿಕಾರ. ಬಿಜೆಪಿ ಜತೆ 20-20 ಸರ್ಕಾರ ಸ್ಥಾಪನೆ

ಕುಟುಂಬ ವರ್ಗ ಪರಿಚಯ ಕ್ವಿಕ್ ಲುಕ್

ಕುಟುಂಬ ವರ್ಗ ಪರಿಚಯ ಕ್ವಿಕ್ ಲುಕ್

* 16 ಡಿಸೆಂಬರ್ 1959ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನನ
* ರಾಮನಗರ ಇವರ ರಾಜಕೀಯ ಕಾರ್ಯಕ್ಷೇತ್ರ
* ಬಿಎಸ್ಸಿ ಪದವೀಧರ
* ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್
* ಎಚ್ ಡಿ ಬಾಲಕೃಷ್ಣ, ಎಚ್ ಡಿ ರೇವಣ್ಣ ಇಬ್ಬರು ಅಣ್ಣಂದಿರು. ಎಚ್ ಡಿ ರಮೇಶ್ ತಮ್ಮ, ಇಬ್ಬರು ಸೋದರಿಯರು.

ಎಚ್ಡಿಕೆ ಸಾಧನೆಗಳು ಯೋಜನೆಗಳು-1

ಎಚ್ಡಿಕೆ ಸಾಧನೆಗಳು ಯೋಜನೆಗಳು-1

* ಸಾರಾಯಿ ನಿಷೇಧ, ಲಾಟರಿ ನಿಷೇಧ,6 ಜಿಲ್ಲೆಗಳಿಗೆ 2689.64 ಕೋಟಿ ಪ್ಯಾಕೇಜ್ ನೀಡಿಕೆ
* ಉದ್ಯಾನಗಳ ನಿರ್ವಹಣೆಗಾಗಿ ವಸುವರ್ಣ ಕರ್ನಾಟಕ ಉದ್ಯಾನಗಳ ಪ್ರತಿಷ್ಠಾನ ಸ್ಥಾಪನೆ.
* ಮೀನುಗಾರಿಕೆ ವೃತ್ತಿ ಮಾಡುವ ಮಹಿಳೆಯರಿಗೆ ಶೇ 4 ರಷ್ಟು ಬಡ್ಡಿದರದಲ್ಲಿ ಸಾಲ ನೀಡಿಕೆ
* ಸುವರ್ಣ ಕಾಯಕ ಉದ್ಯೋಗ ಶಿಕ್ಷಣ ಯೋಜನೆಯಿಂದ ಯುವಕರಿಗೆ ಕೌಶಲ್ಯ ಅಭಿವೃದ್ಧಿ
* ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ.
* ರೈತರಿಗೆ ಒಟ್ಟಾರೆ 7000 ಕೋಟಿ ರು ಪ್ಯಾಕೇಜ್ ದೊರೆಯುವಂತೆ ಮಾಡಿದ್ದು ದೊಡ್ದ ಸಾಧನೆ

ಎಚ್ಡಿಕೆ ಸಾಧನೆಗಳು ಯೋಜನೆಗಳು-2

ಎಚ್ಡಿಕೆ ಸಾಧನೆಗಳು ಯೋಜನೆಗಳು-2

* ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯ, ಜನತಾ ದರ್ಶನ ಆರಂಭಿಸಿದರು. ಶೇ 70 ರಷ್ಟು ಅರ್ಜಿಗಳನ್ನು ಸ್ವೀಕರಿಸಿ 25 ಕೋಟಿ ರು ನೇರವಾಗಿ ನೀಡಿದ್ದರು.
* ಸುವರ್ಣ ಗ್ರಾಮೋದಯ ಯೋಜನೆ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ
* ಕೋಲಾರ, ಬಿಜಾಪುರಕ್ಕೆ ಕುಡಿಯುವ ನೀರು ಪೂರೈಕೆಗೆ ಯೋಜನೆ ಘೋಷಣೆ.
*ಲ್ಯಾಂಡ್ ಮಾಫಿಯಾ ತಡೆಗೆ ಸೂಕ್ತ ಕ್ರಮ 40 ಸಾವಿರ ಎಕರೆ ಭೂಮಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
* ಕೈಗಾರಿಕೆ ಇತ್ತು ನೀಡಲು ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಾಗಿದ್ದು ಎಚ್ಡಿಕೆ ಕಾಲದಲ್ಲೇ.
* ಉತ್ತರ ಕರ್ನಾಟಕದಲ್ಲಿ ವಿಶೇಷ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ.

* ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ ಯೋಜನೆ, ಆಸರೆ, ಅಮೃತ ಯೋಜನೆ ಅನುಷ್ಠಾನ.
* ಬೆಂಗಳೂರಿನ 190 ಕಿ.ಮೀ ರಸ್ತೆ ದುರಸ್ತಿ, ವಿಸ್ತರಣೆ ಕೈಗೊಳ್ಳಲಾಗಿದೆ.

ಈ ಬಾರಿ ಎಚ್ಡಿಕೆ ಗೆಲುವಿನ ಚಾನ್ಸ್ ಹೇಗಿದೆ?

ಈ ಬಾರಿ ಎಚ್ಡಿಕೆ ಗೆಲುವಿನ ಚಾನ್ಸ್ ಹೇಗಿದೆ?

ಕನ್ನಡದಲ್ಲಿ ಸ್ಪುಟವಾಗಿ ಭಾಷಣ ಮಾಡುವ ಎಚ್ ಡಿ ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಕನ್ನಡ ನಾಡಿನ ಜನತೆ ಜತೆ ಬೆರೆತಿದ್ದರೂ ರಾಮನಗರ ಬಿಟ್ಟು ಚಿಕ್ಕಬಳ್ಳಾಪುರದಕ್ಕೆ ಬಂದು ದೊಡ್ದ ಸವಾಲು ಎದುರಿಸುತ್ತಿದ್ದಾರೆ.

ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು 2009ರಲ್ಲಿ ಸಿ. ಅಶ್ವಥನಾರಾಯಣ ಅವರ ಮೇಲೆ ಸುಲಭವಾಗಿ ಜಯ ಸಾಧಿಸಿದ್ದರು. ಈ ಬಾರಿ ಬಿ.ಎನ್ ಬಚ್ಚೇಗೌಡ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರ ನಡುವೆ ಸ್ಪರ್ಧೆಯಲ್ಲಿ ಒಕ್ಕಲಿಗ ಮತಗಳು ವಿಭಜನೆಯಾದರೆ ಮೊಯ್ಲಿ ಕೈ ಮೇಲುಗೈ ಆಗುವ ಸಾಧ್ಯತೆಯಿದೆ. ಆದರೆ, ಕುಮಾರಸ್ವಾಮಿ ಅವರು ಲೇಟ್ ಆಗಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರೂ ಲೇಟೆಸ್ಟ್ ಆಗಿ ಜನರ ಗಮನ ಸೆಳೆಯುತ್ತಿರುವುದರಿಂದ ಕುಮಾರಸ್ವಾಮಿ ಗೆಲ್ಲುವ ಛಾನ್ಸ್ ಅಧಿಕವಾಗಿದೆ ಎನ್ನಬಹುದು.

English summary
HD Kumaraswamy Profile: Politics did infiltrate his life eventually. Kumaraswamy was elected to the Lok Sabha in 1996 from Kanakpura. He contested in vain from a different constituency in 1999. In 2004, Kumaraswamy’s fortunes turned and he was elected to represent the Ramanagara constituency. Now he is trying his luck in Chikkaballapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X