ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಕೊಪೋಲೊ ಬಸ್ ಖರೀದಿ ಹಗರಣ : ತನಿಖೆಗೆ ಶಿಫಾರಸು

|
Google Oneindia Kannada News

ಬೆಂಗಳೂರು, ಜುಲೈ 15 : ಮಾರ್ಕೊಪೋಲೊ ಬಸ್ಸುಗಳನ್ನು ಖರೀದಿ ಮಾಡಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಮುಖ್ಯಕಾರ್ಯದರ್ಶಿಗಳು ತನಿಖೆ ನಡೆಸಬೇಕು ಎಂದು ವಿಧಾನಸಭೆ ಸಾರ್ವಜನಿಕ ಉದ್ಯಮಗಳ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಪರೀಕ್ಷಾರ್ಥ ಸಂಚಾರ ನಡೆಸದೆ ಕೆಎಸ್‌ಆರ್‌ಟಿಸಿಗೆ 41 ಹಾಗೂ ಬಿಎಂಟಿಸಿಗೆ 98 ಮಾರ್ಕೊಪೋಲೊ ಬಸ್ಸುಗಳನ್ನು ಖರೀದಿ ಮಾಡಲಾಗಿದೆ. ಖರೀದಿಗೆ ಮೊದಲು ಬಸ್ಸುಗಳ ಇಂಧನ ಕ್ಷಮತೆಯನ್ನು ಸರಿಯಾಗಿ ಪರಿಶೀಲನೆ ಮಾಡಲಾಗಿಲ್ಲ ಎಂದು ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ನೇತೃತ್ವದ ಸಮಿತಿ ವರದಿ ನೀಡಿದೆ. [ಗುಜರಿ ಸೇರಲಿವೆ ನಷ್ಟ ಮಾಡುವ ಮಾರ್ಕೊಪೋಲೊ ಬಸ್]

bus

ಮಂಗಳವಾರದ ವಿಧಾನಸಭೆಯಲ್ಲಿ ಈ ವರದಿಯನ್ನು ಮಂಡನೆ ಮಾಡಲಾಗಿದೆ. ಮಾರ್ಕೊಪೋಲೊ ಬಸ್ ಖರೀದಿಯಿಂದ ಕೆಎಸ್ಆರ್‌ಟಿಸಿಗೆ 81 ಲಕ್ಷ ನಷ್ಟ ಉಂಟಾಗಿದೆ ಎಂದು ವರದಿ ಹೇಳಿದೆ. ಒಟ್ಟು 142 ಬಸ್ಸುಗಳ ಖರೀದಿ ಬಗ್ಗೆ ಮುಖ್ಯಕಾರ್ಯದರ್ಶಿಗಳು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಹೇಳಿದೆ.[ಬಸ್ ಖರೀದಿ ಬಗ್ಗೆ ತನಿಖೆ]

2009ರಲ್ಲಿ ಖರೀದಿ : 2009ರಲ್ಲಿ 98 ಹವಾನಿಯಂತ್ರಿತ ಮಾರ್ಕೊಪೋಲೊ ಬಸ್‌ ಮತ್ತು 44 ಹವಾನಿಯಂತ್ರಿತ­ವಲ್ಲದ ಬಸ್ಸುಗಳನ್ನು ಖರೀದಿ ಮಾಡಲಾಗಿತ್ತು. ಇವುಗಳ ನಿರ್ವಹಣಾ ವೆಚ್ಚವೇ ಅಧಿಕವಾಗಿದ್ದರಿಂದ ಅವುಗಳನ್ನು ಗುಜರಿಗೆ ಹಾಕಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.

ಮಾರ್ಕೊಪೋಲೊ ಬಸ್ಸುಗಳಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟ ಉಂಟಾಗುತ್ತಿದೆ. ಈ ಬಸ್ಸುಗಳನ್ನು ಖರೀದಿ ಮಾಡಿರುವವರ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದರು. ಅದರಂತೆ ಈಗ ಸಮಿತಿಯೂ ತನಿಖೆಗೆ ಶಿಫಾರಸು ಮಾಡಿದೆ.

English summary
Karnataka : Public undertakings committee of state legislature has recommended chief secretary inquiry into the purchase of Marcopolo buses in 2009 for KSRTC and BMTC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X